ಮೈಸೂರು ಪ್ರಾದೇಶಿಕ ವಿಭಾಗದ ತೆರಕಣಾಂಬಿ ಯೋಜನಾ ಕಛೇರಿ ವ್ಯಾಪ್ತಿಯ ನವಜೀವನ ಸಮಿತಿ ಸದಸ್ಯರ ನವಜೀವನೋತ್ಸವ ಮತ್ತು ಸಹಸ್ರ ಬಿಲ್ವಾರ್ಚನೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷರಾದ ಪ್ರಸಾದ್ ಉರ್ಗಹಳ್ಳಿ ಮತ್ತು ಜನಜಾಗೃತಿ ವೇದಿಕೆಯ ಸದಸ್ಯರು ನೆರವೇರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷರಾಗಿರುವ ಪ್ರಸಾದ ಉರ್ಗಹಳ್ಳಿ ಯವರು ವಹಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಮೈಸೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಮಾಧವ ರವರು ಮಾತನಾಡಿ ಪಾನಮುಕ್ತ ಸದಸ್ಯರು ಸಂಘಟನೆಯನ್ನು ಕಟ್ಟಿ ಸದೃಢರಾಗಬೇಕು ನಮ್ಮ ಮಕ್ಕಳಿಗೆ ನಾವು ಮಾರ್ಗದರ್ಶಕರಾಗಬೇಕು, ಗ್ರಾಮಾಭಿವೃದ್ಧಿ ಯೋಜನೆ ಅನ್ನೋದು ಜಾಲಿ ಮರವಲ್ಲ ಅದೊಂದು ಆಶ್ರಯ ನೀಡುವ ಛತ್ರಿಯಾಗಿದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಪ್ರಸಾದ್ ಉರ್ಗಹಳ್ಳಿ, ಬಸವರಾಜಪ್ಪ ,ಚಂದ್ರು ಲಕ್ಕರು ಇವರು ನವಜೀವನ ಸಮಿತಿ ಸದಸ್ಯರಿಗೆ ಶುಭ ಹಾರೈಕೆ ಮಾಡಿದರು. ತೆರಕಣಾಂಬಿ ತಾಲೂಕಿನ ಯೋಜನಾಧಿಕಾರಿ ದಿನೇಶ್ ರವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಪ್ರತಿ ತಿಂಗಳು ಯೋಜನಾ ಕಚೇರಿಯಲ್ಲಿ ನಡೆಸುವ ನವಜೀವನ ಸಮಿತಿ ಸದಸ್ಯರ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಿಮ್ಮ ಮನಸ್ಸನ್ನು ಸದೃಢಗೊಳಿಸಬೇಕು ಇನ್ನಷ್ಟು ಜನರಿಗೆ ನೀವು ಮಾರ್ಗದರ್ಶಕರಾಗಬೇಕು ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಶಿಬಿರದ ಪ್ರಮಾಣ ಪತ್ರವನ್ನು ನವಜೀವನ ಸಮಿತಿ ಸದಸ್ಯರಿಗೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳಾದ ಬಸವರಾಜಪ್ಪ, ಮಂಗಳಮ್ಮ, ಚಂದ್ರು ಲಕ್ಕರು ಮತ್ತು ಮೈಸೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಮಾಧವ ನಾಯಕ್ , ತೆರಕಣಾಂಬಿ ಯೋಜನಾ ಕಚೇರಿಯ ಯೋಜನಾಧಿಕಾರಿ ದಿನೇಶ್, ಮೈಸೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ಮೇಲ್ವಿಚಾರಕರಾದ ವಸಂತ, ಜನಜಾಗೃತಿ ಪ್ರಾದೇಶಿಕ ಕಚೇರಿ ಬೆಳ್ತಂಗಡಿಯ ಆರೋಗ್ಯ ಸಹಾಯಕಿ ಪ್ರೆಸಿಲ್ಲ ಡಿ’ಸೋಜ, ಮೇಲ್ವಿಚಾರಕರಾದ ಚಂದ್ರಶೇಖರ್ ಮತ್ತು ತಾಲೂಕಿನ ಸೇವಾ ಪ್ರತಿನಿಧಿಗಳು, ನವಜೀವನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
