ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರದ ಜಾಗೃತಿ ಸೌಧದಲ್ಲಿ ನಡೆದ 227 ನೇ ವಿಶೇಷ ಮದ್ಯವರ್ಜನ ಶಿಬಿರದಲ್ಲಿ 86 ಮಂದಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಧರ್ಮಸ್ಥಳದ ಧರ್ಮಾಧಿಕಾರಿಯವರಾದ ಪರಮ ಪೂಜ್ಯರು ಮಾರ್ಗದರ್ಶನ ನೀಡುತ್ತಾ ಧೃಡ ಸಂಕಲ್ಪದಿಂದ ವ್ಯಸನ ಮುಕ್ತರಾಗಲು ಸಾಧ್ಯ ಮಾನಸಿಕ ಪರಿವರ್ತನೆಯಾದರೆ ವ್ಯಸನದಿಂದ ಮುಕ್ತರಾಗಬಹುದು ಶಿಬಿರದಲ್ಲಿ ವ್ಯಸನಿಗಳನ್ನು ಪರಿವರ್ತನೆ ಮಾಡುವ ಕೆಲಸ ಆಗುತ್ತಿದೆ ಕುಡಿತ ಕೆಟ್ಟದು ಅಂತ ಜನರಿಗೆ ಅರ್ಥವಾಗಿದೆ ಹಾಗಾಗಿ ಶಿಬಿರಕ್ಕೆ ಸೇರುವವರ ಸಂಖ್ಯೆ ಜಾಸ್ತಿಯಾಗಿದೆ. ದುಶ್ಚಟಕ್ಕೆ ಜಾತಿ ಭೇದವಿಲ್ಲ ಯಾವ ಕಾಲಮಾನವೂ ಇಲ್ಲ ಇದೊಂದು ಆಕರ್ಷಣೀಯ ವಸ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಗೌರವಾನ್ವಿತ ಮಾನ್ಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿನ್ಸೆಂಟ್ ಪಾಯ್ಸ್, ಯೋಜನಾಧಿಕಾರಿಗಳಾದ ಶ್ರೀ ಮಾಧವ ಗೌಡ, ಶಿಬಿರಾಧಿಕಾರಿ ಶ್ರೀ ನಾಗೇಂದ್ರ, ಆರೋಗ್ಯ ಸಹಾಯಕರಾದ ಶ್ರೀಮತಿ ಸೌಮ್ಯ ಹಾಗೂ ಪ್ರಬಂಧಕರಾದ ಶ್ರೀ ಕಿಶೋರ್ ಉಪಸ್ಥಿತರಿದ್ದರು.
