ಹೊಸಪೇಟೆ ಜಿಲ್ಲಾ ಜನಜಾಗೃತಿ ವೇದಿಕೆ ಸಭೆ

Janajagurthi Vedike News

ಹೊಸಪೇಟೆ ಜಿಲ್ಲಾ ಜನಜಾಗೃತಿ ವೇದಿಕೆಯ ಸಭೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀ ಶಿವಪ್ಪ ಕಾವಲಿ, ಉಪಾಧ್ಯಕ್ಷರಾದ ಶ್ರೀಮತಿ ಶಿವಕಲಾ, ಕೋಶಾಧಿಕಾರಿ ಶ್ರೀ ಪ್ರಕಾಶ್, ನಿರ್ದೇಶಕರಾದ ಶ್ರೀ ಸತೀಶ್ ಶೆಟ್ಟಿ, ಬಾದಾಮಿ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ನಟರಾಜ್ ಉಪಸ್ಥಿತಿಯಲ್ಲಿ ನಡೆಸಲಾಯಿತು. 2023-24 ನೇ ಆರ್ಥಿಕ ವರ್ಷದ ಸಾಧನೆಯ ವಿಮರ್ಶೆ, 2024-25 ನೇ ವರದಿ ವರ್ಷದ ಜನಜಾಗೃತಿ ಕಾರ್ಯಕ್ರಮಗಳ ಕ್ರಿಯಾಯೋಜನೆಯ ತಾಲೂಕುವಾರು ಹಂಚಿಕೆಯ ವಿಮರ್ಶೆ, ಜಿಲ್ಲಾ ಜನಜಾಗೃತಿಯ ಖಾತೆ ಬದಲಾವಣೆ, 2024-25 ನೇ ಮೊದಲ ತ್ರೈಮಾಸಿಕ ಅವಧಿಯ ಮಧ್ಯವರ್ಜನ ಶಿಬಿರ, ತಂಬಾಕು ಮತ್ತು ಮಾದಕ ವಸ್ತು ವಿರೋಧಿ ದಿನಾಚರಣೆ, ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ, ನವಜೀವನೋತ್ಸವ ಕಾರ್ಯಕ್ರಮ, ಅರೋಗ್ಯ ರಕ್ಷಾ ಕಾರ್ಯಕ್ರಮ, ಜನಜಾಗೃತಿ ಪದಾಧಿಕಾರಿಗಳ ಹೊಸ ಆಯ್ಕೆ, ನವಜೀವನ ಪೋಷಕರ ತರಬೇತಿ ಮತ್ತು ಸ್ವಾಸ್ಥ್ಯ ಸಂಕಲ್ಪ ತರಬೇತುದಾರರ ತರಬೇತಿ ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷರು, ಜಿಲ್ಲಾ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು ಹಾಗೂ ಕ್ಷೇತ್ರ ಯೋಜನಾಧಿಕಾರಿಗಳು, ಜನಜಾಗೃತಿ ವಿಭಾಗದ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.