ಕೆ.ಆರ್.ನಗರ ಜಿಲ್ಲಾ ಜನಜಾಗೃತಿ ವೇದಿಕೆಯ 2026-27ನೇ ಸಾಲಿನ ದ್ವಿತೀಯ ತ್ರೈಮಾಸಿಕ ಸಭೆ

Janajagurthi Vedike Uncategorized

ಕೆ.ಆರ್.ನಗರ ಜಿಲ್ಲಾ ಜನಜಾಗೃತಿ ವೇದಿಕೆಯ 2026-27ನೇ ಸಾಲಿನ ದ್ವಿತೀಯ ತ್ರೈಮಾಸಿಕದ ಸಭೆಯು ಕೆ.ಆರ್.ನಗರ ಯೋಜನಾ ಕಚೇರಿಯ ಸಭಾಭವನದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಧನಂಜಯ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ಸ್ಥಾಪಕಾಧ್ಯಕ್ಷರಾದ ಮಾನ್ಯ ಶ್ರೀ ಹಂದನಹಳ್ಳಿ ಸೋಮಶೇಖರ್ ರವರು,ಮಾನ್ಯ ಜಿಲ್ಲಾ ನಿರ್ದೇಶಕರಾದ ಶ್ರೀಮತಿ ಮಮತಾ ರಾವ್ ಮೇಡಂರವರು ಹಾಗೂ ಏಳೂ ತಾಲೂಕುಗಳ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು, ಕ್ಷೇತ್ರ ಯೋಜನಾಧಿಕಾರಿಗಳು, ಜಿಲ್ಲಾ ಎಂ.ಐ.ಎಸ್.ಯೋಜನಾಧಿಕಾರಿಯವರು, ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿಯವರು ಭಾಗವಹಿಸಿದ್ದರು.
ಜಿಲ್ಲಾ ಪ್ರಬಂಧಕರಾದ ಶ್ರೀ ರಾಜೇಶ್ ರವರು ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿ, ಗತ ಸಭೆಯ ವರದಿಯನ್ನು ಮಂಡಿಸಿದರು.ಈ ಸಭೆಯಲ್ಲಿ ವಿಶೇಷವಾಗಿ ಅಕ್ಟೋಬರ್ 02 ರ ಗಾಂಧಿ ಜಯಂತಿ ಕಾರ್ಯಕ್ರಮ ಆಯೋಜನೆಯ ಬಗ್ಗೆ ಸುಧೀರ್ಘವಾದ ಚರ್ಚೆ ನಡೆದು, ದಿನಾಂಕ 07-10-2026ರಂದು ಶ್ರೀರಂಗಪಟ್ಟಣ ತಾಲೂಕಿನಲ್ಲಿ ಕಾರ್ಯಕ್ರಮ ಆಯೋಜನೆ ಸೇರಿದಂತೆ ಒಟ್ಟು ವ್ಯವಸ್ಥೆ ಬಗ್ಗೆ ಚರ್ಚಿಸಲಾಯಿತು. ಕೆ ಆರ್ ನಗರ ತಾಲೂಕು ಯೋಜನಾಧಿಕಾರಿ ಶ್ರೀ ಸದಾನಂದರವರು ಧನ್ಯವಾದ ನೀಡುವುದರ ಮೂಲಕ ಸಭೆ ಮುಕ್ತಾಯಗೊಂಡಿತು.