ಖಾನಾಪುರ ತಾಲೂಕಿನ ನಂದಗಡವಲಯದಲ್ಲಿ ನವಜೀವನೋತ್ಸವ ಕಾರ್ಯಕ್ರಮ

Janajagurthi Vedike News

ಖಾನಾಪುರ ತಾಲೂಕಿನ ನಂದಗಡ ವಲಯದ ಶ್ರೀ ಬಸಪಣ್ಣ ಅರಗಾವಿ ಕಲ್ಯಾಣ ಮಂಟಪದಲ್ಲಿ ನವಜೀವನೋತ್ಸವ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ತಾಲೂಕು ಯೋಜನಾಧಿಕಾರಿ ಗಣಪತಿ ನಾಯ್ಕ, ಜನಜಾಗೃತಿ ಪ್ರಾದೇಶಿ ಯೋಜನಾಧಿಕಾರಿ ಭಾಸ್ಕರ್, ಒಕ್ಕೂಟದ ಅಧ್ಯಕ್ಷರು, ಊರಿನ ಮುಖಂಡರು ಉಪಸ್ಥರಿದ್ದು ಸಂದರ್ಭಕ್ಕೆ ಪೂರಕವಾಗಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ನಿಟ್ಟಿನಲ್ಲಿ ನವಜೀವನ ಸದಸ್ಯರು ತೊಡಗಿಸಿಕೊಳ್ಳಬೇಕಾದ ಬಗೆಗೆ ಮಾಹಿತಿ ನೀಡಲಾಯಿತು. ಎಲ್ಲಾ ನವಜೀವನ ಸಮಿತಿಯ ಸದಸ್ಯರಿಗೆ ಹಿತ್ತಾಲೆಯ ದೀಪವನ್ನು ನೀಡಿ ಶುಭ ಹಾರೈಸಲಾಯಿತು. ಸುಮಾರು 35 ಮಂದಿ ನವ ಜೀವನ ಸದಸ್ಯರು ಅವರ ಕುಟುಂಬದವರು,ಶೌರ್ಯ ಸ್ವಯಂಸೇವಕರು, ಉಪಸ್ಥಿತರಿದ್ದರು.