ಪರಮ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆರವರ ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರ ಮಾರ್ಗದರ್ಶನದಂತೆ ಗೋಕಾಕ್ 2 ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ಜಿಲ್ಲಾ ಮಟ್ಟದ ಗಾಂಧಿ ಸ್ಮೃತಿ, ಬೃಹತ್ ಜನಜಾಗೃತಿ ಜಾಥಾ ಮತ್ತು ಸಮಾವೇಶ ನಡೆಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ರವರ ಪ್ರತಿಮೆಗೆ ಬೆಳಗಾಂ ಜಿಲ್ಲೆಯ ಗೌರವಾನ್ವಿತ ಸಂಸದರಾದ ಹಾಗೂ ಮಾಜಿ ಮುಖ್ಯ ಮಂತ್ರಿಗಳಾದ ಶ್ರೀಯುತ ಜಗದೀಶ್ ಶೆಟ್ಟರ್ ರವರು ಮಾಲಾರ್ಪಣೆ ಮಾಡಿ ಜಗ್ಗ ಹಲಗಿ ಹೊಡೆಯುವುದರ ಮೂಲಕ ಜಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಮದುರ್ಗ ತೇರ್ ಬಜಾರನಿಂದ ಬೃಹತ್ ಜನಜಾಗೃತಿ ಜಾಥಾ ಪ್ರಾರಂಭಗೊಂಡು ರಾಮದುರ್ಗ ಪಟ್ಟಣದ ಪ್ರಮುಖ ಬೀದಿಗಳ ಮುಖಾಂತರ ಸರಸ್ವತಿ ಕಲ್ಯಾಣ ಮಂಟಪದ ವರೆಗೆ ಬಂದು ತಲುಪಿತು. ನಂತರ ಸಭಾ ಕಾರ್ಯಕ್ರಮ ಜರುಗಿತು. ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರು ಶ್ರೀ ಸುಭಾಷ್ ಹನಸಿ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಗೌರವಾನ್ವಿತ ಶಾಸಕರ ಸಹೋದರ ಶ್ರೀ ಪ್ರದೀಪ್ ಪಟ್ಟಣ್ ಹಾಗೂ ಗೌರವಾನ್ವಿತ ಮಾಜಿ ಶಾಸಕರ ಸಹೋದರ ಮಲ್ಲಣ್ಣ ಯಾದವಾಡ ರವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಧಾರವಾಡ ಪ್ರಾದೇಶಿಕ ವಿಭಾಗದ ಗೌರವಾನ್ವಿತ ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ದಯಾಶೀಲ ರವರು ಭಾಗವಹಿಸಿ ಯೋಜನೆ ಮತ್ತು ಜನಜಾಗೃತಿ ಕಾರ್ಯಕ್ರಮ ಕುರಿತು ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಜನಜಾಗೃತಿ ವೇದಿಕೆ ಸ್ಥಾಪಕ ಅಧ್ಯಕ್ಷರು ಶ್ರೀ ಸೋಮಶೇಖರ್ ಮಗದುಮ್, ತಾಲೂಕು ಉಪ ತಹಶೀಲ್ದಾರ್ ಶ್ರೀ ಸಿದ್ದಾರೂಢ ಬನ್ನಿಕೊಪ್ಪದ್, ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಅಶೋಕ್ ಕುಲಗೋಡ, ಗೌರವಾನ್ವಿತ ಜಿಲ್ಲಾ ನಿರ್ದೇಶಕರು ಶ್ರೀ ಲವಕುಮಾರ್ ಮತ್ತು ಜಿಲ್ಲಾ ಜನಜಾಗೃತಿ ವೇದಿಕೆಯ ಸರ್ವ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯರು ಶ್ರೀ ಎಸ್. ಎಂ. ಸಕ್ರಿ ಯವರು ಭಾಗವಹಿಸಿ ದಿಕ್ಸುಚಿ ನುಡಿಗಳನ್ನಾಡಿದರು. ಜಿಲ್ಲೆಯ ಐದು ತಾಲೂಕಿನ ಯೋಜನಾಧಿಕಾರಿಗಳು, ಜನಜಾಗೃತಿ ವೇದಿಕೆ ಯೋಜನಾಧಿಕಾರಿ, ಮೇಲ್ವಿಚಾರರು, ಜನಜಾಗೃತಿ ಮೇಲ್ವಿಚಾರಕ ಉಮೇಶ್, ಸಿಬ್ಬಂದಿಗಳು, ಜಿಲ್ಲೆಯ ಹಾಗೂ ರಾಮದುರ್ಗ ತಾಲೂಕಿನ ನವಜೀವನ ಸಮಿತಿ ಸದಸ್ಯರು, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು, ಸ್ವ ಸಹಾಯ ಸಂಘಗಳ ಸದಸ್ಯರು ಮತ್ತು ಸೇವಾಪ್ರತಿನಿಧಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
