ಚಿಕ್ಕಮಗಳೂರು ಜಿಲ್ಲೆಯ ನವಜೀವನ ಪೋಷಕರ ಸಭೆಯನ್ನು ಜನಜಾಗೃತಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ ಪಾಯಸ್ ಉದ್ಘಾಟಿಸಿದರು. ನವಜೀವನ ಪೋಷಕರ ತರಬೇತಿ ಕಾರ್ಯಾಗಾರದ ಉದ್ದೇಶವನ್ನು ಜಿಲ್ಲಾ ನಿರ್ದೇಶಕರಾದ ಪ್ರಕಾಶ್ ರಾವ್ ಪ್ರಾಸ್ತಾವಿಕವಾಗಿ ತಿಳಿಸಿದರು. ಜನಜಾಗೃತಿ ವೇದಿಕೆಯ ಕಾರ್ಯಕ್ರಮದಲ್ಲಿ ನವಜೀವನ ಪೋಷಕರ ಮದ್ಯವರ್ಜನ ಶಿಬಿರದಲ್ಲಿ ಅನುಷ್ಠಾನ ಮಾಡಬೇಕಾದ ನಿಯಮಗಳು, ಶಿಬಿರದಲ್ಲಿ ಪೋಷಕರ ಪಾತ್ರ, ಶಿಬಿರದಲ್ಲಿ ನವಜೀವನ ಸಮಿತಿ ರಚನೆ, ನವಜೀವನ ಸಮಿತಿ ವಾರದ ಸಭೆ, 6 ತಿಂಗಳ ನಂತರ ಮಾಸಿಕ ಸಭೆ, ಮನೆ ಬೇಟಿ, ಸ್ವ ಉದ್ಯೋಗ, ಸ್ವ ಸಹಾಯ ಸಂಘಗಳ ರಚನೆ ಅಥವಾ ಸೇರ್ಪಡೆ, ಕಾರ್ಯಕ್ರಮಕ್ಕೆ ಬೇಟಿ ನೀಡುವಾಗ ದೊರಕುವ ಗೌರವಧನ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ತಂಬಾಕು ವಿರೋಧಿ ಕಾರ್ಯಕ್ರಮ, ಮಾದಕ ವಸ್ತು ವಿರೋಧಿ ದಿನ ಕಾರ್ಯಕ್ರಮ, ನವಜೀವನೋತ್ಸವ ಕಾರ್ಯಕ್ರಮ ಮತ್ತು ನವಜೀವನ ಸಮಿತಿ ಬಲವರ್ಧನೆ ಬಗ್ಗೆ ನಿದರ್ಶನಗಳ ಸಹಿತ ಮಾಹಿತಿ ಮಾರ್ಗದರ್ಶನ ನೀಡಿದರು. ತರಬೇತಿಯಲ್ಲಿ ಭಾಗವಹಿಸಿದ ನವಜೀವನ ಪೋಷಕರಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು
