ಹೊಸನಗರ ತಾಲೂಕಿನ ಸಾಧಕ ನವಜೀವನ ಸದಸ್ಯರ ಸಮ್ಮಿಲನ ಕಾರ್ಯಕ್ರಮ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ.) ಹೊಸನಗರ ಮತ್ತು ಜನಜಾಗೃತಿ ವೇದಿಕೆ ಹೊಸನಗರ ವತಿಯಿಂದ ಚಿತ್ರದುರ್ಗ ಪ್ರಾದೇಶಿಕ ವಿಭಾಗದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಾಧಕ ನವಜೀವನ ಸದಸ್ಯರ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀ ಎನ್. ಆರ್. ದೇವಾನಂದ್ ರವರು ವಹಿಸಿದರು. ಕಾರ್ಯಕ್ರಮವನ್ನು ತಾಲೂಕು ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀ ಗುರಣ್ಣ ಹೆಬ್ಬಾಳ ರವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆಯ ರಾಜ್ಯ ಕಾರ್ಯದರ್ಶಿಗಳಾದ ಶ್ರೀ ವಿವೇಕ್ ವಿ. ಪಾಯಸ್, ಚಿತ್ರದುರ್ಗ ಪ್ರಾದೇಶಿಕ ವಿಭಾಗದ ನಿರ್ದೇಶಕರಾದ ಶ್ರೀಮತಿ ಗೀತಾ, ಶ್ರೀ ಸದಾಶಿವ ಶೆಟ್ಟಿ, ಜಿಲ್ಲಾ ವೇದಿಕೆ ಸದಸ್ಯರಾದ ಶ್ರೀ ನಾರಾಯಣ ಕಾಮತ್, ಶ್ರೀ ಮೋಹನ್ ಶೆಟ್ಟಿ, ಶ್ರೀಮತಿ ನಾಗರತ್ನ ದೇವರಾಜ್, ಶ್ರೀಮತಿ ಶಶಿಕಲಾ ಮಲ್ಲಪ್ಪ, ತಾಲೂಕು ಯೋಜನಾಧಿಕಾರಿ ಶ್ರೀ ಪ್ರದೀಪ್ ಕುಮಾರ್, ಜನಜಾಗೃತಿ ವೇದಿಕೆ ಯೋಜನಾಧಿಕಾರಿ ಶ್ರೀ ನಾಗರಾಜ್ ಕುಲಾಲ್, ಮೇಲ್ವಿಚಾರಕರಾದ ಶ್ರೀ ರುದ್ರಪ್ಪ ಹೂಗಾರ್, ಆರೋಗ್ಯ ಸಹಾಯಕರಾದ ಶ್ರೀಮತಿ ಸೌಮ್ಯ, ಯೋಜನೆಯ ಕಾರ್ಯಕರ್ತರು, ನವಜೀವನ ಸಮಿತಿ ಸದಸ್ಯರು ಮತ್ತು ಪೋಷಕರು ಉಪಸ್ಥಿತರಿದ್ದರು.