ಜಗಳೂರು ಜಿಲ್ಲಾ ನವಜೀವನ ಪೋಷಕರ ತರಬೇತಿ ಕಾರ್ಯಗಾರವನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಅರವಿಂದನ್ ಪಿ. ಎಸ್. ಮತ್ತು ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾಯಸ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಜನಜಾಗೃತಿ ಕಾರ್ಯಕ್ರಮದಲ್ಲಿ ಪೋಷಕರ ಜವಾಬ್ದಾರಿಗಳ ಬಗ್ಗೆ ಮಾನ್ಯ ಪ್ರಾದೇಶಿಕ ನಿರ್ದೇಶಕರು ಮಾಹಿತಿ ಮಾರ್ಗದರ್ಶನ ನೀಡಿದರು. ಮದ್ಯವರ್ಜನ ಶಿಬಿರ, ನವಜೀವನ ಸಮಿತಿ ರಚನೆ, ನವಜೀವನ ಸಮಿತಿ ಬಲವರ್ಧನೆ, ಮಾಸಿಕ ಸಭೆಯಲ್ಲಿ ಭಜನೆ, ಫ್ರೀ ಕಾನ್ಫರೆನ್ಸ್ ಸಭೆ, ಶಿಬಿರಕ್ಕೆ ಶಿಬಿರಾರ್ಥಿಗಳ ಆಯ್ಕೆ, ಆರೋಗ್ಯದ ಬಗ್ಗೆ ಕಾಳಜಿ, ಸ್ವ-ಸಹಾಯ ಸಂಘ ರಚನೆ, ಅಥವಾ ಸಂಘಕ್ಕೆ ಸೇರ್ಪಡೆ, ಸಭೆ ನಡೆಸುವ ರೀತಿ, ಕಾರ್ಯಕ್ರಮ ಅನುಷ್ಠಾನದ ಗೌರವ ಧನ, ಸುತ್ತೊಲೆಗಳ ಜೊತೆ ಕಾರ್ಯಕ್ರಮ ಅನುಷ್ಠಾನ, ಸ್ವಾಸ್ಥ್ಯ ಸಂಕಲ್ಪ, ಜೂನ್ 26 ಮತ್ತು ಮೇ 31ರ ಕಾರ್ಯಕ್ರಮ ಅನುಷ್ಠಾನದ ಬಗ್ಗೆ ನಿದರ್ಶನಗಳ ಜೊತೆ ಮಾಹಿತಿ ಮಾರ್ಗದರ್ಶನ ನೀಡಿದರು. ಜಿಲ್ಲಾ ನಿರ್ದೇಶಕರು, ಜಗಳೂರು ಜಿಲ್ಲೆಯ ಯೋಜನ ವ್ಯಾಪ್ತಿಯ ಯೋಜನಾದಿಕಾರಿಗಳು, ಜನಜಾಗೃತಿ ಯೋಜನಾಧಿಕಾರಿಗಳು, ಮೇಲ್ವಿಚಾರಕರು ಉಪಸ್ಥಿತರಿದ್ದರು.
