ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ಗೋಕಾಕ -2 ಜಿಲ್ಲಾ ವ್ಯಾಪ್ತಿಯ ಸವದತ್ತಿ ತಾಲೂಕಿನಲ್ಲಿ ನವಜೀವನೋತ್ಸವ ಕಾರ್ಯಕ್ರಮ

Janajagurthi Vedike News

ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ಗೋಕಾಕ -2 ಜಿಲ್ಲಾ ವ್ಯಾಪ್ತಿಯ ಸವದತ್ತಿ ತಾಲೂಕಿನ ಮುನವಳ್ಳಿ ಕುಮಾರೇಶ್ವರ ಸಭಾಭವನದಲ್ಲಿ ನಡೆಯುತ್ತಿರುವ ನವಜೀವನ ಸದಸ್ಯರ ನವಜೀವನೋತ್ಸವ ಕಾರ್ಯಕ್ರಮವನ್ನು ಧಾರವಾಡ ಪ್ರಾದೇಶಿಕ ಕಛೇರಿಯ ಗೌರವಾನ್ವಿತ ಪ್ರಾದೇಶಿಕ ನಿರ್ದೇಶಕರಾದ ವಸಂತ ಸಾಲಿಯನ್ ರವರು ದೀಪ ಬೆಳಗಿಸುವ ಮುಖೇನ ಉದ್ಘಾಟಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಮ.ನಿ.ಪ್ರ.ಸ್ವ. ಮುರುಗೇಂದ್ರ ಮಹಾಸ್ವಾಮಿಗಳು ವಹಿಸಿಕೊಂಡಿದ್ದರು. ಸಭೆಯಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಸುಭಾಷ್ ಹನಸಿ, ಪುರಸಭೆ ಸದಸ್ಯರಾದ ಸುಭಾಷ್ ಗೌಡ ಗಿರಿ ಗೌಡ್ರು, ಜಿಲ್ಲಾ ನಿರ್ದೇಶಕರಾದ ಎಚ್ಆರ್ ಲವಕುಮಾರ್, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರುಗಳಾದ ಮಹಾಂತೇಶ್ ಕಾಜಗಾರ, ಶ್ರೀ ಸುರೇಶ್ ಹಟ್ಟಿ, ಮಾಂತಯ್ಯ ಯರಗಟ್ಟಿ ಮಠ, ಈಶ್ವರ್ ಕರಿಕಟ್ಟಿ, ಶ್ರೀಮತಿ ಪಂಚವ್ವ ಮೇಟಿ, ಜನಜಾಗೃತಿ ಯೋಜನಾಧಿಕಾರಿ ಭಾಸ್ಕರ್ ಎನ್, ಸವದತ್ತಿ ತಾಲೂಕಿನ ಯೋಜನಾಧಿಕಾರಿ ಶ್ರೀ ಹರೀಶ್, ವಲಯದ ಮೇಲ್ವಿಚಾರಕ ಪ್ರಕಾಶ್, ಜನಜಾಗೃತಿ ಮೇಲ್ವಿಚಾರಕ ಉಮೇಶ್, ಆರೋಗ್ಯ ಸಹಾಯಕಿ ರಂಜನಾ, ಕೃಷಿ ಮೇಲ್ವಿಚಾರಕ ಅಣ್ಣಪ್ಪ, ತಾಲೂಕಿನ ಎಲ್ಲ ನವಜೀವನ ಪೋಷಕರು, ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.