ಸ್ವ – ಉದ್ಯೋಗ ತರಬೇತಿಯ ಸಮಾರೋಪ ಸಮಾರಂಭ ಕಾರ್ಯಕ್ರಮ

Janajagurthi Vedike News

ಕೊಪ್ಪಳ ಪ್ರಾದೇಶಿಕ ವಿಭಾಗದ ಬಾಗಲಕೋಟೆ ಜಿಲ್ಲೆಯ ಬಾದಾಮಿ, ಬಾಗಲಕೋಟೆ, ಹುನುಗುಂದ, ಜಮಖಂಡಿ, ಮುಧೋಳ ತಾಲೂಕಿನ ಆಯ್ದ ನವಜೀವನ ಸಮಿತಿ ಸದಸ್ಯರಿಗೆ ನಡೆದ ಹೈನುಗಾರಿಕೆ ಮತ್ತು ಆಡು ಸಾಕಾಣಿಕೆ ಸ್ವ- ಉದ್ಯೋಗ ತರಬೇತಿಯ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಶ್ರೀಕಾಂತ ಸಂದಿಮನಿ, ಸಂಸ್ಥೆಯ ನಿರ್ದೇಶಕರಾದ ಶ್ರೀ ಮುತ್ತಣ್ಣ, ಉಪನ್ಯಾಸಕರಾದ ಶ್ರೀ ಜಗದೀಶ್ ಪೂಜಾರ್, ಶ್ರೀ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು. ತರಬೇತಿಯಲ್ಲಿ 35 ಮಂದಿ ಪಾನಮುಕ್ತ ಸದಸ್ಯರು ಭಾಗವಹಿಸಿದ್ದರು.