ಕೊಪ್ಪಳ ಪ್ರಾದೇಶಿಕ ವಿಭಾಗದ ಕೊಪ್ಪಳ ಜಿಲ್ಲಾ ಜನಜಾಗೃತಿ ವೇದಿಕೆ ಸಭೆಯನ್ನು ಮಾನ್ಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಜೆ. ಚಂದ್ರಶೇಖರ್, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀ ಜನಾರ್ಧನ ಹುಲಗಿ, ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಶ್ರೀನಿವಾಸ್ ಗುಪ್ತಾ, ಶ್ರೀ ದೇವೇಂದ್ರಪ್ಪ ಬಳೂಟಗಿ, ಉಪಾಧ್ಯಕ್ಷರಾದ
ಶ್ರೀ ಸಂಗಣ್ಣ ತೆಂಗಿನಕಾಯಿ, ನಿರ್ದೇಶಕರಾದ ಶ್ರೀ ಪ್ರಕಾಶ್ ರಾವ್ ಉಪಸ್ಥಿತಿಯಲ್ಲಿ ನಡೆಯಿತು. ಸಭೆಯಲ್ಲಿ 2023-24 ನೇ ಆರ್ಥಿಕ ವರ್ಷದ ಸಾಧನೆಯ ವಿಮರ್ಶೆ, 2024-25 ನೇ ವರದಿ ವರ್ಷದ ಜನಜಾಗೃತಿ ಕಾರ್ಯಕ್ರಮಗಳ ಕ್ರಿಯಾಯೋಜನೆಯ ತಾಲೂಕುವಾರು ಹಂಚಿಕೆಯ ವಿಮರ್ಶೆ, ಜಿಲ್ಲಾ ಜನಜಾಗೃತಿಯ ಖಾತೆ ಬದಲಾವಣೆಯ, 2024-25 ರ ಮೊದಲ ತ್ರೈಮಾಸಿಕ ಅವಧಿಯ ಮಧ್ಯವರ್ಜನ ಶಿಬಿರ, ತಂಬಾಕು ಮತ್ತು ಮಾದಕ ವಸ್ತು ವಿರೋಧಿ ದಿನಾಚರಣೆ, ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ, ನವಜೀವನೋತ್ಸವ ಕಾರ್ಯಕ್ರಮ, ಅರೋಗ್ಯ ರಕ್ಷಾ ಕಾರ್ಯಕ್ರಮ, ಜನಜಾಗೃತಿ ಪದಾಧಿಕಾರಿಗಳ ಹೊಸ ಆಯ್ಕೆ, ನವಜೀವನ ಪೋಷಕರ ತರಬೇತಿ, ಸ್ವಾಸ್ಥ್ಯ ಸಂಕಲ್ಪ ತರಬೇತಿದಾರರ ತರಬೇತಿ, ಸಾಮಾಜಿಕ ಅರಣ್ಯೀಕರಣ, ಗಿಡನಾಟಿ ಕಾರ್ಯಕ್ರಮ, ಕೊಪ್ಪಳ ತಾಲೂಕಿನಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಕಾರ್ಯಕ್ರಮದ ಅನುಷ್ಠಾನ ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು, ಕ್ಷೇತ್ರ ಯೋಜನಾಧಿಕಾರಿಗಳು, ಜನಜಾಗೃತಿ ವಿಭಾಗದ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.
