ಪರಮಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ ತಾಲೂಕು ಆಡಳಿತ ಇಂಡಿ, ಅಬಕಾರಿ ಇಲಾಖೆ ಇಂಡಿ, ಪುರಸಭೆ ಇಂಡಿ ಹಾಗೂ ಗ್ರಾಮ ಪಂಚಾಯಿತಿ ರೋಗಿ ಇವರ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ.) ಇಂಡಿ ತಾಲೂಕು ಇವರ ಸಹಯೋಗದಲ್ಲಿ ನಡೆದ 1863 ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪೂಜ್ಯ ಶ್ರೀ ಅಮೃತಾನಂದ ಮಹಾಸ್ವಾಮಿಗಳು ಗುರುದೇವ ಆಶ್ರಮ ಬಾಲಗಾoವ ರವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವದಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಡಾ| ಎಂ. ಬಿ. ಪಾಟೀಲ್ ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು ಕರ್ನಾಟಕ ಸರ್ಕಾರ ಮತ್ತು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು, ಶ್ರೀ ಶಿವಾನಂದ ಪಾಟೀಲ್ ಮಾನ್ಯ ಜವಳಿ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರು ಕರ್ನಾಟಕ ಸರ್ಕಾರ, ಶ್ರೀ ರಮೇಶ ಜಿಗಜಿಣಗಿ ಮಾನ್ಯ ಸಂಸದರು ಲೋಕಸಭೆ ವಿಜಯಪುರ, ಶ್ರೀ ಸಂತೋಷ್ ಕುಮಾರ್ ರೈ ಜಿಲ್ಲಾ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ.) ವಿಜಯಪುರ, ಪ್ರಕಾಶ್ ರಾಠೊಡ್ ಮಾನ್ಯ ಶಾಸಕರು ವಿಧಾನ ಪರಿಷತ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶ್ರೀ ರಾಜೇಶ್ ಕೆ. ಯೋಜನಾಧಿಕಾರಿಗಳು ಜನಜಾಗೃತಿ ಪ್ರಾದೇಶಿಕ ವಿಭಾಗ ಕಲಬುರ್ಗಿ, ಮಲ್ಲೇಶಪ್ಪ ಕೆ. ಮೇಲ್ವಿಚಾರಕರು ಜನಜಾಗೃತಿ ಪ್ರಾದೇಶಿಕ ವಿಭಾಗ ಕಲಬುರ್ಗಿ, ಶ್ರೀ ದಿವಾಕರ್ ಪೂಜಾರಿ ಶಿಬಿರಾಧಿಕಾರಿ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಶ್ರೀ ಸೋಮನಗೌಡ ಬಿ. ಪಾಟೀಲ್ ಅಧ್ಯಕ್ಷರು ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ, ಶ್ರೀಮತಿ ಜಯಲಕ್ಷ್ಮಿ ಆರೋಗ್ಯ ಸಹಾಯಕರು ಜನಜಾಗೃತಿ ವೇದಿಕೆ, ಮೇಲ್ವಿಚಾರಕರು, ಸ್ವ ಸಹಾಯ ಸಂಘಗಳ ಸದಸ್ಯರು, ಜನಜಾಗೃತಿ ವೇದಿಕೆಯ ಸದಸ್ಯರು, ಪೊಲೀಸ್ ಇಲಾಖೆಯವರು, ನವಜೀವನ ಸಮಿತಿ ಸದಸ್ಯರು ಮತ್ತು ಊರಿನ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
