ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ

Janajagurthi Vedike Uncategorized

ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಸ್ಟೆಲ್ಲಾ ಕಾನ್ವೆಂಟ್ ಶಾಲೆಯಲ್ಲಿ ನಡೆಸಲಾಯಿತು. ಗೌರಿಬಿದನೂರು ನಗರ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಗೋಪಾಲ್ ಸರ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ಶಾಲಾ ಮಕ್ಕಳು ಮಾದಕ ವಸ್ತುಗಳಿಂದ ದೂರವಿರುವಂತೆ ಮಾಹಿತಿ ನೀಡಿದರು,ಬೆಂಗಳೂರು ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿಗಳಾದ ತಿಮ್ಮಯ್ಯ ನಾಯಕ್ ರವರು ಇಂದಿನ ದಿನಗಳಲ್ಲಿ ಯುವ ಜನತೆ ಮಾದಕ ವಸ್ತುಗಳ ದಾಸರು ಆಗುತ್ತಿದ್ದು, ಇದು ಅವರ ಆರೋಗ್ಯ ಹಾಗೂ ದೇಶದ ಆರ್ಥಿಕತೆಗೆ ತುಂಬಾ ಸಮಸ್ಯೆ ಉಂಟುಮಾಡುತ್ತಿದ್ದು ಇದರಿಂದ ದೂರ ಇರುವಂತೆ ಕರೆ ನೀಡಿದರು. ತಾಲ್ಲೂಕು ಯೋಜನಾಧಿಕಾರಿಗಳಾದ ನಾಗರಾಜ್ ನಾಯಕ್ ರವರು ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಜನ ಜಾಗೃತಿ ವೇದಿಕೆ ಸದಸ್ಯರಾದ ಲಕ್ಷ್ಮೀ ಯವರು ಮಕ್ಕಳು ಉತ್ತಮ ಶಿಕ್ಷಣ ಪಡೆದು ದುರಭ್ಯಾಸ ಮುಕ್ತ ಜೀವನ ನಡೆಸಲು ಶುಭ ಹಾರೈಸಿದರು. ಸ್ಟೆಲ್ಲಾ ಕಾನ್ವೆಂಟ್ ಪ್ರಾಂಶುಪಾಲರಾದ K R ಸಪ್ತ ಗಿರಿ ಸರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ವಲಯದ ಮೇಲ್ವಿಚಾರಕರಾದ ಉಷಾ ಕಾರ್ಯಕ್ರಮ ನಿರೂಪಿಸಿದರು, ಈ ಸಂದರ್ಭದಲ್ಲಿ ಸೇವಾ ಪ್ರತಿನಿಧಿ ಗಳಾದ ಹೇಮಾ, ಇಂದಿರ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.