ಸರಕಾರಿ ಪ್ರೌಢಶಾಲೆ ಸಿದ್ದಕಟ್ಟೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Janajagurthi Vedike News

ಸರಕಾರಿ ಪ್ರೌಢಶಾಲೆ ಸಿದ್ದಕಟ್ಟೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ರೊನಾಲ್ಟ್ ಡಿಸೋಜರವರು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಶಿಬಿರಧಿಕಾರಿ ರಾಜೇಶ್ ಭಾಗವಹಿಸಿ ಮಾಹಿತಿ ನೀಡಿದರು.ಸಿದ್ದಕಟ್ಟೆಯ ಜನಜಾಗೃತಿ ವೇದಿಕೆಯ ಸದಸ್ಯರಾದ ಅರ್ಕ ಕೀರ್ತಿ ಇಂದ್ರ, ಯೋಜನಾಧಿಕಾರಿಗಳಾದ ಮಾಧವ ಗೌಡ ಸರ್, ವಲಯ ಅಧ್ಯಕ್ಷರಾದ ಸದಾನಂದ ಶೀತಲ್. ಮುಖ್ಯೋಪಾಧ್ಯಾಯರಾದ ಲೋನೊ ಲೋಬೊ. ಮೇಲ್ವಿಚಾರಕ, ಸೇವಾ ಪ್ರತಿನಿಧಿ ಅಧ್ಯಾಪಕ ವೃಂದ ಶಾಲಾ ಮಕ್ಕಳು ಭಾಗವಹಿಸಿ ಮಾಹಿತಿ ಪಡೆದುಕೊಂಡರು. 300 ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು