ಪಾಂಡವಪುರ ತಾಲೂಕಿನಲ್ಲಿ ಜಿಲ್ಲಾ ಮಟ್ಟದ ಗಾಂಧಿಸ್ಮ್ರತಿ, ಜನಜಾಗೃತಿ ಜಾಥಾ ಮತ್ತು ಪಾನಮುಕ್ತರ ಅಭಿನಂದನಾ ಸಮಾರಂಭ

Janajagurthi Vedike News

ಮೈಸೂರು ಪ್ರಾದೇಶಿಕ ವಿಭಾಗದ ಪಾಂಡವಪುರ ತಾಲೂಕಿನಲ್ಲಿ ಜಿಲ್ಲಾ ಮಟ್ಟದ ಗಾಂಧಿಸ್ಮ್ರತಿ, ಜನಜಾಗೃತಿ ಜಾಥಾ ಮತ್ತು ಪಾನಮುಕ್ತರ ಅಭಿನಂದನಾ ಸಮಾರಂಭ ನಡೆಯಿತು. ಜನಜಾಗೃತಿ ಜಾಥ ಕಾರ್ಯಕ್ರಮಕ್ಕೆ ಮಾನ್ಯ ಶಾಸಕರಾದ ಶ್ರೀ ದರ್ಶನ್ ಪುಟ್ಟಣಯ್ಯ ರವರು ಚಾಲನೆ ನೀಡಿದರು. ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಸಿ. ಎಸ್. ಪುಟ್ಟರಾಜು ರವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು. ಜಾಥ ಕಾರ್ಯಕ್ರಮದಲ್ಲಿ ಎಂಟು ವಿವಿಧ ಟ್ಯಾಬ್ಲೋಗಳು, ಐದು ಸಾಂಸ್ಕೃತಿಕ ಕಲಾ ತಂಡಗಳು, 300ಕ್ಕೂ ಅಧಿಕ ನವಜೀವನ ಸಮಿತಿ ಸದಸ್ಯರು ಭಾಗವಹಿಸಿ ಮೆರುಗು ನೀಡಿದರು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಶಾಸಕರು ನೆರವೇರಿಸಿ ಧರ್ಮಸ್ಥಳದ ಕಾರ್ಯಕ್ರಮಗಳು ಸರಕಾರಕ್ಕೆ ಮಾದರಿ. ಸಮಾಜ ಪರಿವರ್ತನೆಯಲ್ಲಿ ಮಹತ್ತ್ವದ ಪಾತ್ರ ವಹಿಸಿದೆ ಎಂದರು. ಕಾರ್ಯಕ್ರಮದಲ್ಲಿ ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ. ಪಾಯಸ್ ರವರು ಯುವಜನತೆ ಇಂದು ದುಶ್ಚಟಕ್ಕೆ ಬಲಿ ಬೀಳುತ್ತಿರುವುದು ಅತ್ಯಂತ ಆತಂಕವನ್ನು ತರಿಸುತ್ತಿದೆ, ಕುಡಿತವನ್ನು ಬಿಡಿಸುವ ಕಾರ್ಯವನ್ನು ಯಾರು ಮಾಡುತ್ತಿಲ್ಲ ಬದಲಾಗಿ ಕುಡಿತದ ಅಭ್ಯಾಸವನ್ನು ಕಲಿಸುವ ವರ್ಗ ಇದೆ ಧರ್ಮಸ್ಥಳ ಜನಜಾಗೃತಿ ವೇದಿಕೆಯು ಸಮಾಜದ ಪರಿವರ್ತನೆಯಲ್ಲಿ ಪ್ರೇರಣೆಯಲ್ಲಿ ತೊಡಗಿದೆ ಜನಜಾಗೃತಿ ವೇದಿಕೆ ಸದಸ್ಯರು ಸ್ವಾರ್ಥರಹಿತ ಸೇವೆಯನ್ನು ನೀಡುತ್ತಿದ್ದಾರೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಹಂದನಲ್ಲಿ ಸೋಮಶೇಖರ್ ರವರು ವಹಿಸಿ ಜನಜೀವನ ಸುದಾರಣೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಹು ವಿಧದ ಕಾರ್ಯಕ್ರಮಗಳನ್ನು ಅಯೋಜಿಸಿ ನಿಜವಾದ ಜನಕಲ್ಯಾಣ ಕಾರ್ಯಕ್ರಮಗಳನ್ನು ಪೂಜ್ಯರ ಮಾರ್ಗದರ್ಶನದಲ್ಲಿ ರೂಪಿಸಿದೆ. ಜನಜಾಗೃತಿ ವೇದಿಕೆಯು ಮದ್ಯವರ್ಜನ ಶಿಬಿರಗಳ ಜೊತೆಗೆ ಸ್ವಾಸ್ಥ್ಯ ಸಂಕಲ್ಪ, ವಿವಿಧ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು. ಸಮಾರಂಭದಲ್ಲಿ ಏಳು ತಾಲೂಕಿನ ನವಜೀವನ ಸಾಧಕರನ್ನು ಅಭಿನಂದಿಸಿ ಗೌರವಿಸಲಾಯಿತು.