ಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆರವರ ಮತ್ತು ಮಾತೃಶ್ರೀ ಡಾ|| ಹೇಮಾವತಿ ವಿ. ಹೆಗ್ಗಡೆಯವರ ಕೃಪಾಆಶೀರ್ವಾದಗಳೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ. ಸಿ ಟ್ರಸ್ಟ್ (ರಿ.) ಆಳಂದ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿ, ಜಿಲ್ಲಾ ಜನಜಾಗೃತಿ ವೇದಿಕೆ ಕಲಬುರಗಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಯೋಧನಾ ಕೇಂದ್ರ ಲಾಯಿಲ ಉಜಿರೆ, ಕರ್ನಾಟಕ ರಾಜ್ಯಾ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ನರೋಣಾ ವಲಯ, ನವಜೀವನ ಸಮಿತಿ, ಪ್ರಾಥಮಿಕ ಆರೋಗ್ಯ ಕೇಂದ್ರ ನರೋಣಾ, ಆರಕ್ಷಕ ಠಾಣೆ ನರೋಣಾ, ಗ್ರಾಮ ಪಂಚಾಯತಿ ನರೋಣಾ ಇವರುಗಳ ಸಹಕಾರದೊಂದಿಗೆ 1882 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯವನ್ನು ಶ್ರೀ ಮ.ನಿ.ಪ್ರ ಡಾ|| ಗುರುಮಹಾಂತ ಮಹಾಸ್ವಾಮಿಗಳು ಮಹಾಂಶೇಂಶ್ವರ ಮಠ ನರೋಣಾ ರವರು ವಹಿಸಿ ಆಶಿರ್ವದಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಚಂದಮ್ಮ ಬಿರಾಗಿ ಅಧ್ಯಕ್ಷರು ಗ್ರಾಮ ಪಂಚಾಯಿತಿ ನರೋಣಾ ರವರು ವಹಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಬಸವರಾಜ್ ಚಕ್ಕಿ ಗೌರವಾದ್ಯಕ್ಷರು 1882 ನೇ ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ನರೋಣಾ, ಶ್ರೀ ಗಣಪತಿ ಮಾಳಂಜಿ ಜಿಲ್ಲಾ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್(ರಿ.) ಕಲಬುರಗಿ ಜಿಲ್ಲೆ, ಶ್ರೀ ಸಿದ್ದರಾಮಪ್ಪ ನಿಂಬರ್ಗಾ ಆರಕ್ಷಕ ಉಪನಿರೀಕ್ಷಕರು ಪೊಲೀಸ್ ಠಾಣೆ ನರೋಣಾ, ಶ್ರೀ ಶರಣಗೌಡ ಪಾಟೀಲ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಕಲಬುರಗಿ, ಶ್ರೀ ಮಲ್ಲಿಕಾರ್ಜುನ್ ವಿ. ಹೀರಾ ಉಪಾಧ್ಯಕ್ಷರು ಗ್ರಾಮ ಪಂಚಾಯಿತಿ, ಶ್ರೀ ಶಿವಶರಣಪ್ಪ ಸಜ್ಜನ್ ಮುಖಂಡರು ಚುಂಚನಸೂರು, ಶ್ರೀ ಸಿದ್ದರಾಮಪ್ಪ ನಾಟಿಕರ್ ಮುಖಂಡರು ಪೊಲೀಸ್ ಸಮಾಜ ನರೋಣ, ಶ್ರೀ ಕೃಷ್ಣಪ್ಪ ಬೆಳವಣಿಕೆ ಯೋಜನಾಧಿಕಾರಿಗಳು ಆಳಂದ ತಾಲೂಕು, ಶ್ರೀ ರಾಜೇಶ್ ಕೆ. ಯೋಜನಾಧಿಕಾರಿಗಳು ಜನಜಾಗೃತಿ ಪ್ರಾದೇಶಿಕ ವಿಭಾಗ ಕಲಬುರಗಿ, ಶ್ರೀ ದಿನೇಶ್ ಮರಾಠಿ ಶಿಬಿರಾಧಿಕಾರಿ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಶ್ರೀಮತಿ ಜಯಲಕ್ಷ್ಮಿ ಆರೋಗ್ಯ ಸಹಾಯಕಿ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಮೇಲ್ವಿಚಾರಕರು ಮತ್ತು ಸ್ವಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.
