ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ.), ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ತುಮಕೂರು 1 ಜಿಲ್ಲೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ತುಮಕೂರು 1 ಜಿಲ್ಲಾ ಕಛೇರಿ ಸಭಾಂಗಣದಲ್ಲಿ
ತುಮಕೂರು 1 ಜಿಲ್ಲಾ ಜನಜಾಗೃತಿ ವೇದಿಕೆ ಪದಾಧಿಕಾರಿಗಳ ಸಭೆ ನಡೆಯಿತು. ಸಭೆಯಲ್ಲಿ ತುಮಕೂರು 1 ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀಯುತ ಅಮರ್ ನಾಥ್ ಶೆಟ್ಟಿ, ಜಿಲ್ಲಾ ವೇದಿಕೆಯ ಕಾರ್ಯದರ್ಶಿಗಳು ಹಾಗೂ ತುಮಕೂರು 1 ಜಿಲ್ಲೆಯ ಮಾನ್ಯ ಗೌರವಾನ್ವಿತ ಜಿಲ್ಲಾ ನಿರ್ದೇಶಕರಾದ ಶ್ರೀಯುತ ಸತೀಶ್ ಸುವರ್ಣ ರವರು, ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆಯ ಮಾನ್ಯ ಯೋಜನಾಧಿಕಾರಿಗಳಾದ ಶ್ರೀಯುತ ತಿಮ್ಮಯ್ಯ ನಾಯ್ಕ ರವರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಆಸೀನರಿದ್ದ ಗಣ್ಯಮಾನ್ಯರುಗಳು ದೀಪವನ್ನು ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಶ್ರೀಯುತ ಸತೀಶ್ ಸುವರ್ಣ ರವರು ಮಾತನಾಡಿ ತುಮಕೂರು 1 ಜಿಲ್ಲೆಯಲ್ಲಿ ಅತಿ ಹೆಚ್ಚು ಪದಾಧಿಕಾರಿಗಳು ಸೇರಿರುವುದು ಖುಷಿ ತಂದ ವಿಚಾರ ಎಂದರು. ಎಲ್ಲಾ ರಂಗದ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದು ಕ್ಷೇತ್ರದ ಮೇಲಿನ ಭಕ್ತಿ ಮತ್ತು ನಂಬಿಕೆಯಿಂದ ಪೂಜ್ಯರ ಸಮಾಜಮುಖಿ ಕಾರ್ಯಕ್ರಮಗಳಿಂದ ಎಂದರು. ಸಮಾಜ ಸೇವೆಗಳಲ್ಲಿ ಶೌರ್ಯ ಘಟಕ ಒಂದು ಎಂದು ತಿಳಿಸಿದರು. ಇವತ್ತು ರೈತರಿಗಾಗಿ ಕೆರೆ ಹೂಳೆತ್ತುವ ಕಾರ್ಯವನ್ನು ಕೈಗೊಂಡಿದ್ದಾರೆ, ದೇವಸ್ಥಾನ, ರುದ್ರಭೂಮಿ, ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರು, ಬೆಂಚು ವಿತರಣೆ, ಹಾಲು ಉತ್ಪಾದಕರ ಕಟ್ಟಡಕ್ಕೆ ಅನುದಾನ, ಶುದ್ಧ ನೀರಿನ ಘಟಕ ಸೇರಿ ಹಲವಾರು ಅವಿರಥ ಸೇವೆಗಳನ್ನು ಪೂಜ್ಯರು ನೀಡುತ್ತಾ ಬಂದಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಹಾಗೂ ಜನಜಾಗೃತಿ ವೇದಿಕೆಯ ಕಾರ್ಯಕ್ರಮಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಿದರು. ಘನ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ತುಮಕೂರು 1 ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀಯುತ ಅಮರ್ ನಾಥ್ ಶೆಟ್ಟಿ ರವರು ನಾವು ಸೇರಿರುವ ಮುಖ್ಯ ಉದ್ದೇಶ ಸಮಾಜ ಸೇವೆಗಾಗಿ. ಸೇವೆ ನಮ್ಮ ಮುಖ್ಯ ಗುರಿ ಕ್ಷೇತ್ರದ ಹೆಸರು ಹೇಳಿ ನಾವು ತಪ್ಪು ಕೆಲಸಗಳನ್ನು ಮಾಡಬಾರದು. ಕ್ಷೇತ್ರಕ್ಕೆ ಹೋದ ಸಂದರ್ಭ ಸರತಿ ಸಾಲಿನಲ್ಲಿ ತೆರಳಬೇಕೆ ಹೊರತು ನಮಗೆ ನೀಡಿದ ಅವಕಾಶ ದುರುಪಯೋಗಪಡಿಸಿಕೊಳ್ಳಬಾರದು ಸೇವೆ ಮಾಡಲು ಹಲವಾರು ಅವಕಾಶ ಹಲವಾರು ದಾರಿಗಳಿವೆ ಏನೇ ಸಮಸ್ಯೆಗಳಿಗೆ ಯಾವುದೇ ಸಂದರ್ಭ ಸಹಕಾರ ಕೊಡಲು ನಾನು ಬದ್ದ ಎಂದು ತಿಳಿಸಿ ಅಧ್ಯಕ್ಷೀಯ ನುಡಿಗಳನ್ನು ನುಡಿದರು. ತುಮಕೂರು ಗ್ರಾಮಾಂತರ ಯೋಜನಾ ಕಛೇರಿಯ ಯೋಜನಾಧಿಕಾರಿಗಳಾದ ಶ್ರೀಯುತ ಸಂದೇಶ್, ಗುಬ್ಬಿ ಯೋಜನಾ ಕಛೇರಿಯ ಯೋಜನಾಧಿಕಾರಿಗಳಾದ ಶ್ರೀಯುತ ರಾಜೇಶ್, ತುರುವೇಕೆರೆ ನಗರ ಯೋಜನಾ ಕಛೇರಿಯ ಯೋಜನಾಧಿಕಾರಿಗಳಾದ ಶ್ರೀಯುತ ಯಶೋದರ್, ತುರುವೇಕೆರೆ ಗ್ರಾಮಾಂತರ ಯೋಜನಾ ಕಛೇರಿಯ ಯೋಜನಾಧಿಕಾರಿಗಳಾದ ಶ್ರೀಮತಿ ಅನಿತಾ ಶೆಟ್ಟಿ, ಕುಣಿಗಲ್ ಯೋಜನಾ ಕಛೇರಿಯ ಯೋಜನಾಧಿಕಾರಿಗಳಾದ ಶ್ರೀಯುತ ಸತೀಶ್ ಶೇಟ್, ತಿಪಟೂರು ನಗರ ಯೋಜನಾ ಕಛೇರಿಯ ಯೋಜನಾಧಿಕಾರಿಗಳಾದ ಶ್ರೀಯುತ ಉದಯ್, ತಿಪಟೂರು ಗ್ರಾಮಾಂತರ ಯೋಜನಾ ಕಛೇರಿಯ ಯೋಜನಾಧಿಕಾರಿಗಳಾದ ಶ್ರೀಯುತ ಸುರೇಶ್, ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆಯ ಯೋಜನಾಧಿಕಾರಿಗಳಾದ ಶ್ರೀ ತಿಮ್ಮಯ್ಯ ನಾಯ್ಕ, ಜಿಲ್ಲಾ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
