ಧಾರವಾಡ ಪ್ರಾದೇಶಿಕ ವಿಭಾಗದ ಅಥಣಿ ತಾಲೂಕಿನ ಕಕಮರಿ ಅಮ್ಮಾಜೀಶ್ವರಿ ಸಭಾಭವನದಲ್ಲಿ 1829 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀ ಸಂಜಯ್ ನಾಡ ಗೌಡ ರವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಕಕಮರಿ ಮಠದ ಪರಮಪೂಜ್ಯ ಶ್ರೀ ಆತ್ಮ ರಾಮ ಸ್ವಾಮಿಗಳು ಗುರುದೇವಶ್ರಮ ವಹಿಸಿ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಅಥಣಿ ಜಿಲ್ಲೆಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ.) ಜಿಲ್ಲಾ ನಿರ್ದೇಶಕರಾದ ಶ್ರೀಮತಿ ನಾಗರತ್ನ ಹೆಗಡೆ, ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಶ್ರೀ ಗುರಪ್ಪ ದಾಷ್ಯಾಳ, ಅಮ್ಮಾಜೇಶ್ವರಿ ದೇವಸ್ಥಾನ ಟ್ರಸ್ಟ್ ಕಮಿಟಿಯ ಶ್ರೀ ಅಪ್ಪ ಸಾಹೇಬ ರಾಮನಗೌಡ ಪಾಟೀಲ, ಕಕಮರಿ ಗ್ರಾಮದ ಹಿರಿಯರಾದ ಶ್ರೀ ಲಕ್ಷ್ಮಣ, ಶ್ರೀ ಗಿರಿಮಲ್ಲ ಜನ ಗೌಡ, ಗ್ರಾಮ ಲೆಕ್ಕಾಧಿಕಾರಿಗಳಾದ ಶ್ರೀಮತಿ ಎಸ್. ಎಸ್. ಕೋಟಿ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಅಪ್ಪಾಜಿ ಗೌಡ, ತೆಲಸಂಗ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ವಿಳಾಸ ಮೊರೆ, ತೆಲಸಂಗ ಗ್ರಾಮ ಪಂಚಾಯತ್ ಸದಸ್ಯರ ಶ್ರೀ ಶ್ರೀಶೈಲ ಇಂಚಗೇರಿ, ಕಕಮರಿ ಒಕ್ಕೂಟ ಅಧ್ಯಕ್ಷರಾದ ಶ್ರೀ ರಾಜೇಂದ್ರ ಬಾಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.
