ಕಲ್ಬುರ್ಗಿ ಪ್ರಾದೇಶಿಕ ವಿಭಾಗದ ಚಿತ್ತಾಪುರ ಯೋಜನಾ ಕಛೇರಿಯ ವ್ಯಾಪ್ತಿಯ ಕಾಳಗಿ ಗ್ರಾಮದಲ್ಲಿ ಗಾಂಧಿ ಸ್ಮೃತಿ ಮತ್ತು ಜನಜಾಗೃತಿ ಸಮಾವೇಶ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಬಾಲಚಂದ್ರ ಕಾಂತಿ ಸ್ಥಳೀಯ ಗಣ್ಯರು ವಹಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಪಂಕಜ ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯತಿ ಕಾಳಗಿ ರವರು ದೀಪ ಬೆಳಗಿಸುವ ಮೂಲಕ ನೆರವೇರಿಸಿ ಯೋಜನೆ ಕಾರ್ಯಕ್ರಮಗಳು ಜನಪರ ಕಾಳಜಿ ಹೊಂದಿದ್ದು ಜನರ ಅಭಿವೃದ್ಧಿಗೆ ಪೂರಕವಾಗಿದ್ದು ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿರುತ್ತಾರೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯ ಚಿಕ್ಕಗುರು ನಂಜೇಶ್ವರ ಸ್ವಾಮೀಜಿಯವರು ವಹಿಸಿಕೊಂಡಿದ್ದು ಯೋಜನೆಯ ಶುದ್ದಗಂಗಾ, ಮಾಶಾಸನ, ವಾತ್ಸಲ್ಯ ಕಾರ್ಯಕ್ರಮ, ಸ್ವಸಹಾಯ ಸಂಘಗಳು, ದುಶ್ಚಟಗಳ ಜಾಗೃತಿ ಕಾರ್ಯಕ್ರಮಗಳು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಕಾರ್ಯಕ್ರಮದಲ್ಲಿ ಹೇಳಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿದ ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀ ಸಿದ್ದಲಿಂಗ ಬಾಳಿಯವರು ಮಾತನಾಡಿ ದುಶ್ಚಟಗಳ ಕುರಿತು ಮನೆ ಮತ್ತು ಶಾಲೆ ಹಂತಗಳಿಂದಲೇ ಜಾಗೃತಿ ಮೂಡಿಸುವ ಅಗತ್ಯತೆಗಳು ಹಾಗೂ ಕೆಟ್ಟ ಜನರ ಸಹವಾಸಗಳು ಹೇಗೆ ಮನಸ್ಥಿತಿಯನ್ನು ದುಶ್ಚಟಗಳಿಗೆ ಜಾರುವಂತೆ ಮಾಡುತ್ತದೆ ಹೇಗೆ ನಿಯಂತ್ರಣ ಇಟ್ಟುಕೊಳ್ಳಬೇಕು ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಶ್ರೀ ಕಮಲಾಕ್ಷ ಜಿಲ್ಲಾ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯಾದಗಿರಿ ಜಿಲ್ಲೆ ರವರು ಕಾರ್ಯಕ್ರಮದ ರೂಪರೇಷಗಳ ಕುರಿತು ಮಾಹಿತಿ ನೀಡಿದರು. ಗಾಂಧೀಜಿಯವರ ಪರಿಕಲ್ಪನೆಗಳು ನಮ್ಮ ದೇಶಕ್ಕೆ ಹೆಚ್ಚು ಪೂರಕವಾಗಿದೆ ಅವುಗಳ ಅನುಷ್ಠಾನದಲ್ಲಿ ನಾವು ಎದುರಿಸುತ್ತಿರುವ ಸವಾಲುಗಳು ಪೂಜ್ಯರು ಖಾವಂದರು ಗಾಂಧೀಜಿಯವರ ತತ್ವ ಆದರ್ಶಗಳನ್ನು ರಾಮರಾಜ್ಯದ ಪರಿಕಲ್ಪನೆಯನ್ನು ಯೋಜನೆಯ ಕಾರ್ಯಕ್ರಮಗಳಲ್ಲಿ ಯಾವ ಮಾದರಿಯಲ್ಲಿ ಅನುಷ್ಠಾನ ಮಾಡಿದ್ದಾರೆ ಎಂಬ ಬಗ್ಗೆ ವಿಶ್ಲೇಷಣೆಯನ್ನು ನೀಡಿದರು.