ಮೈಸೂರು ಪ್ರಾದೇಶಿಕ ವ್ಯಾಪ್ತಿಯ ನವಜೀವನ ಸಮಿತಿ ಸದಸ್ಯರ ಹೈನುಗಾರಿಕಾ ಸ್ವದ್ಯೋಗ ತರಬೇತಿಯನ್ನು ಮೈಸೂರು ಪ್ರಾದೇಶಿಕ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ಜಯರಾಮ ನೆಲ್ಲಿತ್ತಾಯ ಅವರು ಉದ್ಘಾಟನೆಯನ್ನು ಮಾಡಿ ಫಲಾನುಭವಿಗಳಿಗೆ ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ರೂಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಸರಿತಾ ಅವರು ಜನಜಾಗೃತಿ ಯೋಜನಾಧಿಕಾರಿ ಮಾಧವ ನಾಯಕ್, ಜ್ಞಾನವಿಕಾಸ ಯೋಜನಾಧಿಕಾರಿ ಶ್ರೀಮತಿ ಮೂಕಾಂಬಿಕಾ, ಜನಜಾಗೃತಿ ಮೇಲ್ವಿಚಾರಕರಾದಂತಹ ವಸಂತ್ ರವರು ಉಪಸ್ಥಿತರಿದ್ದರು.
