ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿ, ಜನಜಾಗೃತಿ ವೇದಿಕೆ ಕಲಬುರ್ಗಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತ ಮತ್ತು ಸಂಶೋಧನಾ ಕೆಂದ್ರ ಲಾಯಿಲ ಉಜಿರೆ, ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ ಬೆಂಗಳೂರು, ಚೆಟ್ಟಿನಾಡು ಸಿಮೆಂಟ್ ಪ್ರೈವೆಟ್ ಲಿಮಿಟೆಡ್ ಕಲ್ಲೂರು ವರ್ಕ್ಸ್ ಚಿಂಚೋಳಿ, ಸಿದ್ಧಸಿರಿ ಈಥೆನಾಲ್ ಮತ್ತು ಪವರ್ ಚಿಂಚೋಳಿ, ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟ ಬೀದರ್ ಕಲಬುರ್ಗಿ, ಯಾದಗಿರಿ ಕಲಬುರ್ಗಿ ಸಿಮೆಂಟ್ ಪ್ರೈವೆಟ್ ಲಿಮಿಟೆಡ್, ಚತ್ರಸಾಲ ಮೆಟ್ರಿಕ್ಸ್ ಪವರ್ ಪ್ರೈವೆಟ್ ಲಿ.ಪೋಲಕಪಳ್ಳಿ, ಸೆಲ್ಕೋ ಸೋಲಾರ್ ಪ್ರೈವೆಟ್ ಲಿಮಿಟೆಡ್ ಕಲಬುರ್ಗಿ, ಪ್ರಗತಿ ಸಾಮಾಜಿಕ ಶೈಕ್ಷಣಿಕ ಸೇವಾ ಸಂಸ್ಥೆ (ರಿ.) ಚಿಂಚೋಳಿ ಇವರ ಸಂಯುಕ್ತ ಆಶ್ರಯದಲ್ಲಿ ಪರಮ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಶ್ರೀಮತಿ ಮಾತೃಶ್ರೀ ಡಾ| ಹೇಮಾವತಿ ಅಮ್ಮನವರ ಮಾರ್ಗದರ್ಶನದಲ್ಲಿ ಪ್ರಗತಿಬಂದು ಸ್ವ ಸಹಾಯ ಸಂಘಗಳ ಒಕ್ಕೂಟ ಚಿಂಚೋಳಿ, ಪುರಸಭೆ ಚಿಂಚೋಳಿ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ, ದಾನಿಗಳ ಸಹಕಾರದೊಂದಿಗೆ ಜರಗುವ 1815 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಶ್ರೀ ಷ.ಬ್ರ.ಶಿವಕುಮಾರ ಶಿವಾಚಾರ್ಯರು ಸುಕ್ಷೇತ್ರ ನರನಾಳ ಇವರು ವಹಿಸಿದರು. ಕಾರ್ಯಕ್ರಮವನ್ನು ಶ್ರೀ ಸಂಗಮನಾಥ ಹಿರೇಮಠ ಡಿ.ವೈ.ಎಸ್.ಪಿ.ಕಲಬುರಗಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಶ್ರೀ ಕೆ.ಎಮ್.ಬಾರಿ ಅಧ್ಯಕ್ಷರು ಮಧ್ಯವರ್ಜನ ವ್ಯವಸ್ಥಾಪನ ಸಮಿತಿ ಚಿಂಚೋಳಿ ರವರು ವಹಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಗಣಪತಿ ಮಾಳಂಜಿ ಜಿಲ್ಲಾ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಕಲಬುರ್ಗಿ, ಶ್ರೀ ಮೊಹಮ್ಮದ್ ಮುನೀರ್ ಅಹ್ಮದ್ ಎ.ಸಿ.ಎಫ್ ಕಲಬುರ್ಗಿ, ಶ್ರೀ ರಾಜೇಶ್ ಕೆ. ಯೋಜನಾಧಿಕಾರಿಗಳು ಜನಜಾಗೃತಿ ಪ್ರಾದೇಶಿಕ ವಿಭಾಗ ಕಲಬುರ್ಗಿ, ಶ್ರೀ ಗೋಪಾಲ್ ಜಿ. ಕ್ಷೇತ್ರ ಯೋಜನಾಧಿಕಾರಿಗಳು ಚಿಂಚೋಳಿ, ಶ್ರೀ ಭೀಮಶೆಟ್ಟಿ ಮುರುಡಾ ಗೌರವಾಧ್ಯಕ್ಷರು ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಚಿಂಚೋಳಿ, ಶ್ರೀ ಶಂಕರ್ ರಾಠೋಡ್ ಕಾರ್ಯನಿರ್ವಹಣಾಧಿಕಾರಿ ತಾಲೂಕು ಪಂಚಾಯಿತ್ ಚಿಂಚೋಳಿ, ಶ್ರೀ ಡಾ. ಮಹ್ಮದ್ ಗಫಾರ್ ತಾಲೂಕು ವೈದ್ಯಾಧಿಕಾರಿಗಳು ಸ.ಆಸ್ಪತ್ರೆ ಚಿಂಚೋಳಿ, ಶ್ರೀಮತಿ ನರಸಮ್ಮ ಲಕ್ಷ್ಮಣ್ ಅವುಂಟಿ ಉಪಾಧ್ಯಕ್ಷರು, ಶ್ರೀ ಮಾರುತಿ ಗಂಜಿಗೇರಿ ಸದಸ್ಯರು, ಶ್ರೀ ಗೋಪಾಲ್ ಗಾರಂಪಳ್ಳಿ ಸದಸ್ಯರು, ಶ್ರೀ ಶಂಕರ್ ಜಿ ಹಿಪ್ಪರಗಿ ಸದಸ್ಯರು (ಜಿಲ್ಲಾ ಜನಜಾಗೃತಿ ವೇದಿಕೆ ಕಲಬುರ್ಗಿ), ಮಲ್ಲೇಶಪ್ಪ ಕೆ. ಮೇಲ್ವಿಚಾರಕರು ಜನಜಾಗೃತಿ ಪ್ರಾದೇಶಿಕ ವಿಭಾಗ ಕಲಬುರ್ಗಿ, ವಲಯದ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಸ್ವ ಸಹಾಯ ಸಂಘದ ಸದಸ್ಯರು, ನವಜೀವನ ಸಮಿತಿಯ ಸದಸ್ಯರು, ಶೌರ್ಯ ಸ್ವಯಂಸೇವಕರು ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.
