ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿ ಹಾಗೂ ಜನಜಾಗೃತಿ ವೇದಿಕೆ ಕಲಬುರ್ಗಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತ ಮತ್ತು ಸಂಶೋಧನಾ ಕೇಂದ್ರ ಲಾಯಿಲ ಉಜಿರೆ, ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ ಬೆಂಗಳೂರು, ಚೆಟ್ಟಿನಾಡು ಸಿಮೆಂಟ್ ಪ್ರೈವೆಟ್ ಲಿಮಿಟೆಡ್ ಕಲ್ಲೂರು ವರ್ಕ್ಸ್ ಚಿಂಚೋಳಿ, ಸಿದ್ಧಸಿರಿ ಈಥೆನಾಲ್ ಮತ್ತು ಪವರ್, ಚಿಂಚೋಳಿ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟ ಬೀದರ್, ಕಲಬುರ್ಗಿ, ಯಾದಗಿರಿ ಕಲಬುರ್ಗಿ ಸಿಮೆಂಟ್ ಪ್ರೈವೆಟ್ ಲಿಮಿಟೆಡ್ ಚತ್ರಸಾಲ ಮೆಟ್ರಿಕ್ಸ್ ಪವರ್ ಪ್ರೈವೆಟ್ ಲಿ.ಪೋಲಕಪಳ್ಳಿ, ಸೆಲ್ಕೋ ಸೋಲಾರ್ ಪ್ರೈವೆಟ್ ಲಿಮಿಟೆಡ್ ಕಲಬುರ್ಗಿ, ಪ್ರಗತಿ ಸಾಮಾಜಿಕ ಶೈಕ್ಷಣಿಕ ಸೇವಾ ಸಂಸ್ಥೆ (ರಿ,) ಚಿಂಚೋಳಿ ಇವರ ಸಂಯುಕ್ತಾಶ್ರಯದಲ್ಲಿ ಪರಮ ಪೂಜ್ಯ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಶ್ರೀಮತಿ ಮಾತೃಶ್ರೀ ಡಾ| ಹೇಮಾವತಿ ಅಮ್ಮನವರ ಮಾರ್ಗದರ್ಶನದಲ್ಲಿ ಪ್ರಗತಿಬಂದು ಸ್ವ ಸಹಾಯ ಸಂಘಗಳ ಒಕ್ಕೂಟ ಚಿಂಚೋಳಿ, ಪುರಸಭೆ ಚಿಂಚೋಳಿ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ದಾನಿಗಳ ಸಹಕಾರದೊಂದಿಗೆ ಜರಗಿದ 1815 ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು. ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಹವಾ ಮಲ್ಲಿನಾಥ ಮಹಾರಾಜರು ನೀರಗುಡಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರು ಜೈ ಭಾರತ್ ಮಾತಾ ಸೇವಾ ಸಮಿತಿ (ರಿ.) ನವದೆಹಲಿ ವಹಿಸಿದರು. ಕಾರ್ಯಕ್ರಮವನ್ನು ಶ್ರೀ ಡಾ. ಅವಿನಾಶ್ ಜಾಧವ್ ಶಾಸಕರು ಚಿಂಚೋಳಿ ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಸುಭಾಷ್ ರಾಥೋಡ್ ಕೆ.ಪಿ.ಸಿ.ಸಿ. ರಾಜ್ಯ ಉಪಾಧ್ಯಕ್ಷರು, ಶ್ರೀ ಗಣಪತಿ ಮಾಳಂಜಿ ಜಿಲ್ಲಾ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಕಲಬುರ್ಗಿ, ಶ್ರೀ ಸಿ.ಎನ್. ಬಾಬಳಗಾವ್ ಜಿಲ್ಲಾ ಅಧ್ಯಕ್ಷರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಲಬುರ್ಗಿ, ಶ್ರೀ ದಯಾನಂದ್ ವ್ಯವಸ್ಥಾಪಕರು ಸಿದ್ಧ ಸಿರಿ, ಶ್ರೀ ಯಲ್ಲಾಲಿಂಗ ಒಲವೇ ವ್ಯವಸ್ಥೆ (ಲಿ.) ಕಲಬುರ್ಗಿ, ಶ್ರೀ ರಾಜೇಶ್ ಕೆ. ಯೋಜನಾಧಿಕಾರಿಗಳು ಜನಜಾಗೃತಿ ವಿಭಾಗ ಪ್ರಾದೇಶಿಕ ಕಛೇರಿ ಕಲಬುರ್ಗಿ, ಶ್ರೀ ಗೋಪಾಲ್ ಜಿ. ಕ್ಷೇತ್ರ ಯೋಜನಾಧಿಕಾರಿಗಳು ಚಿಂಚೋಳಿ, ಶ್ರೀ ಭೀಮಶೆಟ್ಟಿ ಮುರುಡಾ ಗೌರವಾಧ್ಯಕ್ಷರು ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಚಿಂಚೋಳಿ, ಶ್ರೀ ಶಂಕರ್ ರಾಠೋಡ್ ಕಾರ್ಯನಿರ್ವಹಣಾಧಿಕಾರಿ ತಾಲೂಕು ಪಂಚಾಯಿತ್ ಚಿಂಚೋಳಿ, ಶ್ರೀಮತಿ ನರಸಮ್ಮ ಲಕ್ಷ್ಮಣ್ ಅವುಂಟಿ, ಶ್ರೀ ಮಾರುತಿ ಗಂಜಿಗೇರಿ, ಶ್ರೀ ಗೋಪಾಲ್ ಗಾರಂಪಳ್ಳಿ, ಶ್ರೀ ಶಂಕರ್ ಜಿ ಹಿಪ್ಪರಗಿ, ಶ್ರೀ ಕೆ. ಎಮ್. ಬಾರಿ ಅಧ್ಯಕ್ಷರು 1815 ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ, ಶ್ರೀ ಹನುಮಂತ್ ಪೂಜಾರಿ, ಶ್ರೀಮಂತ ಕಟ್ಟಿಮನಿ, ಮಲ್ಲೇಶಪ್ಪ ಕೆ. ಮೇಲ್ವಿಚಾರಕರು ಜನಜಾಗೃತಿ ಪ ಕಲಬುರ್ಗಿ, ವಲಯದ ಮೇಲ್ವಿಚಾರಕರು ಶಿವ ಪ್ರತಿನಿಧಿಗಳು ಸ್ವ ಸಹಾಯ ಸಂಘದವರು ನವಜೀವನ ಸಮಿತಿಯ ಸದಸ್ಯರು ಶೌರ್ಯ ಘಟಕದ ಸದಸ್ಯರು ಊರಿನ ಗಣ್ಯರು ಉಪಸ್ಥಿತರಿದ್ದರು
