ಕೆ ಬೆಟ್ಟಹಳ್ಳಿ ವಲಯದ ಬೇಬಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮವನ್ನು ಮುಖ್ಯ ಶಿಕ್ಷಕರು ಶ್ರೀ ಮಹದೇವಪ್ಪ ರವರ ಅಧ್ಯಕ್ಷತೆಯಲ್ಲಿ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು..ವಿದ್ಯಾರ್ಥಿಗಳಿಗೆ ತಂಬಾಕು ಇನ್ನಿತರ ಮಾದಕ ವಸ್ತುಗಳಿಂದ ಆಗುತ್ತಿರುವ ದುಷ್ಪರಿಣಾಮಗಳು ಬಗ್ಗೆ ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ದುಶ್ಚಟಕ್ಕೆ ಬಲಿಯಾಗುತ್ತಿದ್ದು ಇದರಿಂದ ಜೀವನದಲ್ಲಿ ನೆಮ್ಮದಿ ಕಂಡು ಕೊಳ್ಳಲು ಸಾಧ್ಯವಾಗುತ್ತಿಲ್ಲ ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಪ್ರಕರಣಗಳು ಕಂಡುಬರುತ್ತಿದೆ ಇದರಿಂದ ಜಾಗೃತರಾಗಿ ದುಶ್ಚಟ ಮುಕ್ತರಾಗಿ ಮಾದರಿ ವಿದ್ಯಾರ್ಥಿ ಯಾಗುವಂತೆ ಮಾರ್ಗದರ್ಶನ ನೀಡಿದರು..
ಸಂಪನ್ಮೂಲ ವ್ಯಕ್ತಿ ಚಂದ್ರಶೇಖರಯ್ಯ ನಿವೃತ್ತ ಶಿಕ್ಷಕರು ವ್ಯಸನಗಳ ಬಗ್ಗೆ ಮಾಹಿತಿ ನೀಡುತ್ತಾ ಅತಿಯಾದ ಮೊಬೈಲ್ ಗೀಳು ,ಪಾನ್ ಗಳು, ನಶೆಬರಿಸುವ ಮಾದಕ ವಸ್ತುಗಳು ಇತ್ತೀಚಿನ ದಿನಗಳಲ್ಲಿ ಬಹಳ ಸುಲಭವಾಗಿ ಮಾರುಕಟ್ಟೆ ಯಲ್ಲಿ ಸಿಗುತ್ತಿರುವುದು ಆತಂಕದ ವಿಚಾರವಾಗಿದೆ ,ಅದೇ ರೀತಿಯಲ್ಲಿ ಜಾಹಿರಾತಿನ ಮೋಹಕ್ಕೆ ಬಲಿಬಿದ್ದು ಮಕ್ಕಳು ತಂಪು ಪಾನೀಯಗಳಿಗೆ ಮಾರುಹೋಗುತ್ತಿದ್ದಾರೆ ಇದರೆಲ್ಲದರಿಂದ ಹೊರಬರಬೇಕಾದರೆ ನಮ್ಮ ದೈನಂದಿನ ದಿನಚರಿ ,ಅಭ್ಯಾಸ ಗಳನ್ನು ಬದಲಾಯಿಸಬೇಕು ಎಂದರು.. ಸಂದರ್ಭದಲ್ಲಿ ಮೇಲ್ವಿಚಾರಕರು ಉಮೇಶ್ ಶಾಲೆಯ ಶಿಕ್ಷಕರು ಜಯರಾಮು ರಮೇಶ್ ಜಗದಂಬಾ ಅಶ್ವಿನಿ ವಿನೋದ್ ಹಾಗೂ ಸೇವಾಪ್ರತಿನಿದಿ ಮಂಗಳಗೌರಿ ಜ್ಯೋತಿ ಉಪಸ್ಥಿತರಿದ್ದರು
