ಹುಬ್ಬಳ್ಳಿ ತಾಲೂಕಿನ ನವನಗರ ವಲಯದ ನವನಗರದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮನ್ನು ಧಾರವಾಡ ಪ್ರಾದೇಶಿಕ ನಿರ್ದೇಶರಾದ ದಯಾಶೀಲ ರವರು ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ರಾಜ್ಯಾಧ್ಯಕ್ಷರಾದ ರಾಜಣ್ಣ ಕೊರವಿ ರವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕ್ಯಾನ್ಸರ್ ರೋಗ ಲಕ್ಷಣಗಳ ತಜ್ಞರಾದ ಉಮೇಶ್ ಹಳ್ಳಿಕೇರಿ, ಮುಖ್ಯ ಅತಿಥಿಗಳಾಗಿ ಜಿಲ್ಲಾ ನಿರ್ದೇಶಕರಾದ ಪ್ರದೀಪ್ ಶೆಟ್ಟಿ, ಜನಜಾಗೃತಿ ವೇದಿಕೆ ಸದಸ್ಯರಾದ ನಾರಾಯಣ ಬಡಿಗೇರ, ಚಿದಾನಂದ ಮಾಯಾಚಾರಿ, ಒಕ್ಕೂಟ ಅಧ್ಯಕ್ಷರಾದ ನಿರ್ಮಲಾ ಪೂಜಾರ ಉಪಸ್ಥಿತರಿದ್ದರು.
