ಕಲಬುರ್ಗಿ ಜಿಲ್ಲೆಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಭೆ

Janajagurthi Vedike

ಪ್ರಾದೇಶಿಕ ವಿಭಾಗದ ಕಲಬುರ್ಗಿ ಜಿಲ್ಲೆಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಭೆಯನ್ನು ಸಭೆಯ ಅಧ್ಯಕ್ಷತೆ ವಹಿಸಿದ ಸಿ ಎನ್ ಬಾಬಳ್ಗಾವ್ . ಶ್ರೀ ದಿನೇಶ್ ಪೂಜಾರಿ ಸರ್ ಪ್ರಾದೇಶಿಕ ನಿರ್ದೇಶಕರು ಕಲ್ಬುರ್ಗಿ. ಶ್ರೀ ಗಣಪತಿ ಮಾಳಂಜಿ ಸರ್ ಜಿಲ್ಲಾ ನಿರ್ದೇಶಕರು ಸಭೆಯನ್ನು ಉದ್ಘಾಟಿಸಲಾಯಿತು ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನ ಉಪಾಧ್ಯಕ್ಷರು ಜನಜಾಗೃತಿ ವೇದಿಕೆ ಸದಸ್ಯರು ತಾಲೂಕಿನ ಎಲ್ಲಾ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು
ಅಕ್ಟೋಬರ್ ಗಾಂಧಿ ಜಯಂತಿ ಕಾರ್ಯಕ್ರಮದ ಕುರಿತು ,ನವಜೀವನೋತ್ಸವ ಕಾರ್ಯಕ್ರಮದ ಕುರಿತು,ನವ ಜೀವನ ಸಮಿತಿ ಸದಸ್ಯರ ಮಾಸಿಕ ಸಭೆಯ ಕುರಿತು ,ಬಾಕಿ ಇರುವ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮದ ಕುರಿತು,ಮದ್ಯವರ್ಜನ ಶಿಬಿರ ಕಾರ್ಯಕ್ರಮದ ಕುರಿತು (ಸೇಡಂ. ಆಳಂದ ) ಈ ಮೇಲಿನ ವಿಷಯಗಳ ಕುರಿತು ಜನಜಾಗೃತಿ ವೇದಿಕೆ ಅಧ್ಯಕ್ಷರ ಸಮ್ಮುಖದಲ್ಲಿ ಚರ್ಚಿಸಲಾಗಿದೆ.
ಮಾನ್ಯ ಪ್ರಾದೇಶಿಕ ನಿರ್ದೇಶಕರು ಕಲಬುರ್ಗಿ ಶ್ರೀ ದಿನೇಶ್ ಪೂಜಾರಿ ಸರ್ ಅವರು ಜಿಲ್ಲೆಯಲ್ಲಿ ನಡೆಯುತ್ತಿರುವ ಮದ್ಯವರ್ಜನ ಶಿಬಿರ ಕಾರ್ಯಕ್ರಮ ಬಹಳ ಅತ್ಯುತ್ತಮವಾಗಿ ನಡೆಯುತ್ತಿದ್ದು ಸಮಿತಿಯ ತುಂಬಾ ಚೆನ್ನಾಗಿ ನಿಭಾಯಿಸಿಕೊಂಡು ಶಿಬಿರವನ್ನು ನಡೆಸಿದೆ ಎಂದು ಅಭಿನಂದನೆ ತಿಳಿಸಿರುತ್ತಾರೆ ಹಾಗೂ ಮುಂದಿನ ಸಂದರ್ಭದಲ್ಲಿ ಇದೇ ರೀತಿ ಅಳಂದ ಸೇಡಂ ತಾಲೂಕಿನ ಜನಜಾಗೃತಿ ವೇದಿಕೆ ಪದಾಧಿಕಾರಿಗಳು ಉತ್ತಮ ರೀತಿಯಲ್ಲಿ ಶಿಬಿರ ನಡೆಸಲು ಸಹಕಾರ ನೀಡುವಂತೆ ಮಾಹಿತಿ ನೀಡಿದರು ಜಿಲ್ಲೆಯಲ್ಲಿ ಬಹಳ ಅತ್ಯುತ್ತಮವಾಗಿ ಜನಜಾಗೃತಿ ಕಾರ್ಯಕ್ರಮ ನಡೆಸಲು ಜನಜಾಗೃತಿ ವೇದಿಕೆ ಸದಸ್ಯರು ಬಹಳ ಮುತುವರ್ಜಿಯಿಂದ ಸೇವೆ ನೀಡಿರುವುದು ಶ್ಲಾಘನೀಯ ಎಂದು ತಿಳಿಸಿರುತ್ತಾರೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷರು ಸಿ ಏನ್ ಬಾಬಳ್ಗಾವ್ ಸರ್ ಅವರು ಜನಜಾಗೃತಿ ವೇದಿಕೆಯ ಎಲ್ಲಾ ಸದಸ್ಯರು ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮಲಾದಂತ ಸೇವೆ ಹಾಗೂ ಕಾರ್ಯಕ್ರಮ ಉತ್ತಮ ರೀತಿ ನಡೆಸಲು ಸಹಕಾರ ನೀಡುವಂತೆ ಸಲಹೆ ನೀಡಿದರು ಧರ್ಮಸ್ಥಳದ ಧರ್ಮಾಧಿಕಾರಿಗಳು ನಡೆಸುತ್ತಿರುವ ಕಾರ್ಯಕ್ರಮ ನಮಗೆ ಸಿಕ್ಕಿದ್ದು ಪುಣ್ಯದ ಕಾರ್ಯಕ್ರಮ ಆ ಕಾರ್ಯಕ್ರಮದಲ್ಲಿ ನಾವು ಭಾಗವಹಿಸಿ ಕಲ್ಬುರ್ಗಿ ಜಿಲ್ಲೆಯಲ್ಲಿ ಯಶಸ್ವಿ ಕಾರ್ಯಕ್ರಮ ನಡೆಸಲು ಸಹಕಾರ ನೀಡಲು ತಿಳಿಸಿರುತ್ತಾರೆ