ಕಂಪ್ಲಿ ತಾಲೂಕಿನಲ್ಲಿ 1816 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ

Janajagurthi Vedike News

ಕೊಪ್ಪಳ ಪ್ರಾದೇಶಿಕ ವಿಭಾಗದ ಕಂಪ್ಲಿ ತಾಲೂಕಿನ ಕುರುಗೋಡು ವಲಯದಲ್ಲಿ 1816 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀ ಹಿಮಯ್ಯ ಸ್ವಾಮಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು ಕಂಪ್ಲಿ, ಶ್ರೀ ಸುಧೀರ್, ಶ್ರೀ ಪಪ್ಪಯ್ಯ ಲಕ್ಷ್ಮೀಪುರ, ವೈದ್ಯಾಧಿಕಾರಿಗಳು ಶ್ರೀಮತಿ ರೂಪ ಜಾಲಿಹಾಳ್ ಸಮುದಾಯ ಆರೋಗ್ಯ ಕೇಂದ್ರ ಕುರುಗೋಡು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೊಪ್ಪಳ ಪ್ರಾದೇಶಿಕ ವ್ಯಾಪ್ತಿಯ ಮಾನ್ಯ ಜನಜಾಗೃತಿ ಯೋಜನಾಧಿಕಾರಿಗಳಾದ ಶ್ರೀ ನಾಗೇಶ್ ವೈ. ರವರು ವಾಸ್ತವಿಕವಾಗಿ ಮಾತನಾಡಿದರು. ಕಂಪ್ಲಿ ಯೋಜನಾ ಕಚೇರಿ ಮಾನ್ಯ ಯೋಜನಾಧಿಕಾರಿಗಳಾದ ಶ್ರೀ ಎಂ. ಎ. ಹಾಲಪ್ಪ ರವರು ಶಿಬಿರದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿ ಶ್ರೀ ದಿವಾಕರ್ ಪೂಜಾರಿ, ಆರೋಗ್ಯ ಸಹಾಯಕಿ ಕುಮಾರಿ ಶ್ವೇತಾ, ವಲಯ ಮೇಲ್ವಿಚಾರಕರು, ಕೊಪ್ಪಳ ಪ್ರಾದೇಶಿಕ ವ್ಯಾಪ್ತಿಯ ಜನಜಾಗೃತಿ ಮೇಲ್ವಿಚಾರಕರಾದ ಸಚಿನ್, ಊರಿನ ಗಣ್ಯರು, ಪೋಲಿಸ್ ಇಲಾಖೆ ಸಿಬ್ಬಂದಿಗಳು, ವಲಯ ಸೇವಾ ಪ್ರತಿನಿಧಿಗಳು, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.