ಚಿಕ್ಕಜಾಜೂರು ಯೋಜನಾ ವ್ಯಾಪ್ತಿಯ ನವಜೀವನ ಸದಸ್ಯರ ಭಜನಾ ಕಾರ್ಯಕ್ರಮವನ್ನು ಬನಶಂಕರಿ ಸಮುದಾಯ ಭವನದಲ್ಲಿ ನಡೆಸಲಾಯಿತು. ಮಂಜುನಾಥ ಸ್ವಾಮಿಗೆ ವಿಶೇಷವಾದ ಪೂಜೆಯನ್ನು ನವಜೀವನ ಸದಸ್ಯರು ಸಲ್ಲಿಸಿದರು ಈ ಶುಭ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ ಪಾಯಾಸ್ ನೆರವೇರಿಸಿ ನವ ಜೀವನ ಸಮಿತಿಗಳು ಬಲವರ್ಧನೆ ನವ ಜೀವನ ಸದಸ್ಯರ ಸಾಧನೆಗಳು ಉತ್ತಮ ಜೀವನ ಆರೋಗ್ಯ ಕೌಟುಂಬಿಕ ಜೀವನ ಸಾಮಾಜಿಕ ಜೀವನ ವೈಯಕ್ತಿಕ ಜೀವನ ಔದ್ಯೋಗಿಕ ಜೀವನದ ಬಗ್ಗೆ ಮಾರ್ಗದರ್ಶನವನ್ನು ನೀಡಿದರು. ಸಂಘಟನೆಗಳ ಮೂಲಕ ದುಶ್ಚಟ ಮುಕ್ತ ಸಮಾಜವನ್ನು ನಿರ್ಮಾಣ ಮಾಡಿ ಆನಮುಕ್ತ ಗ್ರಾಮವನ್ನಾಗಿ ಮಾಡುವಂತಹ ಯೋಚನೆಯನ್ನು ಎಲ್ಲಾ ನವಜೀವನದವರು ಮತ್ತು ಸಾರ್ವಜನಿಕರು ಮಾಡಬೇಕಾಗಿ ವಿನಂತಿಸಿದರು. ಪ್ರಾಸ್ಥವಿಕವಾಗಿ ದಿನೇಶ್ ಪೂಜಾರಿ ನಿರ್ದೇಶಕರು ಚಿತ್ರದುರ್ಗ ಮಾತನಾಡಿದರು ಜಿಲ್ಲಾ ಜನ ಜಾಗೃತಿ ವೇದಿಕೆಯ ಸದಸ್ಯರಾದ ಬಿಜಿ ಪುಟ್ಟಸ್ವಾಮಿ, ರಮೇಶ್ ಗೌಡ ದುಮ್ಮಿ, ರಾಮದಾಸ್ ಕಾರ್ಯದರ್ಶಿಗಳು ಬನಶಂಕರಿ ದೇವಸ್ಥಾನ ಸಮಿತಿ, ರುದ್ರಮ್ಮ ಮಹಿಳಾ ತಾಲೂಕು ಸಂಘಟನೆ ಅಧ್ಯಕ್ಷರು, ರವಿಕುಮಾರ್ ಛಲವದಿ ಮಹಾಸಭಾ ತಾಲೂಕ ಅಧ್ಯಕ್ಷರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುಂಡೇರಿ ರೇಖಾ ನಾಗರಾಜಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರು ವಹಿಸಿಕೊಂಡರು. ನವಜೀವನ ಸಮಿತಿ ಸದಸ್ಯರು, ಕುಟುಂಬ ವರ್ಗದವರು ಸಾರ್ವಜನಿಕ ಸಜ್ಜನ ಬಂಧುಗಳು ಕಾರ್ಯಕರ್ತರು ಉಪಸ್ಥಿತರಿದ್ದರು. ಯೋಜನಾಧಿಕಾರಿ ವಸಂತ್ ಸ್ವಾಗತಿಸಿದರು ಪ್ರಭಾಕರ್ ಹೊಂದಿಸಿದರು ಜನಜಾಗೃತಿ ಯೋಜನಾಧಿಕಾರಿ ನಾಗರಾಜ್ ನಿರೂಪಣೆ ಮಾಡಿದರು.
