ತಿಪಟೂರಿನಲ್ಲಿ 1800 ನೇ ಮಧ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ

Janajagurthi Vedike News

ಬೆಂಗಳೂರು ಪ್ರಾದೇಶಿಕ ವಿಭಾಗದ ತಿಪಟೂರು ತಾಲೂಕಿನ ಸಿಂಗ್ರಿ ನಂಜಪ್ಪ ಕಲ್ಯಾಣ ಮಂಟಪದಲ್ಲಿ 1800ನೇ ಮಧ್ಯವರ್ಜನ ಶಿಬಿರವು ಕೆರೆ ಕೋಡಿ ರಂಗಪುರ ಸುಕ್ಷೇತ್ರದ ಅಮೆರಿಕ ಶ್ರೀ ಶ್ರೀ ಶ್ರೀಗುರು ಪರದೇಶಿ ಕೇಂದ್ರ ಮಹಾಸ್ವಾಮಿಯವರ ದಿವ್ಯ ಸಾನಿಧ್ಯದಲ್ಲಿ ಉದ್ಘಾಟನೆಗೊಂಡಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಬಿರದ ಅಧ್ಯಕ್ಷರಾದ ಶ್ರೀ ಟಿ.ಸಿ. ಗಂಗಾಧರ್ ರವರು ವಹಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕರಾದ ಶ್ರೀ ಸತೀಶ್ ಸುವರ್ಣ, ಸಮಾಜ ಸೇವಕರು ನಿವೃತ್ತ ಎಸಿಪಿಗಳಾದ ಶ್ರೀ ಲೋಕೇಶ್ವರ್, ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿಗಳಾದ ಡಾ. ರಕ್ಷಿತ್, ತಿಪಟೂರು ನಗರಸಭೆ ಮಾಜಿ ಅಧ್ಯಕ್ಷರಾದ ಶ್ರೀ ರಾಮ್ ಮೋಹನ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಶ್ರೀ ಪ್ರತಾಪ್ ಸಿಂಗ್, ತಿಪಟೂರು ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ
ಶ್ರೀ ಶಶಿಕಿರಣ್, ನಗರ ಸಭೆ ಸದಸ್ಯರಾದ ಶ್ರೀ ಸಂಗಮೇಶ್, ನವಜೀವನ ಸಮಿತಿ ಸದಸ್ಯರು, ಸೇವಾ ಪ್ರತಿನಿಧಿಗಳು, ಯೋಜನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.