228 ನೇ ವಿಶೇಷ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ

Janajagurthi Vedike News

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನ ಕೇಂದ್ರ ಜಾಗೃತಿ ಸೌದದಲ್ಲಿ 228 ನೇ ವಿಶೇಷ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಡಾಕ್ಟರ್ ಮೋಹನ್ ದಾಸ್ ಗೌಡ ರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿ ಶ್ರೀ ದೇವಿಪ್ರಸಾದ್ ಸುವರ್ಣ ರವರು ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ಜನಜಾಗೃತಿ ಆಡಳಿತಾತ್ಮಕ ಯೋಜನಾಧಿಕಾರಿ ಶ್ರೀ ಮಾಧವ ಗೌಡ, ಶೌರ್ಯ ವಿಪತ್ತು ನಿರ್ವಹಣಾ ವಿಭಾಗದ ಯೋಜನಾಧಿಕಾರಿ ಶ್ರೀ ಕಿಶೋರ್, ಡಾಕ್ಟರ್ ತಾರ, ಜಾಗೃತಿ ಸೌಧದ ಪ್ರಬಂಧಕರಾದ ಶ್ರೀ ಕಿಶೋರ್, ಜನಜಾಗೃತಿ ಮೇಲ್ವಿಚಾರಕರಾದ ಶ್ರೀ ನಿತೇಶ್, ಶಿಬಿರಾಧಿಕಾರಿಗಳಾದ ಶ್ರೀ ಕುಮಾರ್, ಶ್ರೀ ಚಿತ್ತರಂಜನ್, ಆರೋಗ್ಯ ಸಹಾಯಕರಾದ ಫಿಲೋಮಿನ ಡಿ’ಸೋಜಾ, ಪ್ರೆಸಿಲ್ಲ ಡಿ’ಸೋಜಾ, ನವಜೀವನ ಸಮಿತಿ ಸದಸ್ಯರು ಉಪಸಿತರಿದ್ದರು.