ಹೆಬ್ರಿ ತಾಲೂಕು ಜನಜಾಗೃತಿ ವೇದಿಕೆ ಪದಾಧಿಕಾರಿಗಳ ಸಭೆ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ.) ಹೆಬ್ರಿ ತಾಲೂಕು ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಹೆಬ್ರಿ ತಾಲೂಕು ಸಹಯೋಗದೊಂದಿಗೆ ಹೆಬ್ರಿ ಜನಜಾಗೃತಿ ವೇದಿಕೆ ಪದಾಧಿಕಾರಿಗಳ ಸಭೆಯನ್ನು ತಾಲೂಕು ವೇದಿಕೆ ಅಧ್ಯಕ್ಷರಾದ ಶ್ರೀ ನೀರೆ ಕೃಷ್ಣ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಲ್ಲಾ ಕಾರ್ಯದರ್ಶಿಗಳು, ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು, ಕ್ಷೇತ್ರ ಯೋಜನಾಧಿಕಾರಿಗಳು ಹಾಗೂ ಎಲ್ಲಾ ವಲಯ ಅಧ್ಯಕ್ಷರ ಉಪಸ್ಥಿತಿಯಲ್ಲಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು. ಯೋಜನೆಯ ನಿರ್ದೇಶಕರು/ಜಿಲ್ಲಾ ಕಾರ್ಯದರ್ಶಿಗಳು ಶ್ರೀ ನಾಗರಾಜ್ ಶೆಟ್ಟಿ ರವರು ಯೋಜನೆಗೆ ಜನಜಾಗೃತಿ ಪದಾಧಿಕಾರಿಗಳ ಸೇವೆಗಳು ಅಮೋಘವಾದದ್ದು ಎನ್ನುತ್ತಾ ನವಜೀವನ ಸಮಿತಿಗಳನ್ನು ಬಲಪಡಿಸುವುದರ ಬಗ್ಗೆ ಸೂಕ್ತ ಮಾಹಿತಿ ನೀಡಿದರು. ಈ ಸಂದರ್ಭ ನವಜೀವನ ಪೋಷಕರ ಕರ್ತವ್ಯ ನಿರ್ವಹಣೆಯ ಕುರಿತು, ವಲಯಕ್ಕೆ ಒಂದು ನವಜೀವನ ಸಮಿತಿ ರಚನೆಯ ಕುರಿತು ಚರ್ಚಿಸಲಾಯಿತು ಮತ್ತು ನವಜೀವನ ಸೇವಾ ಪ್ರತಿನಿಧಿ ಪೋಷಕರು ತಮ್ಮ ಅನುಭವ ಅನಿಸಿಕೆಗಳನ್ನು ಹಂಚಿಕೊಂಡರು. ತಾಲೂಕಿನಲ್ಲಿ ಒಟ್ಟು ಆರು ವಲಯಗಳಿದ್ದು ಒಟ್ಟು 11 ನವಜೀವನ ಸಮಿತಿಗಳು ಸಕ್ರಿಯವಾಗಿ ಇದೆ. ಇವುಗಳ ಅನುಪಾಲನೆಯನ್ನು, ವಾರದ ಸಭೆಗಳನ್ನು, ಮಾಸಿಕ ಭಜನೆ ಪೂಜೆಗಳನ್ನು, ನವಜೀವನ ಸಮಿತಿ ಪೋಷಕರು ಸಮರ್ಪಕವಾಗಿ ನಿರ್ವಹಿಸುತ್ತಿದ್ದಾರೆ. ತಾಲೂಕು ಜನಜಾಗೃತಿ ವೇದಿಕೆ ಪದಾಧಿಕಾರಿಗಳ ಅಂತಿಮ ಪಟ್ಟಿ ಸಭೆಯಲ್ಲಿ ಇಟ್ಟು ಮಂಜೂರು ಮಾಡಲಾಯಿತು. ಒಟ್ಟು 41 ಸದಸ್ಯರು ಸಕ್ರಿಯರಾಗಿದ್ದು ಜನಜಾಗೃತಿ ಕಾರ್ಯಕ್ರಮಗಳಿಗೆ ಪೂರಕವಾದ ಸಹಕಾರ ನೀಡುತ್ತಿದ್ದಾರೆ. 2024-25 ನೇ ಸಾಲಿನ ಸಮಗ್ರ ಕಾರ್ಯಕ್ರಮದ ಅನುಷ್ಠಾನದ ವರದಿಯನ್ನು ಕ್ಷೇತ್ರ ಯೋಜನಾಧಿಕಾರಿಗಳಾದ ಶ್ರೀಮತಿ ಲೀಲಾವತಿ ರವರು ಮಂಡಿಸಿದರು. 2024-25 ನೇ ಸಾಲಿನ ಯೋಜನೆಯ ಅನುದಾನದ ಕಾರ್ಯಕ್ರಮಗಳ ಅನುಷ್ಠಾನದ ಕುರಿತು ಕರಾವಳಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿಗಳಾದ ಶ್ರೀ ಗಣೇಶ್ ಆಚಾರ್ಯ ರವರು ಮಾಹಿತಿ ನೀಡಿದರು.