ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಡಾ| ಹೇಮಾವತಿ ವಿ. ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ 1825 ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಚನ್ನಗಿರಿ ತಾಲೂಕು ಇವರ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಚನ್ನಗಿರಿ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿ, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಚಿತ್ರದುರ್ಗ ಜಿಲ್ಲೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲಾಯಿಲ ಉಜಿರೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಮಾರ್ಗದರ್ಶನದೊಂದಿಗೆ ಶ್ರೀ ಸಿದ್ಧರಾಮೇಶ್ವರ ಸಮುದಾಯದ ಭವನ ಬುಳಸಾಗರ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳು ನಲ್ಲೂರ ವಲಯ, ನವಜೀವನ ಸಮಿತಿಗಳು ಚನ್ನಗಿರಿ ತಾಲೂಕು ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ದಾನಿಗಳ ಸಹಕಾರದೊಂದಿಗೆ ನಡೆದ 1825 ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭವು ಶ್ರೀ ಸಿದ್ದರಾಮೇಶ್ವ ಸಮುದಾಯದ ಭವನ ಬೂಳಸಾಗರದಲ್ಲಿ ಜರುಗಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯ ಡಾ| ಶ್ರೀ ಗುರುಬಸವ ಮಹಾಸ್ವಾಮಿಗಳು ವಿರಕ್ತಮಠ ಇವರು ವಹಿಸಿ ಆಶೀರ್ವಚನವನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ತಮ್ಮಯ್ಯ ಎನ್. ಶ್ರೀ ಸಿದ್ದರಾಮೇಶ್ವರ ಸೇವೆ ಸಮಿತಿ ಬುಳಸಾಗರ ರವರು ವಹಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಮಹಿಮಾ ಜೆ. ಪಟೇಲ್ ಮಾಜಿ ಶಾಸಕರು ಚಳ್ಳಕೆರೆ, ಶ್ರೀ ಹೆಚ್. ಸಿ. ಬಸುರಾಜ್ ಅಧ್ಯಕ್ಷರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ದಾವಣಗೆರೆ ಜಿಲ್ಲೆ, ಶ್ರೀ ಓಂಕಾರ ಮೂರ್ತಿ ಅಧ್ಯಕ್ಷರು 1825 ನೇ ಮದ್ಯವರ್ಜನ ವ್ಯವಸ್ಥಾಪನ ಸಮಿತಿ, ಶ್ರೀ ದಿನೇಶ್ ಪೂಜಾರಿ ನಿರ್ದೇಶಕರು ಚಿತ್ರದುರ್ಗ ಜಿಲ್ಲೆ, ಶ್ರೀಮತಿ ಯಶೋದಮ್ಮ ಮಾಜಿ ಜಿಲ್ಲಾ ಪಂಚಾಯಿತ್ ಸದಸ್ಯರು, ಶ್ರೀ ಶರಣಪ್ಪ ದಾವಣಗೆರೆ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು, ಶ್ರೀ ಚನ್ನಬಸಪ್ಪ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು, ಶ್ರೀ ಆರ್. ಮಂಜಪ್ಪ ಜಿಲ್ಲಾ ಜನಜಾಗೃತಿ ಸದಸ್ಯರು, ಶ್ರೀ ಕೆ. ವಿ. ಮಹೇಶಪ್ಪ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು, ಶ್ರೀ ಮಮ್ಮದ್ ಸೈಫ್ ಉಲ್ಲಾ ಅಡಿಕೆ ವ್ಯಾಪಾರಿಗಳು ಚೆನ್ನಗಿರಿ, ಶ್ರೀ ಶಿವಸಾಗರ್, ಶ್ರೀ ಮಲ್ಲೇಶಪ್ಪ, ಶ್ರೀಮತಿ ಭವಾನಿ ಸಮಿತಿಯ ಸದಸ್ಯರು, ಶ್ರೀಮತಿ ಶಶಿಕಲಾ ಸಮಿತಿಯ ಸದಸ್ಯರು, ಶ್ರೀಮತಿ ಆಶಾ ಸಮಿತಿಯ ಸದಸ್ಯರು, ಶ್ರೀ ನಾಗರಾಜ ಕುಲಾಲ್ ಯೋಜನಾಧಿಕಾರಿಗಳು ಜನಜಾಗೃತಿ ವೇದಿಕೆ ಪ್ರಾದೇಶಿಕ ವಿಭಾಗ ಚಿತ್ರದುರ್ಗ, ಶ್ರೀ ಅಜಯ್ ಕುಮಾರ್ ಯೋಜನಾಧಿಕಾರಿಗಳು ಚೆನ್ನಗಿರಿ ತಾಲೂಕು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸರ್ವ ಸದಸ್ಯರು, ಊರಿನ ಗಣ್ಯರು ಮತ್ತು ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ದಿನೇಶ್ ಮರಾಠಿ ಶಿಬಿರಾಧಿಕಾರಿ, ಶ್ರೀಮತಿ ಜಯಲಕ್ಷ್ಮಿ ಆರೋಗ್ಯ ಸಹಾಯಕಿ, ರುದ್ರಪ್ಪ ಹೂಗಾರ್ ಜನಜಾಗೃತಿ ಮೇಲ್ವಿಚಾರಕರು,
ಗುರುಮೂರ್ತಿ ವಲಯದ ಮೇಲ್ವಿಚಾರಕರು, ಪೋಷಕರು, ಸೇವಾಪ್ರತಿನಿಧಿಗಳು, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಸ್ವಸಹಾಯ ಸಂಘ ಮತ್ತು ಪ್ರತಿಬಂಧು ಸಂಘ ಸದಸ್ಯರು, ಕಾರ್ಯಕ್ರಮದ ಕೇಂದ್ರ ಬಿಂದುಗಳಾದ ಶಿಬಿರಾರ್ಥಿಗಳು ಮತ್ತು ಅವರ ಕುಟುಂಬದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
