ಶಿಡ್ಲಘಟ್ಟ ತಾಲೂಕಿನ ಕೆ ವಿ ಭವನ ಹಂಡಿಗನಾಳದಲ್ಲಿ ನಡೆದ 1819 ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ

Janajagurthi Vedike News

ಬೆಂಗಳೂರು ಪ್ರಾದೇಶಿಕ ವಿಭಾಗದ ಶಿಡ್ಲಘಟ್ಟ ತಾಲೂಕಿನ ಕೆ ವಿ ಭವನ ಹಂಡಿಗನಾಳದಲ್ಲಿ ನಡೆದ 1819 ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳ ಮನಪರಿವರ್ತನೆಗೆ ಪೂರಕವಾದ ಮಾರ್ಗದರ್ಶನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಂಗಳೂರು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಶೀನಪ್ಪ ಎಂ. ಶ್ರೀಯುತರು ನೀಡಿದರು. ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ಮಹಾದೇವಸ್ವಾಮಿಗಳು ಶ್ರೀ ಬಸವಕಲ್ಯಾಣ ಮಠ ವಿಜಯಪುರ ಶಾಖೆ ಸ್ವಾಮೀಜಿಯವರ ದಿವ್ಯ ಸಾನಿಧ್ಯ ವಹಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶ್ರೀ ಸಿ. ಎನ್. ನಾಗರಾಜ್ ನಿವೃತ್ತ ಐ ಪಿ ಎಸ್ ಅಧಿಕಾರಿಗಳು, ಶ್ರೀ ರಮೇಶ್ ಯಲುವಳ್ಳಿ ಅಧ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ, ಸಮಿತಿ ಅಧ್ಯಕ್ಷರು ಶ್ರೀ ಕೆ. ಎನ್. ಸುಬ್ಬಾರೆಡ್ಡಿ, ಯೋಜನೆಯ ಜಿಲ್ಲಾ ನಿರ್ದೇಶಕರು ಶ್ರೀ ಪ್ರಶಾಂತ್ ಸಿ. ಎಸ್., ಜನಜಾಗೃತಿ ಯೋಜನಾಧಿಕಾರಿಗಳು ಶ್ರೀ ತಿಮ್ಮಯ್ಯ ನಾಯಕ್, ಶಿಡ್ಲಘಟ್ಟ ಯೋಜನಾಧಿಕಾರಿಗಳು ಶ್ರೀ ಸುರೇಶ್ ಗೌಡ, ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು, ಪತ್ರಕರ್ತ ಬಂಧುಗಳು, ಯೋಜನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.