ಪುಸ್ತಕದ ಪರೀಕ್ಷೆಯಲ್ಲಿ ಪಾಸ್ ಆಗುವುದರ ಜೊತೆಗೆ ಜೀವನದ ಪರೀಕ್ಷೆಯಲ್ಲಿ ಪಾಸಾಗಲು ಕರೆ- ಶ್ರೀ ಸಂಜಯ್ ಬಿ. ಪಾಟೀಲ್

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಖಾಸಬಾಗ್ ಹಾಗೂ ಗೊಮ್ಮಟೇಶ ವಿದ್ಯಾಪೀಠ ಪಿಯು ಕಾಲೇಜ್ ಆಶ್ರಯದಲ್ಲಿ ನಡೆಸಲಾದ ಸ್ವಾಸ್ಥ್ಯಸಂಕಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಂದಿನ ಯುವ ಪೀಳಿಗೆ ತಂಬಾಕು, ಗುಟಕ, ಮದ್ಯಪಾನದಂತಹ ದುಶ್ಚಟಗಳಿಗೆ ಬಲಿಯಾಗದೆ ಉತ್ತಮವಾದ ಸಂಸ್ಕಾರಯುತ ಜೀವನ ನಡೆಸಿ ಸಮಾಜದ ಸ್ವಾಸ್ಥ್ಯ ಕಾಪಾಡುವುದರ ಜೊತೆಗೆ ಇತರರಿಗೆ ಆದರ್ಶವಾದ ಜೀವನ ನಡೆಸಬೇಕೆಂದು ಸಲಹೆ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶ್ರೀ ಬಸವರಾಜ್ ಸೊಪ್ಪಿಮಠ ಅವರು ಮಾತನಾಡಿ ವಿದ್ಯಾರ್ಥಿಗಳು ದುಶ್ಚಟಗಳಿಗೆ ಆಕರ್ಷಿತರಾಗಿ ಮೋಜು-ಮಸ್ತಿಯ ಜೀವನ ನಡೆಸದೆ ಹೆತ್ತವರ ಆಶಯದಂತೆ ಉತ್ತಮವಾದ ಜೀವನ ನಡೆಸಬೇಕೆಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮಾನ್ಯ ಯೋಜನಾಧಿಕಾರಿಗಳಾದ ಶ್ರೀ ಸುಭಾಷ್ ಪಿ. ಸಿ. ರವರು ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಶ್ರೀ ಮಹೇಶ್ ಆರ್. ಕಾರೆಕರ್, ಮೇಲ್ವಿಚಾರಕರಾದ ಉಮೇಶ್ ಗೌಡ, ಉಪನ್ಯಾಸಕರು ಮತ್ತು ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.