ಕೊಪ್ಪಳ ಪ್ರಾದೇಶಿಕ ವಿಭಾಗದ ರಾಯಚೂರು ಜಿಲ್ಲಾ ಜನಜಾಗೃತಿ ವೇದಿಕೆ ಸಭೆ ಮಾನ್ಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಜೆ. ಚಂದ್ರಶೇಖರ್, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ಭೋವಿ, ಉಪಾಧ್ಯಕ್ಷರಾದ ಶ್ರೀ ಮೊಹಮ್ಮದ್ ರಫಿ, ನಿರ್ದೇಶಕರಾದ ಶ್ರೀ ಮೋಹನ್ ನಾಯ್ಕ್ ಉಪಸ್ಥಿತಿಯಲ್ಲಿ ನಡೆಯಿತು. ಸಭೆಯಲ್ಲಿ 2023-24 ನೇ ಆರ್ಥಿಕ ವರ್ಷದ ಸಾಧನೆಯ ವಿಮರ್ಶೆ, 2024-25 ನೇ ವರದಿ ವರ್ಷದ ಜನಜಾಗೃತಿ ಕಾರ್ಯಕ್ರಮಗಳ ಕ್ರಿಯಾಯೋಜನೆಯ ತಾಲೂಕುವಾರು ಹಂಚಿಕೆಯ ವಿಮರ್ಶೆ, ಜಿಲ್ಲಾ ಜನಜಾಗೃತಿಯ ಖಾತೆ ಬದಲಾವಣೆ, 2024-25 ರ ಮೊದಲ ತ್ರೈಮಾಸಿಕ ಅವಧಿಯ ಮಧ್ಯವರ್ಜನ ಶಿಬಿರ, ತಂಬಾಕು ಮತ್ತು ಮಾದಕ ವಸ್ತು ವಿರೋಧಿ ದಿನಾಚರಣೆ, ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ, ನವಜೀವನೋತ್ಸವ ಕಾರ್ಯಕ್ರಮ, ಅರೋಗ್ಯ ರಕ್ಷಾ ಕಾರ್ಯಕ್ರಮ, ಜನಜಾಗೃತಿ ಪದಾಧಿಕಾರಿಗಳ ಹೊಸ ಆಯ್ಕೆ, ನವಜೀವನ ಪೋಷಕರ ತರಬೇತಿ ಮತ್ತು ಸ್ವಾಸ್ಥ್ಯ ಸಂಕಲ್ಪ ತರಬೇತುದಾರರ ತರಬೇತಿ, ಸಾಮಾಜಿಕ ಅರಣ್ಯೀಕರಣ, ಗಿಡನಾಟಿ ಕಾರ್ಯಕ್ರಮ ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು, ಕ್ಷೇತ್ರ ಯೋಜನಾಧಿಕಾರಿಗಳು, ಜನಜಾಗೃತಿ ವಿಭಾಗದ
ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.
