ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ನವಜೀವನ ಸದಸ್ಯರ ಸ್ವ ಉದ್ಯೋಗ ತರಬೇತಿ ಉದ್ಘಾಟನಾ ಕಾರ್ಯಕ್ರಮ

Janajagurthi Vedike News

ಧಾರವಾಡದ ರುಡ್ಸೆಟ್ ಸೆಟ್ ಸಂಸ್ಥೆಯಲ್ಲಿ ಹೈನುಗಾರಿಕೆ ಮತ್ತು ಎರಗೊಬ್ಬರ ತಯಾರಿಕೆಯ 10 ದಿನಗಳ ಸ್ವಉದ್ಯೋಗ ತರಬೇತಿಯನ್ನು ಉದ್ಘಾಟಿಸಿ ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ದಯಾಶೀಲ ರವರು ಬದುಕಿನಲ್ಲಿ ಎಲ್ಲೋ ಕೂತು ಏನೋ ಮಾಡುತ್ತಿದ್ದವರು ಮಧ್ಯವರ್ಜನ ಶಿಬಿರದಮುಖಾಂತರ ಬದಲಾಗಿಇದೀಗ ರುಡ್ಸೆಟ್ ಸಂಸ್ಥೆಯಲ್ಲಿಕೂತು ತರಬೇತಿಯಲ್ಲಿ ಭಾಗವಹಿಸುವ ಮಟ್ಟಕ್ಕೆಬಂದಿದ್ದೀರಿ ಇದಕ್ಕೆ ಕಾರಣ ಪೂಜ್ಯರ ಪ್ರೀತಿಯ ಕಾರ್ಯಕ್ರಮ ಜನಜಾಗೃತಿ,ಮುಂದೆ ಭಾಗವಹಿಸಿದ ತಾವೆಲ್ಲರೂ ಉತ್ತಮ ಸ್ವ-ಉದ್ಯೋಗ ದಾರಿಗಳಾಗಬೇಕೆಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕರಾದ ಗವಿಸಿದ್ದಪ್ಪ ರವರು ವಹಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಧಾರವಾಡ ಜಿಲ್ಲಾ ನಿರ್ದೇಶಕರಾದ ಪ್ರದೀಪ್ ಶೆಟ್ಟಿ, ಜನಜಾಗೃತಿ ಯೋಜನಾಧಿಕಾರಿ ಭಾಸ್ಕರ್ ಉಪಸ್ಥಿತರಿದ್ದರು.