ಕೊಡಗು ಜಿಲ್ಲಾ ನವ ಜೀವನ ಪೋಷಕರ ತರಬೇತಿ ಕಾರ್ಯಾಗಾರ

Janajagurthi Vedike

ಕೊಡಗು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ರಿ ಕೊಡಗು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕೊಡಗು ಜಿಲ್ಲೆ ಇದರ ಆಶ್ರಯದಲ್ಲಿ ಸೋಮವಾರಪೇಟೆ ಅರಕಲಗೂಡು ಬೆಟ್ಟದಪುರ ಪಿರಿಯಾಪಟ್ಟಣ ತಾಲೂಕಿನ ನವ ಜೀವನ ಸಮಿತಿ ಪೋಷಕರ ಸಭೆ ದಿನಾಂಕ 18/09/2026 ರಂದು ಕುಶಾಲನಗರ ಜಿಲ್ಲಾ ಕಚೇರಿ ಮತ್ತು ಮಡಿಕೇರಿ ವಿರಾಜಪೇಟೆ ತಾಲೂಕಿನ ನವಜೀವನ ಸಮಿತಿ ಪೋಷಕರ ಸಭೆಯು 19/09/2026ರಂದು ಮಡಿಕೇರಿ ಯೋಜನಾ ಕಚೇರಿಯಲ್ಲಿ ನಡೆಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ ಪಾಯಸ್ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಪೂಜ್ಯ ಖಾವಂದರು ಜನಜಾಗೃತಿ ವೇದಿಕೆಯ ಮುಖಾಂತರ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ವ್ಯಸನಮಕ್ತಗೊಳಿಸಿ ಅದರ ಅನುಪಾಲನೆಯನ್ನು ಸೇವಾ ಪ್ರತಿನಿಧಿಗಳಾದ ನಿಮಗೆ ನೀಡಿದ್ದು ಇದು ನಿಜವಾಗಿಯೂ ದೇವರ ಸೇವೆ ಮಾಡುವಂತಹ ಕಾರ್ಯ ಈ ಕೆಲಸವನ್ನು ಪ್ರಾಮಾಣಿಕವಾಗಿ ನಡೆಸಿದರೆ ಒಂದು ಕುಟುಂಬದ ಕಣ್ಣೀರು ಒರೆಸಿದ ಪುಣ್ಯ ನಮ್ಮದಾಗುತ್ತೆ ಈ ನಿಟ್ಟಿನಲ್ಲಿ ನೀವೆಲ್ಲರೂ ಕಾರ್ಯಪ್ರವೃತ್ತರಾಗಬೇಕು ಮತ್ತು ನಿಮ್ಮ ಸಾಧನೆಗೆ ವಿಶೇಷವಾದ ಅಭಿನಂದನೆಗಳು ಎಂದರು.ಜಿಲ್ಲ ನಿರ್ದೇಶಕರಾದ ಶ್ರೀ ವಿಠಲ್ ಸಾಲಿಯಾನ್ ಯವರು ಮಾತನಾಡುತ್ತಾ ನವಜೀವನ ಸಮಿತಿ ಸದಸ್ಯರ ಅನುಪಾಲನೆಯಲ್ಲಿ ಪೋಷಕರ ಪಾತ್ರ ಬಹಳ ಮುಖ್ಯವಾಗಿದೆ, ನವಜೀವನ ಸದಸ್ಯರಿಗೆ ನಿರಂತರ ಪ್ರೋತ್ಸಾಹ ಮತ್ತು ಬೆಂಬಲ ನೀಡುವುದು ಪೋಷಕರ ಕರ್ತವ್ಯವಾಗಿದೆ ಎಂದರು ಕರಾವಳಿ ಜನಜಾಗೃತಿ ವಿಭಾಗದ ಯೋಜನಾಧಿಕಾರಿಗಳಾದ ಶ್ರೀ ಗಣೇಶ್ ಆಚಾರ್ಯರವರು ಮಾತನಾಡುತ್ತಾ.ವಲಯಕ್ಕೊಂದು ನವಜೀವನ ಸಮಿತಿಗಳ ರಚನೆ ಬಗ್ಗೆ, ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ಅನುಷ್ಠಾನದ ಬಗ್ಗೆ, ನವ ಜೀವನೋತ್ಸವ ಕಾರ್ಯಕ್ರಮ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ, ಫ್ರೀ ಕಾನ್ಫರೆನ್ಸ್ ಆನ್ಲೈನ್ ಮೀಟಿಂಗ್ ಬಗ್ಗೆ, ಸದಸ್ಯರಿಗೆ ವಾಯುದ್ಯೋಗ ತರಬೇತಿ ನೀಡುವುದರ ಬಗ್ಗೆ ಯಶೋಗಾಥೆ ರಚನೆಯ ಬಗ್ಗೆ, ಸಮರ್ಪಕವಾದ ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ನವಜೀವನ ಪೋಷಕರು ತಮ್ಮ ಅನುಭವ ಅನಿಸಿಕೆಗಳನ್ನ ವ್ಯಕ್ತಪಡಿಸಿದ್ದರು.ಜಿಲ್ಲೆಯಲ್ಲಿ ಟಾಪ್ ಟೆನ್ ಶ್ರೇಣಿಗಳನ್ನು ಪಡೆದ ಸಾಧಕ ಸೇವಾ ಪ್ರತಿನಿಧಿ ಪೋಷಕರಿಗೆ ಬಹುಮಾನವನ್ನು ನೀಡಿ ಅಭಿನಂದಿಸಲಾಯಿತು.ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ನಡೆದು ಸಭೆಯ ನಿರ್ವಹಣೆಯನ್ನು ಜನಜಾಗೃತಿ ಮೇಲ್ವಿಚಾರಕರಾದ ನಿತೇಶ್ ರವರು ನಡೆಸಿದರು.