ಚಿಕ್ಕನಾಯಕನಹಳ್ಳಿ ತಾಲ್ಲೋಕಿನ ಪಾನಮುಕ್ತ ನವಜೀವನ ಸಮಿತಿ ಸದಸ್ಯರ ನವಜೀವನೋತ್ಸವ ಕಾರ್ಯಕ್ರಮ

Janajagurthi Vedike Uncategorized

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಚಿಕ್ಕನಾಯಕನಹಳ್ಳಿ-2 (ಹುಳಿಯಾರು) ತಾಲ್ಲೋಕು ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ತುಮಕೂರು-2 ಜಿಲ್ಲೆ ರವರ ಸಹಯೋಗದೊಂದಿಗೆಗಾಂಧಿ ಭವನ ಹುಳಿಯಾರು ನಲ್ಲಿ ಚಿಕ್ಕನಾಯಕನಹಳ್ಳಿ-2 (ಹುಳಿಯಾರು ) ತಾಲ್ಲೋಕಿನ ಪಾನಮುಕ್ತ ನವಜೀವನ ಸಮಿತಿ ಸದಸ್ಯರ ನವಜೀವನೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು.ಕಾರ್ಯಕ್ರಮದಲ್ಲಿ ಭಾಗವಹಿಸಿದ ಸರ್ವರನ್ನು ಹುಳಿಯಾರು ವಲಯದ ಮೇಲ್ವಿಚಾರಕರಾದ ಶ್ರೀಮತಿ ಭಾಗ್ಯಮ್ಮ ರವರು ಸ್ವಾಗತಿಸಿದರು.ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ಅಥಿತಿಗಳು ದೀಪ ಪ್ರಜ್ವಲನೆಯನ್ನು ಮಾಡುವ ಮೂಲಕ ಉದ್ಗಾಟನೆ ಮಾಡಿದರು.ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆ ಮೇಲ್ವಿಚಾರಕರಾದ ದರ್ಶನ್ ಎಂ. ಎಸ್ ಮಾತನಾಡಿ ಕಡಿಮೆ ದಿನದಲ್ಲಿ ಕಡಿಮೆ ಕರ್ಚಿನಲ್ಲಿ ಒಬ್ಬ ವ್ಯಕ್ತಿಯ ಅಂತರಂಗವನ್ನು ಭೇದಿಸಿ ಆ ವ್ಯಕ್ತಿಗೆ ಸೂಕ್ತ ಮಾಹಿತಿಯನ್ನು ನೀಡುವ ಮೂಲಕ ಒಬ್ಬ ಉತ್ತಮವಾದ ವ್ಯಕ್ತಿಗಳನ್ನಾಗಿ ರೂಪಿಸುವಂತಹ ಕಾರ್ಯಕ್ರಮವಿದ್ದರೆ ಅದು ಪೂಜ್ಯ ಡಾ. ವೀರೇಂದ್ರಹೆಗ್ಗಡೆಯವರ ಮದ್ಯವರ್ಜನ ಶಿಬಿರವೆಂದು ತಿಳಿಸಿದರು. ನವಜೀವನ ಸಮಿತಿ ಸದಸ್ಯರು ಸಂಸಾರಿಕ ಜೀವನದಲ್ಲಿ ಪರಸ್ಪರ ಹೊಂದಾಣಿಕೆಯ ಮಹತ್ವವನ್ನು ತಿಳಿದುಕೊಂಡು ಸಂಸಾರವನ್ನು ಉತ್ತಮವಾಗಿ ನಿರ್ವಹಿಸಬೇಕೆಂದು ತಿಳಿಸಿದರು. ಪ್ರತಿ ತಿಂಗಳು ಮಾಸಿಕ ಸಭೆ, ವಾರದ ಸಭೆಗಳಿಗೆ ಕಡ್ಡಾಯವಾಗಿ ಹಾಜರಾಗಬೇಕೆಂದು ತಿಳಿಸಿದರು. ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಗಾಂಧಿಸ್ಮೃತಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ತಿಳಿಸುವ ಮೂಲಕ ಸದಸ್ಯರ ಪಾನಮುಕ್ತ ಜೀವನಕ್ಕೆ ಶುಭಾಷಯಗಳನ್ನು ತಿಳಿಸಿ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಚಿಕ್ಕನಾಯಕನಹಳ್ಳಿ -2 (ಹುಳಿಯಾರು) ಯೋಜನಾಕಛೇರಿಯ ಯೋಜನಾಧಿಕಾರಿಗಳಾದ ಶ್ರೀ ರಾಮಚಂದ್ರ.ಡಿ ಸರ್ ರವರು ಮಾತನಾಡಿ ನವಜೀವನ ಸಮಿತಿ ಸದಸ್ಯರು ಕಡ್ಡಾಯವಾಗಿ ನವಜೀವನ ಸಮಿತಿಗಳ ವಾರದ ಸಭೆಗೆ ಹಾಗೂ ಮಾಸಿಕ ಸಭೆಗಳಿಗೆ ಕಡ್ಡಾಯವಾಗಿ ಹಾಜರಾಗುವ ಮೂಲಕ ಪಾನಮುಕ್ತರಾಗಿ ಪೂಜ್ಯ ಖಾವಂದರ ಪ್ರೀತಿಯ ಕಾರ್ಯಕ್ರಮದ ಯಶಸ್ಸಿನ ಪಾಲುದಾರರಾಗಬೇಕೆಂದು ತಿಳಿಸಿದರು. ಪಾನಮುಕ್ತರಾದ ಸದಸ್ಯರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಕಾರ್ಯಕ್ರಮಗಳು ಹಾಗೂ ಜನಜಾಗೃತಿ ವೇದಿಕೆಯ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನವಜೀವನ ಸಮಿತಿಯ ಸದಸ್ಯರು ಭಾಗವಹಿಸಬೇಕೆಂದು ತಿಳಿಸುವ ಮೂಲಕ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಿದರು.ಕಾರ್ಯಕ್ರಮದಲ್ಲಿ ತುಮಕೂರು-2 ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀ ದಾಸಪ್ಪ, ಶ್ರೀ ಲಕ್ಷ್ಮೀಕಾಂತ್, 2088ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ದಯಾನಂದ್,2088ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಕಿರಣ್, ಕೋಷಾಧಿಕಾರಿ ಶ್ರೀಮತಿ ಪೂಜಿತ ಮಾತನಾಡಿ ಶುಭಹಾರೖಸಿದರು.ಕಾರ್ಯಕ್ರಮದಲ್ಲಿ ಹುಳಿಯಾರು ವಲಯದ ಸೇವಾಪ್ರತಿನಿಧಿಗಳು ತಾಲ್ಲೋಕಿನ ನವಜೀವನ ಸಮಿತಿ ಸದಸ್ಯರು ಮತ್ತು ಕುಟುಂಬ ಸದಸ್ಯರು ಭಾಗವಹಿಸಿದ್ದರು.