ಉಡುಪಿ ಪ್ರಾದೇಶಿಕ ವಿಭಾಗದ ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆಯ ಕಾರ್ಯಕಾರಿ ಸಮಿತಿ ಸಭೆಯು ಜಿಲ್ಲಾ ವೇದಿಕೆಯ ಅಧ್ಯಕ್ಷರಾದ ಶ್ರೀ ನವೀನ್ ಚಂದ್ರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಉಡುಪಿ ಪ್ರಗತಿ ಸೌಧ ಸಭಾಂಗಣದಲ್ಲಿ ನಡೆಯಿತು. ಸಭೆಯನ್ನು ಜಿಲ್ಲಾಧ್ಯಕ್ಷರು ಮತ್ತು ತಾಲೂಕು ಅಧ್ಯಕ್ಷರು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿದರು. ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿಯವರಿಂದ ಹಿಂದಿನ ಸಭೆಯ ನಡವಳಿಕೆಗಳನ್ನು ವಾಚಿಸಿ ಅನುಮೋದಿಸಲಾಯಿತು. 2023-24ರ ವಾರ್ಷಿಕ ವರದಿಯನ್ನು ಜನಜಾಗೃತಿ ವೇದಿಕೆ ಯೋಜನಾಧಿಕಾರಿಗಳು ವಾಚಿಸಿದರು. 2024-25 ರ ವಾರ್ಷಿಕ ಕ್ರಿಯಾಯೋಜನೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಯೋಜನಾ ಕಛೇರಿಗಳಿಗೆ ತಲಾ 15 ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮಗಳು ನಡೆಸಲು ಯೋಜಿಸಲಾಗಿದ್ದು ಯಶಸ್ವಿಯಾಗಿಸಲು ತೀರ್ಮಾನಿಸಲಾಯಿತು. ಮದ್ಯವರ್ಜನ ಶಿಬಿರಗಳು ನಡೆಯಲಿದ್ದು ಕಾರ್ಕಳದಲ್ಲಿ ಈಗಾಗಲೇ ಒಂದು ಶಿಬಿರ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಉಳಿದಂತೆ ಬ್ರಹ್ಮಾವರ, ಹೆಬ್ರಿ, ಕುಂದಾಪುರ 2, ಉಡುಪಿ ಯೋಜನಾ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ಆಯೋಜಿಸಲು ತೀರ್ಮಾನಿಸಲಾಯಿತು. ಒಂದು ಶಿಬಿರವನ್ನು ಹೆಚ್ಚುವರಿಯಾಗಿ ನಿರೀಕ್ಷಿಸಲಾಗಿದ್ದು ಜಿಲ್ಲಾ ವೇದಿಕೆಯಿಂದ ಮನವಿ ನೀಡಲು ತೀರ್ಮಾನಿಸಲಾಯಿತು. ಯೋಜನೆಯ ಸ್ಥಳೀಯ ಕಾರ್ಯಕ್ರಮಗಳಲ್ಲಿ ಜನಜಾಗೃತಿ ವೇದಿಕೆಯ ಸದಸ್ಯರು ಪಾಲ್ಗೊಳ್ಳುವ ಬಗ್ಗೆ ಮತ್ತು ತ್ರೈಮಾಸಿಕ ಸಭೆಗಳಲ್ಲಿ ನವಜೀವನ ಸದಸ್ಯರಿಂದ ಪ್ರೇರಣ ಮಾಹಿತಿಯನ್ನು ಒದಗಿಸಲು ತೀರ್ಮಾನಿಸಲಾಯಿತು. ನವಜೀವನ ಸಮಿತಿಯ ಸದಸ್ಯರ ಅನುಪಾಲನೆ ಬಗ್ಗೆ ಚರ್ಚಿಸಿದ್ದು ವಲಯಕ್ಕೆ ಒಂದು ನವಜೀವನ ಸಮಿತಿ ರಚನೆ ಬಗ್ಗೆ ಕ್ರಮವಹಿಸಲು ಗೌರವಾನ್ವಿತ ಸದಸ್ಯರು ಸಲಹೆ ನೀಡಿದರು. ಈಗಾಗಲೇ 108 ಪೋಷಕರು ಕಾರ್ಯನಿರ್ವಹಿಸುತ್ತಿದ್ದು ಕಾರ್ಯಾಗಾರ ನಡೆಸಲು ಸಲಹೆ ನೀಡಲಾಯಿತು. ನವಜೀವನ ಸಮಿತಿಗಳ ಅನುಪಾಲನೆಗೆ ಜಿಲ್ಲೆಗೆ ಒಂದು ಮೇಲ್ವಿಚಾರಕರ ಅಗತ್ಯತೆಯ ಬಗ್ಗೆ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಲಹೆ ನೀಡಿದ್ದು ರಾಜ್ಯ ವೇದಿಕೆಗೆ ಬೇಡಿಕೆ ಕಳುಹಿಸಲು ತೀರ್ಮಾನಿಸಲಾಯಿತು. ಜಿಲ್ಲಾ ವೇದಿಕೆಗೆ ನೂತನ ಪದಾಧಿಕಾರಿಗಳಾಗಿ ಉಡುಪಿ ಯೋಜನಾ ವ್ಯಾಪ್ತಿಯಿಂದ ಶ್ರೀ ವಾಸುದೇವ ಭಟ್, ಕುಂದಾಪುರ 2 ಯೋಜನಾ ವ್ಯಾಪ್ತಿಯಿಂದ ಶ್ರೀ ದಯಾನಂದ ರಾವ್, ಬ್ರಹ್ಮಾವರ ಯೋಜನಾ ವ್ಯಾಪ್ತಿಯಿಂದ ಶ್ರೀ ಸಂಕಪ್ಪ ಶೆಟ್ಟಿ, ಕಾಪು ಯೋಜನಾ ವ್ಯಾಪ್ತಿಯಿಂದ ಗೀತಾಂಜಲಿ ಸುವರ್ಣ ರವರನ್ನು ಜಿಲ್ಹಾ ವೇದಿಕೆಗೆ ಜಿಲ್ಲಾಧ್ಯಕ್ಷರು ಹೂಗುಚ್ಛ ನೀಡುವ ಮೂಲಕ ಸ್ವಾಗತಿಸಿದರು. ಕುಂದಾಪುರ ತಾಲೂಕಿನ ಜನಜಾಗೃತಿ ವೇದಿಕೆಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ಉಮೇಶ್ ಶೆಟ್ಟಿ ಶಾನಕಟ್ ರವರನ್ನು ಹೂಗುಚ್ಚ ನೀಡಿ ಅಧ್ಯಕ್ಷರು ಅಭಿನಂದಿಸಿದರು. ಕಾರ್ಕಳದಲ್ಲಿ ಪ್ರಸ್ತುತ ವರ್ಷ ನಡೆದ ಶಿಬಿರದ ಯಶಸ್ವಿಗೆ ಶ್ರಮವಹಿಸಿದ ತಾಲೂಕು ವೇದಿಕೆಯ ಅಧ್ಯಕ್ಷರಾದ ಶ್ರೀ ಉದಯ ಕುಮಾರ ಹೆಗ್ಡೆ ಮತ್ತು ಸರ್ವ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಅಕ್ಟೋಬರ್ 2 ರ ಕಾರ್ಯಕ್ರಮ ಬಗ್ಗೆ ಮಾಹಿತಿ ನೀಡಿ ಮುಂದಿನ ಸಭೆಯಲ್ಲಿ ಚರ್ಚೆ ನಡೆಸಲು ತೀರ್ಮಾನಿಸಲಾಯಿತು. ಮಾನ್ಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ದುಗ್ಗೇ ಗೌಡರವರು ಮಾತನಾಡುತ್ತ ಯೋಜನೆಯ ಮೂಲಕ 2023-24 ರಲ್ಲಿ ಅನುಷ್ಠಾನಿಸಿದ ವಿವಿಧ ಪ್ರಗತಿ ಕಾರ್ಯಕ್ರಮಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಪ್ರಸ್ತುತ ದಿನಗಳಲ್ಲಿ ಯೋಜನೆಯ ಬಗ್ಗೆ ನಡೆಯುವ ಅಪಪ್ರಚಾರಗಳ ಬಗ್ಗೆ ಮಾರ್ಮಿಕವಾಗಿ ತಿಳಿಸಿದರು. ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ನವೀನ್ ಚಂದ್ರ ಶೆಟ್ಟಿ ರವರ ಅನುಮತಿ ಮೇರೆಗೆ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕರ ಅಭಿನಂದನಾ ಕಾರ್ಯಕ್ರಮ ಏರ್ಪಡಿಸುವ ಬಗ್ಗೆ ವಿಷಯ ಪ್ರಸ್ತಾಪಿಸಿದ್ದು ಸರ್ವ ಸದಸ್ಯರು ಚಪ್ಪಾಳೆ ಮೂಲಕ ಅನುಮೋದಿಸಿದರು. ಶೌರ್ಯ ತಂಡದ ಕಾರ್ಯಕ್ರಮಗಳ ಬಗ್ಗೆ ಅನುಭವ ಹಂಚಿಸಿಕೊಂಡರು. ಸ್ವಚ್ಛತಾ ಕಾರ್ಯಕ್ರಮಗಳನ್ನು ವೇದಿಕೆಯ ವತಿಯಿಂದ ಅನುಷ್ಠಾನಿಸಲು ಸಲಹೆ ನೀಡಿದರು. ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ನವೀನ್ ಅಮೀನ್ ಮಾತನಾಡಿ ಶುಭ ಹಾರೈಸಿದರು. ಜಿಲ್ಲಾ ವೇದಿಕೆಯ ಅಧ್ಯಕ್ಷರಾದ ಶ್ರೀ ನವೀನ್ ಚಂದ್ರ ಶೆಟ್ಟಿರವರು ಅಧ್ಯಕ್ಷೀಯ ನುಡಿಗಳನ್ನು ನುಡಿದರು.
