ಚಿಕ್ಕೋಡಿ 2 ಯೋಜನಾ ವ್ಯಾಪ್ತಿಯಲ್ಲಿ ನವಜೀವನೋತ್ಸವ ಕಾರ್ಯಕ್ರಮ

Janajagurthi Vedike News

ಧಾರವಾಡ ಪ್ರಾದೇಶಿಕ ವಿಭಾಗದ ಚಿಕ್ಕೋಡಿ ಜಿಲ್ಲಾ ವ್ಯಾಪ್ತಿಯ ಚಿಕ್ಕೋಡಿ 2 ತಾಲೂಕಿನಲ್ಲಿ ನಡೆದ ನವಜೀವನ ಸದಸ್ಯರ ನವಜೀವನೋತ್ಸವ ಹಾಗೂ ಸಾಮೂಹಿಕ ಬಿಲ್ವಾರ್ಪಣೆ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀಯುತ ಅಜಯ್ ಸೂರ್ಯವಂಶಿ ರವರು ದೀಪ ಬೆಳಗಿಸುವ ಮೂಲಕ ನೆರವೇರಿಸಿ ಪೂಜ್ಯರು ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಹಮ್ಮಿಕೊಂಡಿರುವ ಎಲ್ಲಾ ಕಾರ್ಯಕ್ರಮಗಳು ಅರ್ಥಪೂರ್ಣವಾದಂತ ಕಾರ್ಯಕ್ರಮಗಳು ಅದರಲ್ಲಿ ಮದ್ಯವರ್ಜನ ಶಿಬಿರ ಎನ್ನುವಂಥದ್ದು ಯೋಜನೆಯಲ್ಲಿ ವಿಶಿಷ್ಟ ಮತ್ತು ವಿಶೇಷ ಕಾರ್ಯಕ್ರಮ. ಈ ಕಾರ್ಯಕ್ರಮದ ಅಡಿಯಲ್ಲಿ ಭಾಗವಹಿಸಿ ಪಾನಮುಕ್ತರಾದ ನೀವೆಲ್ಲರೂ ಕೂಡ ಪುಣ್ಯವಂತರು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಗೌರವಾನ್ವಿತ ಜಿಲ್ಲಾ ನಿರ್ದೇಶಕರಾದ ಶ್ರೀ ವಿಠ್ಠಲ್ ಸಾಲಿಯನ್ ರವರು ನವಜೀವನ ಪೋಷಕರು, ನವಜೀವನ ಸದಸ್ಯರ ಮನೆ ಭೇಟಿ, ನವಜೀವನ ಸಮಿತಿಗಳ ಪ್ರತಿ ವಾರದ ಪೂಜೆ ಮತ್ತು ಸಭೆ, ನವಜೀವನ ಸಮಿತಿಗಳ ಬಲವರ್ಧನೆಗಳನ್ನು ಮಾಡಿದಾಗ ಮಾತ್ರ ನವಜೀವನ ಸಮಿತಿಗಳು ಉಳಿದುಕೊಳ್ಳಲು ಸಾಧ್ಯ ಮತ್ತು ನವಜೀವನ ಸದಸ್ಯರು ಉತ್ತಮ ಬದುಕನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ 1847 ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ಮುಕುಂದ ಜಾದವ್, ಕೋಶಾಧಿಕಾರಿ ಶ್ರೀ ರಮೇಶ್ ಮೋಹಿತೆ, ಜನಜಾಗೃತಿ ಯೋಜನಾಧಿಕಾರಿ ಶ್ರೀ ಭಾಸ್ಕರ್ ಏನ್., ಚಿಕ್ಕೋಡಿ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ಶ್ರೀ ನಾಮದೇವ ದೇಶಪಾಂಡೆ, ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಜ್ಯೋತಿ, csc ಜಿಲ್ಲಾ ನೋಡಲ್ ಅಧಿಕಾರಿ ಶ್ರೀ ಸಚಿನ್, csc ತಾಲೂಕು ನೋಡಲ್ ಅಧಿಕಾರಿ ವಿನೋದ ಮತ್ತು ನವಜೀವನ ಪೋಷಕರು ಉಪಸ್ಥಿತರಿದ್ದರು.