ಉಡುಪಿ ಪ್ರಾದೇಶಿಕ ವಿಭಾಗದ ಉತ್ತರ ಕನ್ನಡ 2 ಜಿಲ್ಲೆಯ ಜಿಲ್ಲಾ ಮಟ್ಟದ ಪೋಷಕರ ತರಬೇತಿ ಕಾರ್ಯಗಾರ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಉತ್ತರ ಕನ್ನಡ 2 ಜಿಲ್ಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ನವಜೀವನ ಸಮಿತಿ ಸದಸ್ಯರ ಅನುಪಾಲನೆ ಹಾಗೂ ಜನಜಾಗೃತಿ ಕಾರ್ಯಕ್ರಮಗಳ ಸಂಪೂರ್ಣ ಅನುಷ್ಠಾನದ ಬಗ್ಗೆ ನವಜೀವನ ಪೋಷಕರ ತರಬೇತಿ ಕಾರ್ಯಗಾರವು ಕೆ.ವಿ.ಕೆ ಶಿರಸಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರು ಹಾಗೂ ವೇದಿಕೆಯ ರಾಜ್ಯ ಕಾರ್ಯದರ್ಶಿಗಳಾದ ವಿವೇಕ್ ವಿನ್ಸೆಂಟ್ ಪಾಯ್ಸ್ ರವರು ನೆರವೇರಿಸಿ ಪೋಷಕರಿಗೆ ತರಬೇತುದಾರರಾಗಿ ತರಬೇತಿ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು. ಇವರು ಮಾತನಾಡುತ್ತಾ “ಮಗುವನ್ನು ತಾಯಿಯು ಕೈಹಿಡಿದು ಪೋಷಿಸಿದಂತೆ ನವಜೀವನ ಸಮಿತಿ ಸದಸ್ಯರನ್ನು ತಾಯಿಯ ಹಾಗೆ ಪೋಷಕರು ಪೋಷಣೆ ಮಾಡಿದಾಗ ಜನಜಾಗೃತಿ ಕಾರ್ಯಕ್ರಮ ಯಶಸ್ವಿಯಾಗುತ್ತದೆ” ನವಜೀವನ ಸಮಿತಿ ಸಮಗ್ರವಾಗಿ ಅನುಪಾಲನೆಯ ಬಗ್ಗೆ ಪರಿಣಾಮಕಾರಿಯಾದ ಮಾರ್ಗದರ್ಶನವನ್ನು ನೀಡಿದರು. ಯೋಜನೆಯ ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕ ರವರು ಪ್ರಸ್ತಾವಿಕ ಮಾತುಗಳನಾಡಿದರು. ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ವಿವೇಕ್ ರಾಯ್ಕರ್ ರವರು ಭಾಗವಹಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ವೇದಿಕೆಯ ಉಪಾಧ್ಯಕ್ಷರಾದ ಶ್ರೀಮತಿ ಗೌರಿ ಯೋಜನಾಧಿಕಾರಿಗಳಾದ ರಾಘವೇಂದ್ರ, ಗಿರೀಶ್ ರವರು ಭಾಗವಹಿಸಿದರು. ತರಬೇತಿ ಕಾರ್ಯಗಾರದ ನಿರ್ವಹಣೆಯನ್ನು ಜನಜಾಗೃತಿ ವೇದಿಕೆಯ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಗಣೇಶ್ ಆಚಾರ್ಯರವರು ನೆರವೇರಿಸಿದರು. ಜಿಲ್ಲಾ NRLM ರಾಮಕೃಷ್ಣ ರವರು ಸಹಕರಿಸಿದರು. ಶಿರಸಿ, ಸಿದ್ದಾಪುರ, ಯಲ್ಲಾಪುರ ಮೂರು ತಾಲೂಕಿನ ನವಜೀವನ ಪೋಷಕರು ತರಬೇತಿಯ ಪ್ರಯೋಜನವನ್ನು ಪಡೆದರು. ತರಬೇತಿಯನ್ನು ಪಡೆದ ಎಲ್ಲಾ ಪೋಷಕರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಜೊತೆಗೆ ಅನುಪಾಲನೆಯ ಬಗ್ಗೆ ಕರಪತ್ರಗಳನ್ನು  ವಿತರಿಸಲಾಯಿತು.