ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಕೋಲಾರ ಜಿಲ್ಲೆ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಕೋಲಾರ ಜಿಲ್ಲೆ ಸಹಯೋಗದೊಂದಿಗೆ ರಾಜರ್ಷಿ ಪದ್ಮಭೂಷಣ ಡಾ. ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಡಾ. ಹೇಮಾವತಿ ವಿ. ಹೆಗ್ಗಡೆಯವರ ಕೃಪಾಷೀರ್ವಾದ ಹಾಗೂ ಮಾರ್ಗ ದರ್ಶನಗಳೊಂದಿಗೆ ಕೋಲಾರ ಜಿಲ್ಲಾ ಜನಜಾಗೃತಿ ವೇದಿಕೆ ಪದಾದಿಕಾರಿಗಳ ಸಭೆಯನ್ನು ಕೋಲಾರ ಯೋಜನಾಕಛೇರಿ ಸಭಾಂಗಣದಲ್ಲಿ ನಡೆಸಲಾಯಿತು.ಶ್ರೀನಿವಾಸಪುರ-2 ಯೋಜನಾ ಕಛೇರಿಯ ಯೋಜನಾಧಿಕಾರಿಗಳಾದ ಶ್ರೀ ಕಾಂತಪ್ಪ ರವರು ಕಾರ್ಯ ಕ್ರಮದಲ್ಲಿ ಭಾಗವಹಿಸಿದ ಸರ್ವರಿಗೂ ಸ್ವಾಗತವನ್ನು ಬಯಸಿದರು.ವೇದಿಕೆಯಲ್ಲಿ ಆಸೀನರಾಗಿದ್ದ ಗಣ್ಯರು ದೀಪವನ್ನು ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಗಾಟಿಸಿದರು.ಕಾರ್ಯಕ್ರಮದ ಪ್ರಾಸ್ತಾವಿಕ ನುಡಿ ಮತ್ತು ಗತ ಸಭೆಯ ವರದಿಯನ್ನು ಕೋಲಾರ ಜಿಲ್ಲಾ ಜನಜಾಗೃತಿ ವೇದಿಕೆ ಜಿಲ್ಲಾ ಕಾರ್ಯದರ್ಶಿಗಳು ಮತ್ತು ಕೋಲಾರ ಜಿಲ್ಲೆಯ ಮಾನ್ಯ ಜಿಲ್ಲಾ ನಿರ್ದೇಶಕರಾದ ಶ್ರೀ ಶಿವಾನಂದ್ ಆಚಾರ್ಯ ರವರು ಮಂಡಿಸಿ ಮಾತನಾಡಿ ಜಿಲ್ಲೆಯಲ್ಲಿ ವಾರ್ಷಿಕ ಕ್ರಿಯಾ ಯೋಜನೆಯ ಕಾರ್ಯಕ್ರಮಗಳನ್ನು ನಡೆಸಿದ್ದು ಬಾಕಿ ಇರುವ ತಾಲ್ಲೂಕಿನಲ್ಲಿ ನಡೆಸುವಂತೆ ಹಾಗೂ ಜನಜಾಗೃತಿ ವೇದಿಕೆಯ ಪದಾದಿಕಾರಿಗಳು ಸಹಕರಿಸುವಂತೆ ತಿಳಿಸಿದರುಧರ್ಮಸ್ಥಳಲ್ಲಿ ಮುಂದಿನ ಆರ್ಥಿಕ ವರದಿ ವರ್ಷದಲ್ಲಿ ಎಲ್ಲಾ ತಾಲ್ಲೋಕುಗಳಲ್ಲಿ ಜನಜಾಗೃತಿ ವೇದಿಕೆಯ ಪದಾದಿಕಾರಿಗಳ ಸಹಕಾರವನ್ನು ಪಡೆದು ಜನಜಾಗೃತಿ ವೇದಿಕೆಯ ಕಾರ್ಯಕ್ರಮಗಳನ್ನು ಬಹಳಷ್ಟು ಪರಿಣಾಮಕಾರಿಯಾಗಿ ಅನುಷ್ಠಾನವನ್ನು ಮಾಡುವುದಾಗಿ ತಿಳಿಸಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮತ್ತು ಜನಜಾಗೃತಿ ವೇದಿಕೆಯ ಸಮಗ್ರ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.ಕೋಲಾರ ಜಿಲ್ಲಾಕಛೇರಿ ವ್ಯಾಪ್ತಿಯ ಯೋಜನಾಕಛೇರಿಗಳ ಗುರಿ-ಸಾಧನಾ ವರದಿಯನ್ನು ಯೋಜನಾಕಛೇರಿವಾರು ಯೋಜನಾಧಿಕಾರಿಗಳು ವರದಿಯನ್ನು ಮಂಡಿಸಿದರು.ಕೋಲಾರ ಜಿಲ್ಲೆಯ ಯೋಜನಾಕಛೇರಿ ವ್ಯಾಪ್ತಿಯಲ್ಲಿ ನವಜೀವನ ಸಮಿತಿಗಳ ಸದಸ್ಯರ ಸಭೆಯನ್ನು ನಡೆಸಿ ತಾಲ್ಲೋಕು ಮಟ್ಟದ ನವಜೀವನ ಸಮಿತಿ ಸದಸ್ಯರ ಕಮಿಟಿ ರಚಿಸಿ ಪದಾಧಿಕಾರಿಗಳನ್ನು ಆಯ್ಕೆಮಾಡುವ ನಿಟ್ಟಿನಲ್ಲಿ 30/09/2026 ರೋಳಗೆ ತಾಲ್ಲೋಕು ಮಟ್ಟದ ಜನಜಾಗೃತಿ ವೇದಿಕೆ ಪದಾಧಿಕಾರಿಗಳು ಮತ್ತು ನವಜೀವನ ಸಮಿತಿ ಸದಸ್ಯರ ಸಭೆಯನ್ನು ನಡೆಸುವಂತೆ ಚರ್ಚಿಸಿ ತೀರ್ಮಾನಿಸಲಾಯಿತು.ಕೋಲಾರ ಜಿಲ್ಲಾ ಜನಜಾಗೃತಿ ವೇದಿಕೆಯ ಜಿಲ್ಲಾ ಖಾತೆಯ ಖರ್ಚು-ವೆಚ್ಚಗಳ ಮತ್ತು ಉಳಿಕೆ ಮೊತ್ತದ ಲೆಕ್ಕಾಚಾರದ ಮಂಡನೆಯನ್ನು ಜಿಲ್ಲಾ ಕಾರ್ಯದರ್ಶಿ/ ಜಿಲ್ಲಾ ನಿರ್ದೇಶಕರಾದ ಶ್ರೀ ಶಿವಾನಂದಆಚಾರ್ಯ ರವರು ಮಂಡಿಸಿದರು.ನವಂಬರ್ ಮೊದಲ ವಾರದಲ್ಲಿ ಕೋಲಾರ ಯೋಜನಾಕಛೇರಿ ವ್ಯಾಪ್ತಿಯಲ್ಲಿ ಮದ್ಯವರ್ಜನ ಶಿಬಿರವನ್ನು ನಡೆಸುವಂತೆ ಮತ್ತು 2027-28 ನೇ ಸಾಲಿನ ಪ್ರಥಮ ಮದ್ಯವರ್ಜನ ಶಿಬಿರವನ್ನು KGF ಯೋಜನಾಕಛೇರಿ ವ್ಯಾಪ್ತಿಯಲ್ಲಿ ನಡೆಸುವಂತೆ ಚರ್ಚಿಸಿ ನಿರ್ಣಯಿಸಲಾಯಿತು.ಕಾರ್ಯಕ್ರಮದಲ್ಲಿ ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆ ಯೋಜನಾಧಿಕಾರಿ ಶ್ರೀ ತಿಮ್ಮಯ್ಯನಾಯ್ಕ ರವರು 2026-27ನೇ ಸಾಲಿನ ವರದಿ ವರ್ಷದ ಕಾರ್ಯಕ್ರಮಗಳ ಅನುಷ್ಠಾನ & ಬಾಕಿ ಉಳಿದ ಕಾರ್ಯಕ್ರಮಗಳ ಕುರಿತು ವಿಮರ್ಶೆ ನಡೆಸಿ ಬಾಕಿಯಾದ ಕಾರ್ಯಕ್ರಮಗಳನ್ನು ಸೆಪ್ಟಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ತಿಳಿಸಿದರು. ಸುತ್ತೊಲೆ ಸಂಖ್ಯೆ 13/EDOO/2026 ರಲ್ಲಿ ತಾಲ್ಲೋಕಿಗೆ ನೀಡಿರುವ ಅನುಧಾನಗಳ ಸಮರ್ಪಕ ಬಳಕೆಯ ಬಗ್ಗೆ ಮತ್ತು ಸುತ್ತೋಲೆ ಸಂಖ್ಯೆ 44/EDOO/2026-27 ರಲ್ಲಿ ಸೂಚಿಸಿರುವಂತೆ ಅಕ್ಟೋಬರ್ ತಿಂಗಳಲ್ಲಿ ಕೋಲಾರ ಜಿಲ್ಲೆಯಲ್ಲಿ ಜಿಲ್ಲಾಮಟ್ಟದ ಗಾಂಧೀ ಸ್ಮೃತಿ ಕಾರ್ಯಕ್ರಮವನ್ನು ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರು ಮತ್ತು ವಿವಿಧ ಕ್ಷೇತ್ರದ ಗಣ್ಯರು, ಕೋಲಾರ ಜಿಲ್ಲೆಯ ಎಲ್ಲಾ ಜಿಲ್ಲಾ ವೇದಿಕೆಯ ಪದಾಧಿಕಾರಿಗಳನ್ನೊಳಗೊಂಡಂತೆ ಕೋಲಾರ ಜಿಲ್ಲೆಯಾದ್ಯಂತ ಮದ್ಯ ವ್ಯಸನರಾಗಿ ನವಜೀವನವನ್ನು ನಡೆಸುತ್ತಿರುವ ನವಜೀವನ ಸದ್ಯರಿಗೆ ಅಭಿನಂಧನೆ ಸಲ್ಲಿಸುವ ಮೂಲಕ ಅರ್ಥಪೂರ್ಣವಾದ ಕಾರ್ಯಕ್ರಮವನ್ನು ನಡೆಸುವ ಬಗ್ಗೆ ಮಾಹಿತಿಯನ್ನು ನೀಡಿದರು.ಕೋಲಾರ ಜಿಲ್ಲೆಯ ಕೋಲಾರ, ಬಂಗಾರಪೇಟೆ, ವೇಮಗಲ್, ಕೆ.ಜಿ.ಎಫ್ ಯೋಜನಾಕಛೇರಿಗಳು ಸೇರಿ 02/10/2026 ರಂದು ಕೋಲಾರ ತಾಲ್ಲೋಕಿನಲ್ಲಿ, ಮತ್ತು ಶ್ರೀನಿವಾಸಪುರ 1 ಮತ್ತು 2, ಮುಳಬಾಗಿಲು ಯೋಜನಾಕಛೇರಿಗಳು ಸೇರಿ 03/10/2026 ರಂದು ಶ್ರೀನಿವಾಸಪುರ ತಾಲ್ಲೂಕು ಗಳಲ್ಲಿ ಗಾಂಧಿ ಸ್ಮೃತಿ ಮತ್ತು ಜನಜಾಗೃತಿ ಜಾಥಾ ಕಾರ್ಯಕ್ರಮವನ್ನು ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸುವ ಮೂಲಕ ತೀರ್ಮಾನಿ ನಿರ್ಣಯಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಲಾರ ಜಿಲ್ಲೆಯ ಜಿಲ್ಲಾ ಜನಜಾಗೃತಿ ವೇದಿಕೆ ಜಿಲ್ಲಾ ಅಧ್ಯಕ್ಷರಾದ ಶ್ರೀ ಕಾಡಹಳ್ಳಿ ಶಶಿಕುಮಾರ್ ರವರು ಘತ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅಧ್ಯಕ್ಷೀಯ ನುಡಿಗಳನ್ನು ನುಡಿದರು.ಕಾರ್ಯಕ್ರಮದಲ್ಲಿ ಎಂ. ಐ. ಎಸ್ ಯೋಜನಾಧಿಕಾರಿ ಶ್ರೀ ಗಿರೀಶ್ ಕ್ಷೇತ್ರ ಯೋಜನಾಧಿಕಾರಿಗಳಾದ ಶ್ರೀ ಸಿದ್ದಗಂಗಯ್ಯ, ಶ್ರೀ ಚೇತನ್, ಶ್ರೀ ನವೀನ್, ಶ್ರೀಮತಿ ಆಶಾ, ಶ್ರೀ ಗೋಪಾಲ್, ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆ ಮೇಲ್ವಿಚಾರಕ ಶ್ರೀ ಎಂ. ಎಸ್ ದರ್ಶನ್, ಕೋಲರ ಜಿಲ್ಲೆಯ ಆಡಿಟ್ ಪ್ರಭಂಧಕ ಶ್ರೀ ರಾಜೇಗೌಡ, ಕೋಲಾರ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರುಗಳು ಜಿಲ್ಲಾ ವೇದಿಕೆ ಸಭೆಯಲ್ಲಿ ಭಾಗವಹಿಸಿದ್ದರು.
