ಶ್ರೀರಂಗಪಟ್ಟಣ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ

Janajagurthi Vedike News

ಶ್ರೀರಂಗಪಟ್ಟಣ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಕಾಲೇಜು ಪ್ರಾಂಶುಪಾಲರಾದ ಡಾಕ್ಟರ್ ಎಂ. ಕೆ. ಮಂಜುಳಾ ರವರು ಉದ್ಘಾಟಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ದುಶ್ಚಟದ ವಿರುದ್ಧ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದ್ದು ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಂಡು ಇದರ ವಿರುದ್ಧ ನಿಲ್ಲಬೇಕೆಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿಯಾದ ಪ್ರಾಥಮಿಕ ಆರೋಗ್ಯ ಕೇಂದ್ರ ಶ್ರೀರಂಗಪಟ್ಟಣದ ಶಿಕ್ಷಣಾಧಿಕಾರಿಯಾದ ಎಸ್. ಡಿ. ಬನ್ನೂರ್ ರವರು ತಂಬಾಕಿನಿಂದ ಆಗುವ ಪರಿಣಾಮದ ಬಗ್ಗೆ ಚಾರ್ಟ್ ಮೂಲಕ ತೋರಿಸಿ, ಇದರಿಂದ ಆಗುವ ದುಷ್ಪರಿಣಾಮದ ಬಗ್ಗೆ, ಆರೋಗ್ಯದಲ್ಲಾಗುವ ಅನಾಹುತದ ಬಗ್ಗೆ ತಿಳಿಸಿದರು. ಜನಜಾಗೃತಿ ವೇದಿಕೆಯ ಸದಸ್ಯರಾದ ಅಪ್ಪಾಜಿಯವರು ದುಶ್ಚಟದ ವಿರುದ್ಧ ಪ್ರತಿಜ್ಞಾ ಸ್ವೀಕಾರ ಉತ್ತಮ ನಾಯಕನ ಲಕ್ಷಣ ಎಂದು ತಿಳಿಸಿದರು. ಜನಜಾಗೃತಿ ವೇದಿಕೆಯ ಸದಸ್ಯರಾದ ನಳಿನಿ ರವರು ತಂಬಾಕು ಸೇವನೆಯಿಂದ ಕುಟುಂಬವನ್ನು ದೂರವಿಡಿ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಸಮನ್ವಯಧಿಕಾರಿ ಶಕುಂತಲಾ ಗೌಡ, ವಲಯದ ಮೇಲ್ವಿಚಾರಕರಾದ ಅಶ್ವಿನಿ ರವರು ಉಪಸ್ಥಿತರಿದ್ದರು ಹಾಗೂ ನೂರಾಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡರು.