ಕೊಪ್ಪಳ ಪ್ರಾದೇಶಿಕ ವಿಭಾಗದ ಗದಗ ಜಿಲ್ಲೆಯ ರೋಣ ತಾಲೂಕಿನ ಗಜೇಂದ್ರಘಡದಲ್ಲಿ ಮಧ್ಯವರ್ಜನ ಶಿಬಿರದ ಕುಟುಂಬ ದಿನ ಹಾಗೂ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಗೌರವಾನ್ವಿತ ಪ್ರಾದೇಶಿಕ ನಿರ್ದೇಶಕರು ಮಾರ್ಗದರ್ಶನ ನೀಡುತ್ತಾ ಯಾರು ಸೋಮಾರಿಯಾಗಿರುತ್ತರೋ ಅವರಿಗೆ ಕೆಟ್ಟ ಆಲೋಚನೆಗಳು ಅಂಟಿಕೊಳ್ಳುತ್ತದೆ, ಹಾಗಾಗಿ ದುಡಿಮೆಯನ್ನು ಜಾಸ್ತಿ ಮಾಡಿ ದುಶ್ಚಟಗಳು ದೂರವಾಗುತ್ತವೆ ಹಾಗೂ ನೀವು ಅಭಿವೃದ್ಧಿಯಾಗುತ್ತೀರಿ, ನೀವು ಭಾಗ್ಯ ಶಾಲಿಗಳಾಗಿದ್ದೀರಿ, ಸುಖ ಸಂತೋಷವಾಗಿರಲು, ಸಂತೃಪ್ತಿಯಿಂದ ಬದುಕಲು ದೇವರು ಈ ಶಿಬಿರ ಮೂಲಕ ಅವಕಾಶ ಕೊಟ್ಟಿದ್ದಾರೆ,ಶಿಬಿರದಲ್ಲಿ ಕುಡಿತ ಬಿಡುವ ಸಂಕಲ್ಪ ಮಾಡಿದ್ದೀರಿ ಇನ್ನು ಮುಂದೆ ಬೇರೆ ಬೇರೆ ಶಿಬಿರದಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಬೇಕು, ಆಗ ನೀವು ನಾಯಕರಾಗಿ ಬೆಳೆಯುತ್ತೀರಿ. ಕುಡಿತ ಅನ್ನೋದು ಸಮಾಜಕ್ಕೆ ಅಂಟಿದ ಶಾಪ ಹಾಗೂ ಆಯಾ ಊರಿನಲ್ಲೇ ಪರಿಹಾರ ಕಂಡುಕೊಳ್ಳಬೇಕು ಎನ್ನುವ ನಿಟ್ಟಿನಿಂದ ಪೂಜ್ಯರು ಸಮುದಾಯದಲ್ಲಿ ಶಿಬಿರ ನಡೆಸಲು ಅವಕಾಶ ಮಾಡಿಕೊಟ್ಟಿರುತ್ತಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಈ ಶಿಬಿರದಿಂದ ನೂರಕ್ಕೆ 80% ಜನ ಕುಡಿತ ಬಿಟ್ಟು ನೆಮ್ಮದಿ ಜೀವನ ನಡೆಸುತ್ತಿದ್ದಾರೆ, ಆದರೆ ವಾಪಸ್ ಕುಡಿದವರ ಜೀವನ ಹಾಳಾಗಿದೆ ಹಾಗಾಗಿ ಎಚ್ಚರಿಕೆಯಿಂದ ಪಾನಮುಕ್ತ ಜೀವನ ನಡೆಸಿರಿ. ಹೆಣ್ಣು ಮಕ್ಕಳು ಗಂಡನನ್ನು ಪ್ರೀತಿಸಬೇಕು, ಹೆಣ್ಣಿಗೆ ಹಠ ಇರಬಾರದು ಗಂಡಿಗೆ ಚಟ ಇರಬಾರದು. ಕುಡಿತ ಎಂಬುದು ಅತಿ ಕೆಟ್ಟವರ ಸಂಗತಿ, ಮಹಾತ್ಮ ಗಾಂಧೀಜಿ ಹೇಳಿರುವಂತೆ ಬೆಂಕಿ ದೇಹವನ್ನು ಸುಟ್ಟರೆ ಕುಡಿತ ದೇಹ ಮತ್ತು ಆತ್ಮವನ್ನು ಸುಡುತ್ತದೆ.ಕುಡಿತ ಅನ್ನೋದು ನಿಮ್ಮ ವ್ಯಕ್ತಿತ್ವಕ್ಕೆ ಒಂದು ಕಪ್ಪು ಚುಕ್ಕೆ ಬಿದ್ದ ಹಾಗೆ ಹೇಗೆ ಬಿಳಿ ವಸ್ತ್ರದ ಶರ್ಟ್ ಅನ್ನು ಧರಿಸಿದಾಗ ಕಪ್ಪು ಚುಕ್ಕಿ ಇದ್ದರೆ ಅಸಹ್ಯವಾಗಿ ಎದ್ದು ಕಾಣುವುದೋ ಹಾಗೆ ನಿಮ್ಮ ಬದುಕು ಅಸಹ್ಯವಾಗಿ ಕಾಣುತ್ತದೆ ಹಾಗಾಗಿ ಪಾನಮುಕ್ತ ಜೀವನ ನಡೆಸಿರಿ ಇಂದು ಮಾರ್ಗದರ್ಶನ ನೀಡಿದರು.ಈ ಸಂದರ್ಭದಲ್ಲಿ ಶ್ರೀ ಮ.ನಿ.ಪ್ರ.ಸ್ವ.ಜಗದ್ಗುರು ವಿಜಯ ಮಹಾಂತ ಮಹಾಸ್ವಾಮಿಗಳು ಸಂಸ್ಥಾನ ಮೈಸೂರ ಮಠ ಗಜೇಂದ್ರಗಡ ಹಾಗು ಪೂಜ್ಯ ಶ್ರೀ ಹಜರತ್ ಸೈಯದ್ ನಿಜಾಮುದ್ದಿನ್ ಶಾ ಆಶ್ರ.ಮಕನದಾರ ಗಜೇಂದ್ರಗಡ ದಿವ್ಯ ಸಾನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಹೆಚ್.ಬಿ.ಅಸೂಟಿ, ಶ್ರೀ ಶರಣಪ್ಪ ರೇವಡಿ, ಶ್ರೀ ರಾಜು ಸಾಂಗ್ಲಿಕರ್, ಶ್ರೀ ಬಾಳೋಜಿರವ್ ಬೋಸಲೇ, ಶ್ರೀ ಜಗದೀಶ್ ಕರಡಿ, ರೋಣ ತಾಲೂಕಿನ ಜನಜಾಗೃತಿ ವೇದಿಕೆ ಪದಾಧಿಕಾರಿಗಳು, ಶ್ರೀ ಮಹಾಬಲೇಶ್ವರ್ ಪಟಗಾರ್, ಶ್ರೀ ನಾಗೇಶ್ ವೈ.ಎ ಯೋಜನಾಧಿಕಾರಿಗಳು,ಊರ ಗಣ್ಯರು ಉಪಸ್ಥಿತರಿದ್ದರು. ಶಿಬಿರದಿಂದ 62 ಜನ ವ್ಯಸನ ಮುಕ್ತರಾಗಲು ಚಿಕಿತ್ಸೆ ಪಡೆದು ಪಾನ ಮುಕ್ತ ಜೀವನ ನಡೆಸಲು ಸಂಕಲ್ಪ ಮಾಡಿದರು.
