ಕಲ್ಬುರ್ಗಿ ಜಿಲ್ಲೆಯ *ಸೇಡಂ ತಾಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸೇಡಂ ತಾಲೂಕು ವ್ಯಾಪ್ತಿಯ ಸೇಡಂ ತಾಲೂಕು ಬಂದಿಗಳ ಉಪ ಕಾರಾಗೃಹದಲ್ಲಿ “ವಿಶ್ವ ತಂಬಾಕು ವಿರೋಧಿ ದಿನಾಚರಣೆ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಜನಜಾಗೃತಿ ಸದಸ್ಯರು ಶ್ರೀಯುತ ಕಾಶೀನಾಥ್ ದೊಡ್ಡಮನಿ ಅವರು , ಉಪ ಕಾರಾಗೃಹದ ಅಧಿಕ್ಷಕರಾದ ಶ್ರೀಯುತ ವೀರಪ್ಪ ಎಂ ನಾಯಕ ಅವರು,ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳು ಹಾಗೂ ವಕೀಲರಾದ ಶ್ರೀಯುತ ಎಸ್ ಎಸ್ ಅವಟಿ ಅವರು ಹಾಗೂ ಮಾನ್ಯ ತಾಲೂಕು ಯೋಜನಾಧಿಕಾರಿಗಳಾದ ಶ್ರೀಯುತ ಮಂಜುನಾಥ್ ಎಸ್ ಜಿ ಅವರು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ವೇದಿಕೆಯಲ್ಲಿರುವ ಗಣ್ಯರು, ಅಧಿಕಾರಿ ವರ್ಗದವರು ಸಸಿ ನಿರುಣಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು .
