ಧಾರವಾಡ ಗ್ರಾಮೀಣ ಯೋಜನಾ ಕಛೇರಿ ವ್ಯಾಪ್ತಿಯ ಶ್ರೀ ರೇವಣಸಿದ್ದೇಶ್ವರ ಮಹಾಮಠ ಸಭಾಭವನದಲ್ಲಿ 1866 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ

Janajagurthi Vedike News

ಧಾರವಾಡ ಪ್ರಾದೇಶಿಕ ವಿಭಾಗದ ಧಾರವಾಡ ಗ್ರಾಮೀಣ ಯೋಜನಾ ಕಛೇರಿ ವ್ಯಾಪ್ತಿಯ ಮನಸೂರ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಮಹಾಮಠ ಸಭಾಭವನದಲ್ಲಿ 1866 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಪೂಜ್ಯ ಶ್ರೀ ಡಾ. ಬಸವರಾಜದೇವರು ಮಹಾಸ್ವಾಮಿಗಳು ರೇವಣಸಿದ್ದೇಶ್ವರ ಮಹಾ ಮಠ ಇವರ ದಿವ್ಯ ಸಾನಿಧ್ಯದಲ್ಲಿ ನಡೆಯಿತು. ಪೂಜ್ಯರು ಶಿಬಿರಾರ್ಥಿಗಳಿಗೆ ಆಶೀರ್ವದಿಸಿ ಪೂಜ್ಯ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗಡೆಯವರು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಅನುಷ್ಠಾನ ಮಾಡುತ್ತಿದ್ದಾರೆ. ಪೂಜ್ಯರ ಕಾರ್ಯಕ್ರಮಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಾದರಿಯಾಗಿ ಇಟ್ಟುಕೊಂಡು ಅವರು ಸಹ ಅನುಷ್ಠಾನ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಪೂಜ್ಯರ ಕಾರ್ಯಕ್ರಮಗಳು ಮಾದರಿ ಆಗಿದವೆ ಎಂದು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಭಾಸ್ಕರ್ ಏನ್. ಯೋಜನಾಧಿಕಾರಿಗಳು ಜನಜಾಗೃತಿ ವೇದಿಕೆ ಪ್ರಾದೇಶಿಕ ಕಛೇರಿ ಧಾರವಾಡ ಇವರು ಪ್ರಸ್ತಾವಿಕವಾಗಿ ಮಾತನಾಡಿ ಎಂಟು ದಿನದ ಕಾರ್ಯಕ್ರಮದ ಬಗ್ಗೆ ವಿಸ್ತಾರವಾಗಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ತಿಪ್ಪವ್ವಾ ಹಲಗಿ ರವರು ವಹಿಸಿದರು. ಮುಖ್ಯ ಅತಿಥಿಗಳಾಗಿ ಪಿ ಎಸ್ ಐ ಶ್ರೀಮತಿ ರೇಣುಕಾ ಐರಾಣಿ, ಜನಜಾಗೃತಿ ವೇದಿಕೆ ಸದಸ್ಯರುಗಳಾದ ಶ್ರೀ ಕರಿಯಪ್ಪ ಅಮ್ಮಿನಭಾವಿ, ಸವಿತಾ ಮರಶೆಟ್ಟಿ, ಶ್ರೀ ಪುಂಡಲೀಕ ಹಡಪದ, ಶ್ರೀ ಮೃತ್ಯುಂಜಯ ಸಾಲಿಮಠ, ಶ್ರೀ ಬಸವರಾಜ ಕಲಕೇರಿ, ವ್ಯವಸ್ಥಾಪನ ಸಮಿತಿಯ ಗೌರವ ಅಧ್ಯಕ್ಷರಾದ ಶ್ರೀ ಮಲ್ಲನಗೌಡ, ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಶ್ರೀ ಶಂಕರ ಅಂಗಡಿ, ವ್ಯವಸ್ಥಾಪನ ಸಮಿತಿಯ ಕೋಶಾಧಿಕಾರಿ ಶ್ರೀ ನಿಂಗಪ್ಪ ಘಾಟಿನ, ಆರತಿ, ಕಮಲ ಹೊಂಬಳ, ಶ್ರೀ ಹಾಲಪ್ಪ ಕುರುಬರ, ಶ್ರೀ ಗದಗಯ್ಯ, ಶ್ರೀ ಫಕೀರಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.