ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಕೋಲಾರ ಜಿಲ್ಲೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಕೋಲಾರ ಜಿಲ್ಲೆ ಸಂಯುಕ್ತ ಆಶ್ರಯದಲ್ಲಿ ನಡೆದ ಕೋಲಾರ ಜಿಲ್ಲೆಯ ನವಜೀವನ ಸಮಿತಿ ಪೋಷಕರ ತರಬೇತಿ ಕಾರ್ಯಾಗಾರವನ್ನು ಕೋಲಾರ ಜಿಲ್ಲಾ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣ ಕೋಲಾರದಲ್ಲಿ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಗಣ್ಯಮಾನ್ಯರನ್ನು ಕೋಲಾರ ಯೋಜನಾ ಕಛೇರಿಯ ಮಾನ್ಯ ಯೋಜನಾಧಿಕಾರಿಗಳಾದ ಶ್ರೀಯುತ ಸಿದ್ದಗಂಗಯ್ಯ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯಮಾನ್ಯರನ್ನು ಸ್ವಾಗತ ಮಾಡಿದರು. ನವಜೀವನ ಸಮಿತಿ ಪೋಷಕರ ತರಬೇತಿ ಕಾರ್ಯಾಗಾರದ ಧ್ಯೇಯೋದ್ದೇಶದ ಬಗ್ಗೆ ಹಾಗೂ ಪ್ರಾಮುಖ್ಯತೆಯ ಬಗ್ಗೆ ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆಯ ಮಾನ್ಯ ಯೋಜನಾಧಿಕಾರಿಗಳಾದ ಶ್ರೀಯುತ ತಿಮ್ಮಯ್ಯನಾಯ್ಕ ರವರು ಎಲ್ಲಾ ನವಜೀವನ ಸಮಿತಿ ಪೋಷಕರಿಗೆ ಮಾಹಿತಿಯನ್ನು ನೀಡಿದರು. ವೇದಿಕೆಯ ಮೇಲೆ ಹಾಸೀನರಾಗಿದ್ದ ಎಲ್ಲಾ ಗಣ್ಯಮಾನ್ಯರುಗಳಿಂದ ದೀಪವನ್ನು ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆಯನ್ನು ನೀಡಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಕೋಲಾರ ಜಿಲ್ಲೆಯ ಜಿಲ್ಲಾ ಅಧ್ಯಕ್ಷರಾದ ಶ್ರೀಯುತ ವಾಸುದೇವ್ ರವರು ಕಾರ್ಯಕ್ರಮದ ಕುರಿತು ಶುಭ ಹಾರೈಕೆಯ ನುಡಿಗಳನ್ನು ನುಡಿದರು. ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಕೇಂದ್ರ ಬಿಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಬೆಳ್ತಂಗಡಿ ರಾಜ್ಯ ಕಾರ್ಯದರ್ಶಿಗಳು ಹಾಗೂ ಮಾನ್ಯ ಗೌರವಾನ್ವಿತ ಪ್ರಾದೇಶಿಕ ನಿರ್ದೇಶಕರಾದ ಸನ್ಮಾನ್ಯ ಶ್ರೀಯುತ ವಿವೇಕ್ ವಿ. ಪೈಸ್ ರವರು ಕೋಲಾರ ಜಿಲ್ಲೆಯ ನವಜೀವನ ಸಮಿತಿಯ ಪೋಷಕರು ಹಾಗೂ ಕೋಲಾರ ಜಿಲ್ಲಾ ವ್ಯಾಪ್ತಿಯ 08 ಯೋಜನಾ ಕಛೇರಿಗಳ ಯೋಜನಾಧಿಕಾರಿಗಳಿಗೆ ಜನಜಾಗೃತಿ ವೇದಿಕೆಯ ರೂಪುರೇಷೆಗಳನ್ನು ಹಾಗೂ ನವಜೀವನ ಸಮಿತಿಗಳ ಸಮರ್ಪಕ ಅನುಷ್ಠಾನಕ್ಕೆ ಪೂರಕವಾದ ಮಾಹಿತಿ ಹಾಗೂ ನವಜೀವನ ಸಮಿತಿಯ ಸಮಗ್ರ ನಿರ್ವಹಣೆಯನ್ನು ಮಾಡುವಲು ಪೂರಕವಾದ ಸಮಗ್ರ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡುವುದರ ಮೂಲಕ ಪೋಷಕರುಗಳಿಗೆ ನವ ಚೈತನ್ಯವನ್ನು ತುಂಬಿದರು. ಕೋಲಾರ ಜಿಲ್ಲೆಯ ಮಾನ್ಯ ಜಿಲ್ಲಾ ನಿರ್ದೇಶಕರಾದ ಶ್ರೀಯುತ ಪದ್ಮಯ್ಯ ರವರು ಕಾರ್ಯಕ್ರಮದ ಯಶಸ್ಸಿನ ಕುರುತು ನುಡಿಗಳನ್ನಾಡುತ್ತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ವಂದನೆಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲಾ ವ್ಯಾಪ್ತಿಯ 6 ಯೋಜನಾ ಕಛೇರಿಗಳ ಮಾನ್ಯ ಯೋಜನಾಧಿಕಾರಿಗಳಾದ ಶ್ರೀಯುತ ಸತೀಶ್.ಹೆಚ್ ರವರು, ಶ್ರೀಯುತ ಸಿದ್ದಗಂಗಯ್ಯ ಟಿ.ಎಸ್ ರವರು, ಶ್ರೀಯುತ ಹರೀಶ್ ಕುಮಾರ್ .ಸಿ ರವರು, ಶ್ರೀಯುತ ಚೇತನ್.ಕೆ ರವರು, ಶ್ರೀಯುತ ಮಾಹದೇವ್ ಮಾಸ್ತಪ್ಪ ನಾಯಕ್ ರವರು, ಶ್ರೀಯುತ ಅನಿಲ್ .ಆರ್ ರವರು ಹಾಗೂ ಕೋಲಾರ ಜಿಲ್ಲೆಯ ಆಡಿಟ್ ಜಿಲ್ಲಾ ಪ್ರಬಂಧಕರಾದ ಸಿದ್ದರಾಜು, ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆಯ ಮೇಲ್ವಿಚಾರಕರಾದ ದರ್ಶನ್ ಎಂ.ಎಸ್ ಹಾಗೂ ಕೋಲಾರ ಜಿಲ್ಲಾ ಕಛೇರಿ ವ್ಯಾಪ್ತಿಯ 08 ಯೋಜನಾ ಕಛೇರಿಗಳಲ್ಲಿ ಆಯ್ಕೆಯಾದ ನವಜೀವನ ಸಮಿತಿ ಪೋಷಕರುಗಳು ಹಾಜರಿದ್ದರು
