ಚಿಕ್ಕೋಡಿ ಜಿಲ್ಲಾ ಜನಜಾಗೃತಿ ವೇದಿಕೆ ಮಾದರಿ ವೇದಿಕೆಯಾಗಬೇಕು* :ಶ್ರೀ ಪಾಲ್ ಮನೋಳ್ಳಿ ಪರಮ ಪೂಜ್ಯ ಖಾವಂದರು ಹಾಗೂ ಮಾತೃಶ್ರೀ ಹೇಮಾವತಿ ವೀ ಹೆಗ್ಗಡೆ ಯವರ ಶುಭಾಶಿರ್ವಾದಗಳೊಂದಿಗೆ
ಚಿಕ್ಕೋಡಿ ಮಹಾವೀರ ಸಭಾಭವನ ಗುರುವಾರ ಪೇಟೆಯಲ್ಲಿ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ (ರಿ )ಚಿಕ್ಕೋಡಿಯ ಜಿಲ್ಲೆಯ ದ್ವಿತೀಯತ್ರೈಮಾಸಿಕ ಸಭೆ”ಹಮ್ಮಿಕೊಂಡಿದ್ದು ಸಭೆಯಲ್ಲಿ ಉಪಸ್ಥಿತರಿದ್ದ JJV ಅಧ್ಯಕ್ಷರಾದ ಶ್ರೀಪಾಲ ಮುನ್ನೊಳಿ ಹಾಗೂ ನಿರ್ದೇಶಕರಾದ ಶ್ರೀ ಸುರೇಂದ್ರ. ಜಿಲ್ಲಾ ವೇದಿಕೆಯ ಪದಾಧಿಕಾರಿಗಳು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.ಸಭೆಯಲ್ಲಿ ಧಾರವಾಡ ಪ್ರಾದೇಶಿಕ ವಿಭಾಗದ ಜನಜಾಗೃತಿ ವಿಭಾಗದ ಯೋಜನಾಧಿಕಾರಿಗಳು ಮಾತನಾಡಿ ಪರಮ ಪೂಜ್ಯ ಖಾವಂದರೂ ಸಮಾಜದ ಮೇಲೆ ಇಟ್ಟುಕೊಂಡಿರುವ ಕಾಳಜಿ ಹಾಗೂ ಸಮಾಜದ ಅಭಿವೃದ್ಧಿಗಳಿಗಾಗಿ ಕೈಗೊಂಡಿರುವ ಅನೇಕ ಯೋಜನೆಗಳ ಬಗ್ಗೆ ತಿಳಿಸಿದರು, ಮತ್ತು ಜನಜಾಗೃತಿ ವೇದಿಕೆಯ ಮೂಲಕ ಇದು ವರೆಗೆ ಆ ಗಿರುವ ಜನಜಾಗೃತಿ ಕಾರ್ಯಕ್ರಮಗಳ ಬಗ್ಗೆ, ಮುಂದಿನ ದಿನಗಳಲ್ಲಿ ನಡೆಯುವ ಮದ್ಯವರ್ಜನ ಶಿಭಿರ, ಸ್ವಾಸ್ಥ್ಯಸಂಕಲ್ಪ ಹಾಗೂ ಇನ್ನಿತರ ಜನಜಾಗೃತಿ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಅನುಪಾಲನೆಯ ಕುರಿತು ಸಭೆಯಲ್ಲಿ ಅಂಕಿ ಅಂಶಗಳ ಸಮೇತ ಮಾಹಿತಿ ನೀಡಿದರು.ಶ್ರೀಪಾಲ ಮುನ್ನೊಳಿ ಮಾನ್ಯ JJV ಅದ್ಯಕ್ಷರು* ಅವರು ಮಾತನಾಡಿ ಪರಮ ಪೂಜ್ಯ ಖಾವಂದರು JJV ವೇದಿಕೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ನಮ್ಮೆಲ್ಲರ ಪುಣ್ಯ, ಪೂಜ್ಯರು ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಶಕ್ತಿಯಾಗಿ ಇವತ್ತು ನಾಡಿನಾದ್ಯಂತ ಮೆಚ್ಚುಗೆ ಪಡೆದಿರುವುದು ಶ್ಲಾಘನೀಯ , ನಮಗೆ ಸಿಕ್ಕಿರುವ ಈ ಅವಕಾಶವನ್ನು ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ JJV ವೇದಿಕೆಯ ಎಲ್ಲಾ ಕಾರ್ಯಕ್ರಮಗಳನ್ನು ಉತ್ತಮ ರೀತಿಯಲ್ಲಿ ಅನುಷ್ಠಾನಕ್ಕೆ ತಂದು ಮಾದರಿ ವೇದಿಕೆಯಾಗುವಂತೆ ನಾವೆಲ್ಲರೂ ಶ್ರಮಿಸೋಣ ಎಂದು ತಿಳಿಸಿದರು.October 02ರಲ್ಲಿ ನಡೆಯುವ ಗಾಂಧಿ ಸ್ಮೃತಿ ಮತ್ತು ಜಾತಾ ಕಾರ್ಯಕ್ರಮ ಪೂರ್ವ ತಯಾರಿಯ ಬಗ್ಗೆ ಚರ್ಚೆ ನಡೆಸಿದರು.ಬೆಳಗಾಂ ಜಿಲ್ಲೆಯಲ್ಲಿ ನಡೆದ ಪೋಷಕರ ಸಭೆ ಕುರಿತು ಉತ್ತಮ ಅಭಿಪ್ರಾಯ ವ್ಯಕ್ತ ಪಡಿಸಿದರು
ಚರ್ಚಿತ ವಿಷಯಗಳು
🌼 ತಾಲೂಕಿನ ಕಾರ್ಯದರ್ಶಿಗಳು ಅವರ ತಾಲೂಕಿನಲ್ಲಿ ನಡೆದಿರುವ ಜನಜಾಗೃತಿ ಕಾರ್ಯಕ್ರಮ ಕುರಿತು ಅಂಕಿ ಅಂಶಗಳ ಕುರಿತು ವರದಿಯನ್ನು ವಾಚಿಸಿದರು.
🌼 ನವಜೀವನ ಸಮಿತಿಗಳ ಬಲವರ್ಧನೆಗೆ ವಿಶೇಷ ಕಾಳಜಿ ವಹಿಸಬೇಕು & ಹುಕ್ಕೇರಿ ತಾಲೂಕಿನ ಮದಿ ಹಳ್ಳಿಯಲ್ಲಿ ನವ ಜೀವನ ಸಮಿತಿಯ ಕಟ್ಟಡ ನಿರ್ಮಾಣವಾಗಬೇಕು.ಎಂದು ವೇದಿಕೆಯ ಅಧ್ಯಕ್ಷರು ಪ್ರಸ್ತಾಪ ಮಾಡಿದರು
🌼 ಸ್ವಾಸ್ತ್ಯ ಸಂಕಲ್ಪ ಮತ್ತು ಮಾದಕ ವಸ್ತು ಹಾಗು ತಂಬಾಕು ವಿರೋಧಿ ದಿನಗಳು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಬಗ್ಗೆ ಚರ್ಚೆನಡೆಸಿದರು
🌼 ಯೋಜನೆಯ ಇತರ ಕಾರ್ಯಕ್ರಮಗಳ ಬಗ್ಗೆ ಜಿಲ್ಲಾ ವೇದಿಕೆಯ ಸಭೆಯಲ್ಲಿ ಮಾಹಿತಿ ನೀಡಿ ಯೋಜನೆಯಿಂದ ಸಮಾಜಕ್ಕೆ ಆಗುತ್ತಿರುವ ಲಾಭಗಳ ಬಗ್ಗೆ ತಿಳಿಸಬೇಕು.
🌼 ಚಿಕ್ಕೋಡಿ ಜಿಲ್ಲಾ ವೇದಿಕೆ ಪ್ರತ್ಯೇಕ ಖಾತೆ ತೆರೆಯುವ ಬಗ್ಗೆ 02 October ಒಳಗೆ ತೆರೆಯುವ ಬಗ್ಗೆ ಚರ್ಚೆ ನಡೆಸಿದರು
🌼 ಜಿಲ್ಲಾ ವೇದಿಕೆಯ ಸದಸ್ಯರಾದ ಬಾಳಾಸಾಬ ಸಿಂಧೆ.ಅವರು ನಿಪ್ಪಾಣಿ 02 ರಲ್ಲಿ ಆಗಿರುವ ಕೆರೆಗಳ ಪುನಶ್ಚೇತನ. ಮತ್ತು ಅಬಿವೃದ್ಧಿ ಕಾಮಗಾರಿ ಬಗ್ಗೆ ವಿವರಿಸಿದರು.ನಮ್ಮ ಭಾಗದಲ್ಲಿ 400 ವರ್ಷಗಳ ಹಿಂದಿನ ಕೆರೆಯನ್ನು ಆಯ್ಕೆ ಮಾಡಿರುವುದು ನಮಗೆ ಮತ್ತು ನಮ್ಮ ಊರಿನ ಗಣ್ಯಮಾನ್ಯರಿಗೆ ಖುಷಿ ತಂದಿದೆ. October 02 ರ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ಮಾಡುವ ಬಗ್ಗೆ ನಮ್ಮೆಲ್ಲರ ಸಹಕಾರ ಇದೆ ಎಂದು ತಿಳಿಸಿದರು.
🌼 ಮಾದೇವ ಬರಗಾಲೆ ಯವರು ನಮ್ಮ ನಿಪ್ಪಾಣಿ 01 ರಲ್ಲಿ ಆಯ್ಕೆ ಮಾಡಿರುವ ಕೆರೆಯ ಬಗ್ಗೆ ವಿವರಿಸಿದರು.ಹಾಗೂ ಕೆರೆಯ ಅಂಗಳದಲ್ಲಿ ಗಿಡ ನಾಟಿ ಕುರಿತು ವಿವರಿಸಿದರು October 02 ಕಾರ್ಯಕ್ರಮ ಮಾಡುವ ನಮ್ಮೆಲ್ಲರ ಸಹಕಾರ ಇದೆ ಎಂದು ತಿಳಿಸಿದರು
🌼 ಜಿಲ್ಲಾ ಕಾರ್ಯ ಸದಸ್ಯರು ಮಾತನಾಡಿ ವೇದಿಕೆಯ ಸದಸ್ಯರಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಮತ್ತು ಪೂಜ್ಯರ ಮತ್ತು ಕ್ಷೇತ್ರದ ಸಮಾಜ ಕಲ್ಯಾಣ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ನೀಡಿದರು.ರಾಜ್ಯದಲ್ಲಿ 1000 ಹೆಚ್ಚಿನ ಕೆರೆಗಳ ಪುನಶ್ಚೇತನ ಆಗಿದ್ದು ನಮ್ಮ ಜಿಲ್ಲೆಯಲ್ಲಿ ಪ್ರಸ್ತುತ ವರ್ಷ ನಿಪ್ಪಾಣಿ ಭಾಗದಲ್ಲಿ ಈಗಾಗಲೇ ಆಯ್ಕೆ ಮಾಡಿರುವ ಕೆರೆಯ ಕುರಿತು ವಿವರಿಸಿದರು.ನಮ್ಮ ಯೋಜನೆಯಲ್ಲಿ ದಿನದ ಸುದ್ಧಿ ಪ್ರಸಾರ ಆಗುತ್ತಿದ್ದು 03 ರಿಂದ 04 ನಿಮಿಷ ರಾಜ್ಯದ ವಿವಿಧ ಬಾಗದಲ್ಲಿ ಯೋಜನೆಯ ಕಾರ್ಯಕ್ರಮ ಕುರಿತು ಪ್ರಸಾರ ಆಗುತ್ತಿದೆ.ನಮ್ಮ ವೇದಿಕೆಯ ಸದಸ್ಯರು ವೀಕ್ಷಣೆ ಮಾಡಲು ತಿಳಿಸಿದರು. ಪೂಜ್ಯರು ಶಿವಮೊಗ್ಗ ಜಿಲ್ಲೆಯಲ್ಲಿ ಕಾಡಿನ ಪ್ರಾಣಿಗಳಿಗೆ ನೀರಡಿಕೆ ನೀಗಿಸಲು ಕಾಡಿನಲ್ಲಿ ಕೆರೆ ಆಯ್ಕೆ ಮಾಡಿ ಪುನಶ್ಚೇತನ ಮಾಡಿ. ಇವತ್ತು ರಾಜ್ಯದಲ್ಲಿ ಕಾಡು ಪ್ರಾಣಿಗಳಿಗೆ ಅನುಕೂಲ ಆಗುವಂತೆ 25 ಕೆರೆ ನಿರ್ಮಾಣ ಕಾರ್ಯ ಆಗಿರುತ್ತದೆ. ಪೂಜ್ಯರು ಕಾಡಿನಲ್ಲಿ ಹಣ್ಣಿನ ಗಿಡ ನಾಟಿ ಮಾಡುವ ಕಾರ್ಯ ಕೈಗೊಂಡಿದು.ನಮ್ಮ ಜಿಲ್ಲೆಯ ನಿಪ್ಪಾಣಿ ತಾಲೂಕಿನ 30000/ ಅನುದಾನದಲ್ಲಿ ಹಣ್ಣಿನ ಗಿಡ ವಿತರಣೆ ಮಾಡಲಾಗಿದೆ . October 02 ಒಂದು ಮಾದರಿಯ ಕಾರ್ಯಕ್ರಮ ಮಾಡುವ ಬಗ್ಗೆ ಚರ್ಚೆಮಾಡಿದರು.ಸಮುದಾಯಕ್ಕೆ ಸಂಬಂಧಿಸಿದ ಕಾರ್ಯಕ್ರಮ ಕುರಿತು ವಿವರಿಸಿದರು.
ವೇದಿಕೆಯ ಅಧ್ಯಕ್ಷರಾದ ಶ್ರೀಪಾಲ್ ಮುನ್ನೊಳ್ಳಿ ಸರ್ ರವರು.ಮಾತನಾಡಿ01.October 02 ರಕಾರ್ಯಕ್ರಮಕ್ಕೆ ನವಜೀವನ ಸಮಿತಿಯ ಸದಸ್ಯರನ್ನು ಇನ್ವಾಲ್ ಮಾಡುವ ಬಗ್ಗೆ ತಿಳಿಸಿದರು.
02.ಗಾಂಧಿ ಸ್ಮೃತಿ ಕಾರ್ಯಕ್ರಮ ಮಾಡುವ ಬಗ್ಗೇ ಹುಕ್ಕೇರಿ.ನಿಪ್ಪಾಣಿ 01 ನವಲಿ ಹಾಲ ಮಾಡುವ ಬಗ್ಗೆ ಚರ್ಚೆ ನಡೆಸಿದರು. ಸ್ಥಳದ ಆಯ್ಕೆ ಬಗ್ಗೆ ಮತೊಮ್ಮೆ ಸ್ಥಳ ಪರಿಶೀಲಿಸಿ ಆಯ್ಕೆ ಮಾಡುವ ಬಗ್ಗೇ ತಿಳಿಸಿದರು.
03. ಬೇಡಿಕೆಹಾಲ ಕೆರೆಯ ಬಗ್ಗೆ ಪೂಜ್ಯರು ಮಂಜೂರುಮಾಡಿರುವ ಅನುಧಾನಗಳ ಬಗ್ಗೆ ಶ್ಲಾಘನೀಯ ಎಂದು ಹೇಳಿದರು
4. ಚಿಕ್ಕೋಡಿ ವೇದಿಕೆ ಮಾದರಿಯ ವೇದಿಕೆ ಆಗಬೇಕು ಎಂದು ತಿಳಿಸಿದರು
5. ಶಾಲೆಗಳಲ್ಲಿ ವ್ಯಸನ ಮುಕ್ತ ಜಾತಾ ಮಾಡುವ ಬಗ್ಗೆ ಚಾಲನೆ ನೀಡಬೇಕು ಎಂದು ತಿಳಿಸಿದರು
6. ಜಿಲ್ಲೆಯ ಇನ್ನೂ ಒಂದು ಶಿಬಿರ ಚಿಕ್ಕೋಡಿಯಲ್ಲಿ ಬಾಕಿ ಇದ್ದು ಉತ್ತಮ ರೀತಿಯಲ್ಲಿ ಮಾಡುವ ಬಗ್ಗೆ ತಿಳಿಸಿದರು
ಶ್ರೀಪಾಲ ಮುನ್ನೊಳಿ ಸ್ಥಾಪಕ ಅಧ್ಯಕ್ಷರು JJV ಚಿಕ್ಕೋಡಿ,ಶ್ರೀ P G ಕೊಣ್ಣೂರು ಮತ್ತು ಶ್ರೀಮತಿ ಲಕ್ಷ್ಮೀ ಮಗದುಮ್ ಉಪಾದ್ಯಕ್ಷರು JJV ಚಿಕ್ಕೋಡಿ,ಶ್ರೀ ಮಹಾದೇವ ಬರಗಾಲೆ ಕೋಶಾಧಿಕಾರಿಗಳು JJV ಚಿಕ್ಕೋಡಿ,*
ಈ ಸಂದರ್ಭ ಸಂಕೇಶ್ವರ ತಾಲೂಕಿನ ಯೋಜನಾಧಿಕಾರಿ ವಿನಾಯಕ್ ಕಕಾಂಬಿಯವರು ಸಭೆಯನ್ನ ನಿರೂಪಿಸಿ ,ಚಿಕ್ಕೋಡಿ ತಾಲೂಕಿನ ಯೋಜನಾ ಅಧಿಕಾರಿಗಳು ಎಲ್ಲರನ್ನೂ ಸ್ವಾಗತಿಸಿದರು. ನಿಪ್ಪಾಣಿ ತಾಲೂಕಿನ ಯೋಜನಾಧಿಕಾರಿ ಮಂಜುನಾಥ್ ರವರು ವಂದಿಸಿದರು. ಜಿಲ್ಲಾ ಆಡಿಟ್ ಪ್ರಬಂಧಕ ಗೋಪಾಲ್ ಸಹಕರಿಸಿದರು*
