ಪರಮಪೂಜ್ಯ ರಾಜರ್ಷಿ ಡಾII ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಡಾII ಹೇಮಾವತಿ ವಿ. ಹೆಗ್ಗಡೆಯವರ ಯವರ ಕೃಪಾಶೀರ್ವಾದಗಳೊಂದಿಗೆ
2125ನೇ ಮದ್ಯವರ್ಜನ ಶಿಬಿರ ವ್ಯವಸ್ಧಾಪನ ಸಮಿತಿ ಬೆಳ್ಳಾವಿ ವಲಯ, ಇವರ ಸಂಯುಕ್ತ ಆಶ್ರಯದಲ್ಲಿಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ತುಮಕೂರು ಗ್ರಾಮಾಂತರ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿ, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ತುಮಕೂರು -1 ಜಿಲ್ಲೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಇವರ ಮಾರ್ಗದರ್ಶನದೊಂದಿಗೆ.ಶ್ರೀ ಕಾರದೇಶ್ವರ ಮಠ. ಬೆಳ್ಳಾವಿ, ಶ್ರೀ ಚನ್ನಕೇಶವ ಕಲ್ಯಾಣ ಮಂಟಪ. ಬೆಳ್ಳಾವಿ, ಜೆ.ಸಿ.ಐ ತುಮಕೂರು, ರೋಟರಿ ಕ್ಲಬ್ ತುಮಕೂರು, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಬೆಳ್ಳಾವಿ ವಲಯ, ನವಜೀವನ ಸಮಿತಿಗಳು ತುಮಕೂರು ತಾಲ್ಲೋಕು ಇವರ ಸಹಕಾರದೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲ್ಯಾಲ, ಉಜಿರೆ,ಬೆಳ್ತಂಗಡಿ ಇದರ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ 2125ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಸಮಾರಂಭವು ಶ್ರೀ ಚನ್ನಕೇಶವ ಕಲ್ಯಾಣ ಮಂಟಪ ಬೆಳ್ಳಾವಿಯಲ್ಲಿ ಜರುಗಿತು.ಶ್ರೀ ಸಂದೇಶ್ ಪಿ. ಬಿ ಯೋಜನಾಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ತುಮಕೂರು ಗ್ರಾಮಾಂತರ ರವರು ಸರ್ವರಿಗೂ ಸ್ವಾಗತವನ್ನು ಬಯಸಿದರು.
ಶ್ರೀ ತಿಮ್ಮಯ್ಯನಾಯ್ಕ ಯೋಜನಾಧಿಕಾರಿ ಜನಜಾಗೃತಿ ವೇದಿಕೆ ಪ್ರಾದೇಶಿಕ ವಿಭಾಗ ಬೆಂಗಳೂರು ಇವರು ಮಾತನಾಡಿ ಕಡಿಮೆ ಖರ್ಚಿನಲ್ಲಿ ಕಡಿಮೆ ಸಮಯದಲ್ಲಿ ಒಬ್ಬ ವ್ಯಕ್ತಿಯ ಅಂತರಂಗವನ್ನು ಭೇದಿಸುವ ಮೂಲಕ ಮನಃ ಪರಿವರ್ತನೆಯನ್ನು ಮಾಡುವಂತಹ ಪ್ರಕ್ರಿಯೆಯೆ ಪೂಜ್ಯರ ಮದ್ಯವರ್ಜನ ಶಿಬಿರ ಎಂದು ತಿಳಿಸುವ ಮೂಲಕ ಜನಜಾಗೃತಿ ವೇದಿಕೆ ಪ್ರಾರಂಭ, ಜನಜಾಗೃತಿ ವೇದಿಕೆ ಮೂಲಕ ಸಾಮಾಜಿಕ ಆಂದೋಲನ, ಮದ್ಯವರ್ಜನ ಶಿಬಿರ ಅನುಷ್ಠಾನ, ಮದ್ಯವರ್ಜನ ಶಿಬಿರದ ರೂಪುರೇಷೆ, ಮದ್ಯವರ್ಜನ ಶಿಬಿರದ ದೈನಂದಿನ ದಿನಚರಿ ಕಾರ್ಯಕ್ರಮಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.ವೇದಿಕೆಯಲ್ಲಿ ಆಸೀನರಾಗಿದ್ದ ಗಣ್ಯಮಾನ್ಯರು ದೀಪ ಪ್ರಜ್ವಲನೆಯನ್ನು ಮಾಡುವ ಮೂಲಕ ಕಾರ್ಯಕ್ರಮದ ಉದ್ಗಾಟನೆಯನ್ನು ನೆರವೇರಿಸಿದರು.ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಶ್ರೀ ಬೆಳ್ಳಿ ಲೋಕೇಶ್, ಮಾಲೀಕರು ಬೆಳ್ಳಿ ಬ್ಲಡ್ ಬ್ಯಾಂಕ್ ತುಮಕೂರು ಮಾತನಾಡಿ ಇಂದು ನಮ್ಮ ಸಮಾಜದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಮದ್ಯವ್ಯಸನಿಗಳಾಗಿದ್ದು ಇಂದು ಕಿಡ್ನಿ ಮತ್ತು ಕರುಳು ರೋಗಗಳಿಗೆ ತುತ್ತಾಗುತ್ತಿರುವುದು ದುರಾದೃಷ್ಟಕರವಾಗಿದೆ ಎಂದು ತಿಳಿಸಿದರು. ಮದ್ಯ ಪ್ರಿಯರು ವಿನಾ ಕಾರಣ ಸರಕಾರಗಳ ಮೇಲೆ ದೂರುವುದನ್ನು ಬಿಟ್ಟು ಇಂದು ನಾನು ಮದ್ಯ ಮುಕ್ತನಾದರೆ ನಾಳೆಯದಿನ ನನ್ನ ಕುಟುಂಬ ನೆಮ್ಮದಿಯ ಜೀವನವನ್ನು ನಡೆಸಲು ದಾರಿದೀಪವಾಗತ್ತದೆಂಬುದನ್ನು ಅರಿತು ಸ್ವತಃ ತನ್ನ ಮನಃ ಪರಿವರ್ತನೆಯನ್ನು ತಾನೇ ಮಾಡಿಕೊಳ್ಳುವಂತಹ ಅದ್ಬುತವಾದ ಚಿಂತನೆಗಳನ್ನು ಮಾಡಿ ಕಾರ್ಯಕ್ರಮವನ್ನು ಅನುಷ್ಟಾನವನ್ನು ಮಾಡಿ ಇಂದು ಲಕ್ಷಾಂತರ ಕುಟುಂಬದ ಸದಸ್ಯರು ಮದ್ಯಮುಕ್ತರಾಗಿ ತಮ್ಮ ಸಂಸಾರದ ಆದಾಯದ ಮೂಲವನ್ನು ಹೆಚ್ಚಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿ ಸಮಾಜದ ಗಣ್ಯ ವ್ಯಕ್ತಿಯಾಗಿ ಬಾಳುವಂತಹ ಬದುಕನ್ನು ಕರುಣಿಸಿದಂತಹ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರ ಕಾರ್ಯ ಷ್ಲಾಘನೀಯ ವಾದದ್ದೆಂದು ತಿಳಿಸುವ ಮೂಲಕ ಶುಭ ನುಡಿಗಳನ್ನು ನುಡಿದರು.
ಕಾರ್ಯಕ್ರಮದಲ್ಲಿ ಶ್ರೀ ಕಾಮರಾಜ್ ಅಧ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ, ತುಮಕೂರು-1 ಜಿಲ್ಲೆ, ಶ್ರೀ ಮೃತ್ಯುಂಜಯ(ಜಯಣ್ಣ) ಮಾಲೀಕರು ಶ್ರೀ ಚನ್ನಕೇಶವ ಕಲ್ಯಾಣ ಮಂಟಪ ಬೆಳ್ಳಾವಿ, ಶ್ರೀಮತಿ ವೇದಾವತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬೆಳ್ಳಾವಿ, ಶ್ರೀ ಶಿವಕುಮಾರ್ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಕಾಟೇನಹಳ್ಳಿ, ಶ್ರೀ ಶ್ರೀನಿವಾಸ್ ಗೌರವ ಅಧ್ಯಕ್ಷರು ಜೆ ಸಿ ಐ ತುಮಕೂರು, ಶ್ರೀಮತಿ ಮಮತಾರಾಜ್ ಅಧ್ಯಕ್ಷರು ಜೆ ಸಿ ಐ ತುಮಕೂರು, ಇವರುಗಳು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.ಶ್ರೀ ಉಮೇಶ್ ಜಿ.ಸಿ ಅಧ್ಯಕ್ಷರು 2125ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಬೆಳ್ಳಾವಿ ಇವರು ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮದ ಕುರಿತು ಅಧ್ಯಕ್ಷೀಯ ಮಾತುಗಳನ್ನಾಡಿದರು.ಕಾರ್ಯಕ್ರಮದಲ್ಲಿ ಶ್ರೀ ರಮೇಶ್ ಶಿಭಿರಾಧಿಕಾರಿ, ಶ್ರೀಮತಿ ನೇತ್ರಾವತಿ ಆರೋಗ್ಯ ಸಹಾಯಕರು, ಶ್ರೀ ದರ್ಶನ್ ಎಂ. ಎಸ್ ಮೇಲ್ವಿಚಾರಕರು ಜನಜಾಗೃತಿ ಪ್ರಾದೇಶಿಕ ವಿಭಾಗ ಇವರು ಉಪಸ್ಥಿತರಿದ್ದರು.ತುಮಕೂರು ಗ್ರಾಮಾಂತರ ತಾಲ್ಲೋಕಿನ ಎಲ್ಲಾ ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳು, ವಲಯದ ಸೇವಾಪ್ರತಿನಿಧಿಗಳು, ಒಕ್ಕೂಟದ ಅಧ್ಯಕ್ಷರು / ಪದಾಧಿಕಾರಿಗಳು, ಪ್ರಗತಿಬಂಧು ಸ್ವ-ಸಹಾಯ ಸಂಘದ ಸದಸ್ಯರುಗಳು, ನವಜೀವನ ಸಮಿತಿ ಸದಸ್ಯರುಗಳು ಮತ್ತು ಸಾರ್ವಜನಿಕರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.ತುಮಕೂರು ಗ್ರಾಮಾಂತರ ಯೋಜನಾಕಛೇರಿಯ ಕೃಷಿ ಮೇಲ್ವಿಚಾರಕರಾದ ಶ್ರೀ ರಾಘವೇಂದ್ರ ಸರ್ವರಿಗೂ ವಂದಿಸಿದರು. ಬೆಳ್ಳಾವಿ ವಲಯದ ಮೇಲ್ವಿಚಾರಕರಾದ ಶ್ರೀ ಮನೋಜ್ ಹೆಗ್ಗಡೆ ಕಾರ್ಯಕ್ರಮದ ನಿರ್ವಹಣೆಯನ್ನು ಮಾಡಿದರು.
