ಮೈಸೂರು ಪ್ರಾದೇಶಿಕ ವಿಭಾಗದ ಮಂಡ್ಯ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳ ಸಭೆ ಕೊತ್ತತ್ತಿ ವಲಯದ ಶ್ರೀ ಸೋಮೇಶ್ವರ ಸಮುದಾಯ ಭವನ ಬೇವಿನಹಳ್ಳಿಯಲ್ಲಿ ನಡೆಯಿತು. ಸಭೆಯನ್ನು ಮೈಸೂರು ಪ್ರಾದೇಶಿಕ ಕಛೇರಿಯ ಗೌರವಾನ್ವಿತ ಪ್ರಾದೇಶಿಕ ನಿರ್ದೇಶಕರು ದೀಪ ಪ್ರಜ್ವಲನೆ ಮಾಡುವುದರ ಮುಖೇನ ಉದ್ಘಾಟಿಸಿ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಭೆಗೆ ಕಡ್ಡಾಯವಾಗಿ ಎಲ್ಲಾ ಪದಾಧಿಕಾರಿಗಳು ಬಾಗವಹಿಸುವುದರ ಬಗ್ಗೆ ತಾಲೂಕಿನ ಯೋಜನಾಧಿಕಾರಿಗಳು ಜವಾಬ್ದಾರಿ ವಹಿಸಿಕೊಳ್ಳಬೇಕು, ತಾಲೂಕಿನಲ್ಲಿ 3 ಮಂದಿ ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ನೀಡಿ ಉತ್ತಮ ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಬಗ್ಗೆ ಮಾಹಿತಿ ನೀಡಿದರು. ತಾಲೂಕುವಾರು ನವಜೀವನ ಸಮಿತಿ ಬಲವರ್ಧನೆ ಮಾಡುವುದರ ಬಗ್ಗೆ ಮಾಹಿತಿ ನೀಡಿದರು. ಅಕ್ಟೋಬರ್ 02 ಗಾಂಧಿ ಜಯಂತಿ ಕಾರ್ಯಕ್ರಮವನ್ನು ನಾಗಮಂಗಲ ತಾಲೂಕಿನಲ್ಲಿ ನಡೆಸುವ ಬಗ್ಗೆ ನಿರ್ಣಯಿಸಲಾಯಿತು. ಮಾನ್ಯ ಜಿಲ್ಲಾ ನಿರ್ದೇಶಕರು ಗತ ಸಭೆಯ ವರದಿ ಮಂಡನೆ ಮಾಡಿದರು ಹಾಗೂ 2024-25 ನೇ ಸಾಲಿನ ಜನಜಾಗೃತಿ ವೇದಿಕೆಯ ಕ್ರೀಯಾ ಯೋಜನೆ ಅನುಷ್ಠಾನದ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರು ಜನಜಾಗೃತಿ ಕಾರ್ಯಕ್ರಮದ ಬಗ್ಗೆ ಜನರಿಗೆ ಮನಮುಟ್ಟುವಂತೆ ಮಾಹಿತಿ ನೀಡೋಣ, ಪೂಜ್ಯರು ನಾಗರಿಕ ಸರ್ಕಾರದಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ, ಮುಂದಿನ ದಿನಗಳಲ್ಲಿ ನವಜೀವನ ಸಮಿತಿಯನ್ನು ಬಲಪಡಿಸುವುದು ಪ್ರಮುಖ ವಿಚಾರವಾಗಿದೆ ಈ ಬಗ್ಗೆ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು, ಯೋಜನಾಧಿಕಾರಿಗಳು ಸಂಪೂರ್ಣ ಸಹಕಾರ ಕೊಡಬೇಕೆಂದು ತಿಳಿಸಿದರು. ಜನಜಾಗೃತಿ ಪದಾಧಿಕಾರಿಗಳು ಗುಣಮಟ್ಟವನ್ನು ಉಳಿಸಿಕೊಂಡು ಕೆಲಸವನ್ನು ಮಾಡೋಣ ಮತ್ತು ಜನಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭ ಪ್ರಾದೇಶಿಕ ಕಛೇರಿಯ ಜನಜಾಗೃತಿ ಯೋಜನಾಧಿಕಾರಿ, ತಾಲೂಕು ಕ್ಷೇತ್ರ ಯೋಜನಾಧಿಕಾರಿ, ಜಿಲ್ಲಾ ವಿಚಕ್ಷಣಾಧಿಕಾರಿ ಉಪಸ್ಥಿತರಿದ್ದರು.
